Saturday, April 17, 2021

ಬುದ್ಧ ಪೌರ್ಣಮಿಯ ಈ ದಿನ ವಿರಾಗಿಗೆ ಪ್ರೇಮದೋಲೆ

Dr Shubhashreeprasad
♦ ಡಾ. ಶುಭಶ್ರೀಪ್ರಸಾದ್
response@134.209.153.225
newsics.com@gmail.com

ಹೇಳಬೇಕಿತ್ತು ಇನಿಯ ನೀ
ದೂರ ಸರಿವ ಮುನ್ನ
ಒಮ್ಮೆ ಹೇಳಬೇಕಿತ್ತು ನೀ…

ನನ್ನೊಡನಿದ್ದೂ ಇಲ್ಲದಿಹ
ನಿನ್ನ ಪರಿ
ಇರಿವುದು ಚೀರುವ ಎನ್ನೆದೆಯ

ಇನಿದನಿಯಲಿ ಕರೆದರೂ
ನನ್ನ ಕಾಣದಿಹ ನಿನ್ನ
ಕಣ್ಣಿಗೆ ಕಣ್ಣಿಲ್ಲ

ಕೈಚಾಚಿ ಬಳಸುವಾಗ
ದೂರ ಸರಿಪ ನಿನ್ನ
ಕೈಗಳಲಿ ಹೃದಯವಿಲ್ಲ

ಅದಾವ ಚಣದಲಿ
ದೂರಾದೆ ನನ್ನ ಬಿಟ್ಟು
ಹೇಳದೆ ನಡೆದೆ ನೀ ಸರಿಯೇ

ನನ್ನೊಡಲ ಬೇಗೆ ಬಾನೆತ್ತರದ ಕಿಚ್ಚು,
ಈ ಹೃದಯದೊಲವು‌ ಸಾಗರದ ಹುಚ್ಚು
ಸೋಕದೇ ನಿನ್ನ?

ನಿನ್ನಂತೆ ನಡುರಾತ್ರಿ
ನಡೆದಿದ್ದರೆ ನಾ.. ನಗುತಿತ್ತು
ಸಮಾಜ ಕೇಕೆಹಾಕಿ

ಈಗ ತಿಂಗಳ ನಗೆ ನಿನ್ನ
ಮೊಗದ ಮೇಲೆ
ಜಗ‌ವು ನಿನ್ನ ಚರಣದಲೆ.

ಎಷ್ಟಾದರೂ ನೀ ಗಂಡಸು
ನಡೆಯಬಹುದು
ಎಲ್ಲೂ… ಎಲ್ಲೆಲ್ಲೂ…

ಕರೆಯೊಯ್ಯಬಾರದಿತ್ತೇ
ನನ್ನ ನಿನ್ನ ಹಾದಿಗೇ, ನಿನ್ನೊಡನೆಯೇ
ನಿನ್ನ ಹೆಜ್ಜೆಗುರುತು ಮೂಡುವೆಡೆಗೆ

ತುಡಿದು ಮಿಡಿವ ಜೀವವಿದು
ಭುವಿಯಲ್ಲೆ ನಾ
ಅನಂತದೆಡೆಗೆ ಸಾಗಿದೆ
ನೀ ಆಗಿ ವಿರಾಗಿ…

ಮತ್ತಷ್ಟು ಸುದ್ದಿಗಳು

Latest News

ತ್ರಿಬಲ್ ಟಿ ಸೂತ್ರ ಪಾಲನೆಗೆ ಪ್ರಧಾನಿ ಮೋದಿ ಸಲಹೆ

newsics.com ನವದೆಹಲಿ: ಇಂದಿಲ್ಲಿ (ಏ.17) ನಡೆದ ಕೊರೋನಾ ಹಿನ್ನೆಲೆಯ ಮಹತ್ವದ ಸಭೆಯ ಬಳಿಕ ಪ್ರಧಾನಿ ಮೋದಿಯವರು ತ್ರಿಬಲ್ ಟಿ ಸೂತ್ರ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ. ದೇಶದಲ್ಲಿ ಅತಿಯಾಗಿ ಹೆಚ್ಚುತ್ತಿರುವ ಕೊರೋನಾ...

ಆಮ್ಲಜನಕ‌ ಕೊರತೆ: ಐಸಿಯುನಲ್ಲಿದ್ದ ಮೂವರು ಕೊರೋನಾ ಸೋಂಕಿತರು ಸಾವು

newsics.com ಲಖನೌ (ಉತ್ತರ ಪ್ರದೇಶ): ಆಮ್ಲಜನಕದ ಕೊರತೆಯಿಂದಾಗಿ ಮೂವರು ಕೋವಿಡ್ ರೋಗಿಗಳು ಶನಿವಾರ ಸಾವನ್ನಪ್ಪಿದ್ದಾರೆ. ಮೃತರು ಗೋಮ್ಟಿನಗರದ ಡಾ. ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಐಸಿಯುಗೆ ದಾಖಲಾಗಿದ್ದರು. ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು,...

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ ಮಾರಾಟದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ...
- Advertisement -
error: Content is protected !!