Sunday, May 22, 2022

ಅಯ್ಯೋ; ಹೀಗೇಕೆ ಮಾಡಿದೆ ಟಿಟ್ಟಿಭ?

Follow Us

ಕರ್ನಾಟಕದಲ್ಲಿ ಸಾಮಾನ್ಯವಾಗಿ ಕೆಂಪು ಮತ್ತು ಹಳದಿ ಟಿಟ್ಟಿಭಗಳು ಕಾಣಸಿಗುತ್ತವೆ. ಕಂದು ಬೆನ್ನು, ಕಪ್ಪು ಗಲ್ಲ ಇದರ ನಡುವೆ ಬಿಳಿಯ ಪಟ್ಟೆ, ಹೊಟ್ಟೆಯ ಭಾಗವೂ ಬಿಳಿ. ಹಳದಿ ಕಾಲುಗಳನ್ನು ಹೊಂದಿರುತ್ತದೆ. ದಕ್ಷಿಣ ಏಷ್ಯಾದಲ್ಲಿ ಆರು ಬಗೆಯ ಟಿಟ್ಟಿಭಗಳು ಕಂಡುಬರುತ್ತವೆ.


     ಪಕ್ಷಿನೋಟ 47   


♦ ಕಲ್ಗುಂಡಿ ನವೀನ್

ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರಗಳು: ಜಿ.ಎಸ್. ಶ್ರೀನಾಥ
newsics.com@gmail.com


 ದೂ ರದಿಂದ ಕೇಳಿಬರುವ ಜೋರಾದ ಕೂಗು “ಡಿಡ್‍ ಹಿ ಡು ಇಟ್‍!?” ಎಂಬುದು ಮನುಷ್ಯನನ್ನು ಯಾಕೆ ಪರಿಸರ ನಾಶ ಮಾಡಿದೆ ಎಂದು ಕೇಳುವಂತಿದೆ. ಈ ಕೂಗು ಟಿಟ್ಟಿಭ ಹಕ್ಕಿಯದ್ದು. ಈ ಹಕ್ಕಿ ಕೂಗುವುದೇ ಹೀಗೆ! ಇದು ಮಾನವನ ಆಂತರ್ಯವನ್ನು ಚುಚ್ಚಿ ಚುಚ್ಚಿ ಪ್ರಶ್ನಿಸುತ್ತದೆ. ಇದು ಕೆಂಪು ಟಿಟ್ಟಿಭದ ಕೂಗು. ಆದರೆ, ಪರಿಸರಾಸಕ್ತರಿಗೆ ಅದು ದುಃಖದ ಛಾಯೆಯನ್ನೇ ತರಿಸುತ್ತದೆ.
ಟಿಟ್ಟಿಭಗಳು ನೀರಿನಾಸರೆಯಿಂದ ತುಸುವೇ ದೂರ ಕಂಡುಬರುತ್ತವೆಯಾದರೂ ನೀರಿನಲ್ಲಿ ಆಹಾರ ಹುಡುಕುವ ಪ್ರಭೇದವೂ ಉಂಟು. ದಕ್ಷಿಣ ಏಷ್ಯಾದಲ್ಲಿ ಆರು ಬಗೆಯ ಟಿಟ್ಟಿಭಗಳು ಕಂಡುಬರುತ್ತವೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಕೆಂಪು ಮತ್ತು ಹಳದಿ ಟಿಟ್ಟಿಭಗಳು ಕಾಣಸಿಗುತ್ತವೆ. ಕಂದು ಬೆನ್ನು, ಕಪ್ಪು ಗಲ್ಲ ಇದರ ನಡುವೆ ಬಿಳಿಯ ಪಟ್ಟೆ, ಹೊಟ್ಟೆಯ ಭಾಗವೂ ಬಿಳಿ. ಹಳದಿ ಕಾಲುಗಳನ್ನು ಹೊಂದಿರುತ್ತದೆ.
ಹಳದಿ ಟಿಟ್ಟಿಭಕ್ಕೆ ಕಪ್ಪು ಇಲ್ಲ (ಗಂಡು ಹಕ್ಕಿಯ ಟೋಪಿ ಹೊರತುಪಡಿಸಿ). ಕೊಕ್ಕು ಮುಖಕ್ಕೆ ಸೇರುವಲ್ಲಿನ ಕೆಂಪು (ಅಥವಾ)ಹಳದಿ ಬಣ್ಣದ ಮಾಂಸಲ “ಜೊಂಕಲು” ಎದ್ದು ಕಾಣುತ್ತದೆ. ಇದರಿಂದಲೇ ಕೆಂಪು ಮತ್ತು ಹಳದಿ ಟಿಟ್ಟಿಭ ಎಂಬ ಹೆಸರು ಬಂದಿರುವುದು. ಹಳದಿ, ಹಾಗೂ ಇತರ ಟಿಟ್ಟಿಭಗಳ ಕೂಗು ವಿಭಿನ್ನವಾಗಿರುತ್ತದೆ.

ಕೀಟಗಳೇ ಪ್ರಧಾನವಾದ ಆಹಾರ ಮೃದ್ವಂಗಿಗಳನ್ನೂ ತಿನ್ನುತ್ತವೆ. ಹಾಗಾಗಿ, ಇವು ರೈತನ ಮಿತ್ರ ಎನ್ನಬಹುದು. ಸುಂದರವಾದ ಹಕ್ಕಿಗಳು ಎನ್ನಲಡ್ಡಿಯಿಲ್ಲ. ಉತ್ತರದ ಟಿಟ್ಟಿಭವಂತೂ ಸೌಂದರ್ಯದ ಖನಿ. (ನಾರ್ದರನ್‍ ಲ್ಯಾಪ್ವಿಂಆಗ್‍ ಎಂದು ಗೂಗಲ್ ಮಾಡಿ ನೋಡಿ). ಕೆಂಪು ಟಿಟ್ಟಿಭ ಭಾರತದಾದ್ಯಂತ (ಹಿಮಾಲಯದ ಕೆಲಭಾಗಗಳನ್ನು ಹೊರತುಪಡಿಸಿ) ಹಾಗೂ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಮಾಯನ್ಮಾರ್ ಗಳಲ್ಲಿಯೂ ಕಂಡುಬರುತ್ತದೆಯಾದರೆ, ಹಳದಿ ಈಶಾನ್ಯ ಭಾರತದಲ್ಲಿ ಕಾಣಸಿಗುವುದಿಲ್ಲ. ಪಾಕಿಸ್ತಾನದ ಕೆಲಭಾಗ, ಬಾಂಗ್ಲಾ ಮತ್ತು ಶ್ರೀಲಂಕಾದಲ್ಲಿ ಕಾಣಸಿಗುತ್ತದೆ. ನಮ್ಮಲ್ಲಿ ಎಷ್ಟು ಹಕ್ಕಿಗಳು ರೈತನ ಮಿತ್ರ ಹಾಗೂ ನಾವು ಅವುಗಳಿಗೆ ಏನು ಮಾಡುತ್ತಿದ್ದೇವೆ ಎಂಬುದನ್ನು ತುಸು ಯೋಚಿಸೋಣ. ಇದನ್ನು ನೀವು ಕಂಡರೆ ನಮಗೆ ಬರೆದು ತಿಳಿಸಿ.

ಮತ್ತಷ್ಟು ಸುದ್ದಿಗಳು

Latest News

ಸ್ವಾಮೀಜಿ‌ ಬಾಯಲ್ಲಿದ್ದ ಎಂಜಲು ಅನ್ನ ತಿಂದ ಶಾಸಕ‌ ಜಮೀರ್ ಅಹ್ಮದ್

newsics.com ಬೆಂಗಳೂರು: ಸ್ವಾಮೀಜಿ‌ ಬಾಯಲ್ಲಿದ್ದ ಎಂಜಲು‌ ಅನ್ನವನ್ನು ತೆಗೆಸಿ ಅದನ್ನು ತಿನ್ನುವ ಮೂಲಕ ಶಾಸಕ ಜಮೀರ್ ಅಹ್ಮದ್ ಅತಿರೇಕ ಮೆರೆದಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಈ...

ಕುತುಬ್ ಮಿನಾರ್ ಸಂಕೀರ್ಣ ಉತ್ಖನನ: ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಕೇಂದ್ರ ಸಚಿವ

newsics.com ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಉತ್ಖನನ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ.ಕೆ.ರೆಡ್ಡಿ ಹೇಳಿದ್ದಾರೆ. ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಉತ್ಖನನ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ...

ನನ್ನ ದೇಹದ ಖಾಸಗಿ ಭಾಗದಲ್ಲಿನ ಮಚ್ಚೆ ಬಗ್ಗೆ ಹೇಳಲಿ: ಲೈಂಗಿಕ ಕಿರುಕುಳ ಆರೋಪಕ್ಕೆ ಎಲಾನ್ ಮಸ್ಕ್ ಓಪನ್ ಚಾಲೆಂಜ್

newsics.com ನ್ಯೂಯಾರ್ಕ್: ಖಾಸಗಿ ಜೆಟ್‌ನಲ್ಲಿ ಫ್ಲೈಟ್ ಅಟೆಂಡೆಂಟ್ ಸ್ನೇಹಿತೆ ಎನ್ನಲಾದ ವ್ಯಕ್ತಿ ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಜಗತ್ತಿನ‌ ನಂಬರ್ ಒನ್ ಶ್ರೀಮಂತ ಬಿಲಿಯನೇರ್ ಎಲಾನ್‌ ಮಸ್ಕ್ ಅಲ್ಲಗಳೆದಿದ್ದಾರೆ. ಒಂದು ವೇಳೆ ಲೈಂಗಿಕ ಕಿರುಕುಳ‌ ನೀಡಿದ್ದೇನೆ...
- Advertisement -
error: Content is protected !!