Wednesday, December 8, 2021

ಕೊರೋನಾ…

Follow Us

♦ ಅಬ್ಬಾಸ ಮೇಲಿನಮನಿ
response@134.209.153.225′
newsics.com@gmail.com

 

ಕೊರೋನಾ ಕೊರೋನಾ ನಿನ್ನಿಂದ ಜಗವೇ ತಲ್ಲಣ
ಹಾಡುತಿರುವೆ ಚರ್ಮಗೀತೆ
ಬರೆದು ಮರಣ ಶಾಸನ /

ಮಹಾಮಾಯೆ ನಿನ್ನ ತ್ರಾಣ ಅದೆಷ್ಟು ನಿಷ್ಕರುಣ
ತಗುಲಿದರೆ ನಿನ್ನ ಸೋಂಕು
ದಿಕ್ಕೆಡುವುದು ತನುಮನ /

ಜೀವತಂತು ತಳಮಳ
ನಿಷ್ಪಾಪಿ ಘೋರ ಮರಣ
ಎಲ್ಲಿದ್ದೆ ಇಲ್ಲಿತನ?
ಹೇಳೀಗ ಬಂದ ಕಾರಣ /

ಕರಿಯ ಬಿಳಿಯ ಎನ್ನದೆ
ಜಾತಿ ಧರ್ಮ ಎಣಿಸದೆ
ಶಕುನಕೂ ಸಿಕ್ಕದೆ
ಮಂತ್ರ ತಂತ್ರಕೂ ಮಣಿಯದೆ /

ಸವಾಲಾದೆ ದೇವರಿಗೂ
ಅರ್ಭಟ ರುದ್ರ ನರ್ತನ
ಮಂದಿರ-ಮಸೀದಿ-ಚರ್ಚು
ದ್ವಾರ-ಬಸದಿ ಮೌನ /

ಉಡುಗಿಸಿದೆ ನಾ..ನೀ..
ಎನ್ನುವರ ಜಂಘಾಬಲ
ಸಿದ್ಧ ಬುದ್ಧ ಪ್ರಬುದ್ಧರ
ಮನೋಧಾರ್ಷ್ಟ್ಯ ಕಲವಿಲ /

ಸಿರಿ ಅಮಲು ಪದವಿ ತೆವಲು
ಬ್ರಹ್ಮಾಂಡ ಭ್ರಮೆಯ ಜಾಲ
ತುಂಡರಿಸಿ ದರ್ಶಿಸಿದೆ
ಜೀವಾತ್ಮ ಶೋಧ ಬಯಲ /

ಕಾಮಾಲೆ ಕಣ್ಣುಗಳಿಗೆ
ನಾಗರಗಳ ನಾಲಿಗೆಗೆ
ಎಚ್ಚರದ ಪಾಠವಾದೆ
ಹಗೆತನದ ಒಡಲಿಗೆ /

ಲೋಕವಿದು ಬಾಳಲಿ
ನೆಮ್ಮದಿಯಲಿ ಅನುದಿನ
ಕೊಲ್ಲೋ ಆಟ ಸಾಕಿನ್ನು
ಹೊರಟು ಹೋಗೇ ಕೊರೋನಾ…

 

ಮತ್ತಷ್ಟು ಸುದ್ದಿಗಳು

Latest News

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...

ಭಾರೀ ಸದ್ದು ಕೇಳಿಸ್ತು… ಮೂವರು ಜಿಗಿದರು… ಬೆಂಕಿ ಜೋರಾಯ್ತು…

newsics.com ಊಟಿ(ತಮಿಳುನಾಡು): ನೋಡ ನೋಡುತ್ತಿದ್ದಂತೆ ಹೆಲಿಕಾಪ್ಟರ್‌ವೊಂದು‌ ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿಯಲಾರಂಭಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ದೊಡ್ಡ ಸದ್ದು ಕೇಳಿಸಿತು. ತಕ್ಷಣ ಹೊರಬಂದು‌...
- Advertisement -
error: Content is protected !!