- ವಿಷ್ಣು ಭಟ್ ಹೊಸ್ಮನೆ
ಓ
ನೆನಪೇ
ನನ್ನೊಡನೆ
ನಿನ್ನ ಚದುರಂಗ
ಗೆಲುವೂ ಇಲ್ಲ, ಸೊಲೂ ಇಲ್ಲ
ಹಸಿಮಣ್ಣಿಗೆ ಹೊಡೆದ ಕಲ್ಲು
ಹಾಯಾಗಿ ಬಂದು
ಮನಕೆ ಕಚಗುಳಿ
ನೋವಾಗಿ ಹೊರಟು
ಕುಸಿದ ಗೋಪುರ
ನೆಸರನಿಲ್ಲದ ಜಗ
ಕೆಸರಿಲ್ಲದ ಹೊಲ
ಬೆಲೆಯಿಲ್ಲದ ಧನ- ಧನಕೊಳ್ಳಲಾಗದ ನಂಟು
ನೆನಪುಂಟು
ಕದ್ದಿಲ್ಲ-ಸಿಕ್ಕಿಲ್ಲ- ದೃಶ್ಯ –ಅದೃಶ್ಯಗಳಲ್ಲಿ
ಪತ್ಯವಾಗಿ ಬಂದೆ
ಆಗಸದಲ್ಲೂ ಚಂದ್ರ- ಸಾಗರದಲ್ಲೂ ಚಂದ್ರ
ಕೈಗೆ ಸಿಗದ ಚಂದ
ಕಣ್ಣ ಕಟ್ಟುತ್ತೀಯ
ಒಂದು ಎರಡಾಗಿ-ಮೂರಾಗಿ ಮುಂದೆ ಮುಂದೆ
ನಿರಂತರ – ಚಿರ
ಉಸಿರುಗಟ್ಟುವ ಬಿರುಗಾಳಿ
ಶೂನ್ಯದಲ್ಲಿ ಅನಂತವಾಗಿ
ನನ್ನೊಡನೆ
ನಿನ್ನ ಚದುರಂಗ
ನಗಬೇಕೋ – ಅಳಬೇಕೋ?
ಮಿಥ್ಯವಾಗದು
ನೆನಪೇ
ನೀ ನಿತ್ಯಸತ್ಯ.