Monday, April 12, 2021

ಸುಂದರ ನಾಳೆಗಾಗಿ…

♦ ಮಹೇಶ್ ಹೆಗಡೆ
response@134.209.153.225
newsics.com@gmail.com

ಭೂಮಂಡಲದೊಳು ಬದುಕೆನ್ನುವುದು
ಅವನಿಯೊಳಲ್ಲದೇ ಬೇರಿಲ್ಲ…
ಬಾಹ್ಯಾಕಾಶದಿ ಯಾವ ಗ್ರಹದಲೂ
ಹುಡುಕಿದರೂ ಹನಿ ನೀರಿಲ್ಲ..!!

ಉಸಿರಾಟಕೆ ಇಲ್ಲಿ ಶುಭ್ರ ಗಾಳಿಯು
ಪರಿಸರದಲ್ಲಿ ವ್ಯಾಪಿಸಿದೆ…
ಹರಿಯುವ ಶುದ್ಧದ ನೀರೇ ಭುವಿಯಲಿ
ಜೀವಿತವನು ತಾನುಳಿಸುತಿದೆ..!!

ಪರಿಸರ ನಾಶವ ಮಾಡುತಲಿಹನು
ಅಭಿವೃದ್ಧಿಯ ಹೆಸರಲಿ ಮಾನವನು…
ಮರವನು ಕಡಿಯುತ ಜಲವನು ಹೀರುತ
ವಿನಾಶಕೆ ಮುನ್ನುಡಿ ಬರೆದಿಹನು…!!

ಸ್ವಚ ಗಾಳಿಗೆ ಹೊಗೆಯದು ತುಂಬಿತು
ನದಿಯನು ಸೇರಿತು ಮಲಿನಗಳು…
ನಲುಗಿ ಹೋಗಿವೆ ಬದುಕಲು ಆಗದೇ
ಪಶು ಪಕ್ಷಿಗಳಾದಿ ಜೀವಿಗಳು…!!

ಇಂಗಾಲವ ಹೀರುತ ಆಮ್ಲವ ನೀಡುವ
ಮರಗಳೇ ಇಲ್ಲಿ ಇಲ್ಲದಿರೆ…
ಹಚ್ಚ ಹಸಿರಿನ ಮೇದಿನಿಯಾದಳು
ರೋದನದೊಳು ತಾ ಬರಡು ಧರೆ…!!

ಎಲ್ಲಿಯೂ ಇಲ್ಲದ ಪರಿಸರ ನಮಗೆ
ದೇವರೇ ಇತ್ತಿಹ ಕೊಡುಗೆಯಿದು…
ವಿನಾಶದ ಮೊದಲೇ ತಿದ್ದಿಕೊಳ್ಳಲು
ಒದಗಿ ಬಂದಿಹುದು ಸಮಯವಿದು..!!

ಗಿಡಮರ ಬೆಳೆಸುತ ಭೂಮಿತಾಯಿಗೆ
ಹಸಿರಿನ ಸೀರೆಯ ಉಡಿಸೋಣ…
ನವೀಕರಿಸುವ ಇಂಧನ ಮೂಲವ
ಬಳಸುತ ಪರಿಸರ ಉಳಿಸೋಣ…!!

ಪ್ಲಾಸ್ಟೀಕು ಕಸಗಳ ಎಸೆಯದೇ ನಾವು
ಕಾಪಾಡಬೇಕಿದೆ ಸ್ವಚ್ಚತೆಯ…
ಕೊಳಚೆ ನೀರನು ನದಿಗಳಿಗುಣಿಸಿ
ಮಾಡದಿರೋಣ ಮಲಿನತೆಯ…!!

ವರುಷಕ್ಕೊಮ್ಮೆ ಆಚರಿಸದಿರಿ
ಪರಿಸರ ದಿನವನು ತೋರಿಕೆಗೆ…
ಪರಿಸರ ದಿನವಾಗಲಿ ಪ್ರತಿದಿನ ಕೂಡಾ
ಸುಂದರ ನಾಳೆಯ ದಿನಗಳಿಗೆ…!

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!