- ರಾಜ್ ಆಚಾರ್ಯ
ಮೊದಲಿನಂತಿಲ್ಲ ಸಖೀ
ಮೈಖಾನೆಯ ಮೆಹೆಫಿಲು
ಮುಕ್ಕಾದ ಶೀಶೆಯ ಮದಿರೆಯಮಲು
ಕೊಂಚ ಅದಲು ಬದಲು
ಗೆಜ್ಜೆಗೆ ಘಲಿರಿಗೆ ಹೆಜ್ಜೆ
ಹಾಕುವ ಮೆಹಜಬೀನ
ಇನ್ನೆಲ್ಲಿ ಅಂಥಹ ಬಿಸುಪಿನಾಲಿಂಗನ
ಖವ್ವಾಲಿಯ ಖಯಾಲಿ
ಮಜದ ಜವಾನಿಯ ಮೇಜವಾನಿಯಲಿ
ಜೊತೆಗೂಡುತ್ತಿದ್ದ ಹಳೆಯ
ಗೆಳೆಯ-ಗೆಳತಿಯರ ಚಹರೆಗಳು
ಗುರುತು ಸಿಗದೆ ಗೋಜಲು
ಗೂಡು ಕಟ್ಟಿದೆ
ಅಲ್ಲಲ್ಲಿ ಅಳಿದುಳಿದ ಅವ-ಶೇಷಗಳ
ಕಾಲನೇಟಿಗೆ ಎಲ್ಲವೂ
ಒಂದು ದಿನ ಭಗ್ನ
ನೆನಪುಗಳಲಿ ನಾನು ನಿಮಗ್ನ