♦ ಕೆ. ಪ್ರಭಾಕರನ್
ಮಲಯಾಳ ಕವಿತೆ-“ಪೋಯ ಜನ್ಮತ್ತಿಲ್”
ಮೂಲ ಲೇಖಕರು: ಜಿಸ್ಮಿ ಪ್ರಮೋದ್
newsics.com@gmail.com
ಅಂದು…
ನಾವು ಒಂದಾಗಿ ಕಡಲ ತೀರದಲ್ಲಿ
ಕೈಗಳ ಪೋಣಿಸಿಕೊಂಡು ದೃಷ್ಟಿಯೊಂದಿಗೆ ದೃಷ್ಟಿ
ಸೇರಿಸಿಕೊಂಡು ನಿಂತಿದ್ದೆವು…
ಆಗಸದಂಚಿನಲ್ಲಿ ಮೋಡಗಳು ಕಡು ಕೆಂಪು ಚಿತ್ರಗಳನ್ನು ಒಟ್ಟಿಗೆ
ಬಣ್ಣವೇರಿಸಿಕೊಂಡು ಪುನರ್ ಚಿತ್ರಿಸಲಾಗಿತ್ತು…
ತಣ್ಣನೆಯ ಮುಸ್ಸಂಜೆಯಲಿ ನೆತ್ತಿಯನ್ನು ಮುತ್ತಿಟ್ಟೆಚ್ಚರಿಸಿದ
ಪುಟಾಣಿ ಮಳೆಹನಿಗಳನ್ನು ತಟ್ಟಿ ಚದುರಿಸಿ
ಮರೆಯಾದ ನೋಟಗಳನ್ನು ಮತ್ತೆ ವಶಪಡೆಸಿಕೊಂಡೆವು…
ಅಬ್ಬರಿಸಿಕೊಂಡೇರಿ ಬಂದ ತೆರೆಯಿಂದಾಗಿ ಮುಗ್ಗರಿಸಿ
ಬೀಳದಿರಳು ಒಟ್ಟಾಗಿ ಮರಳಲ್ಲಿ ಉಗುರು ಬೆರಳ ಹುದುಗಿಸಿದ ಆ ಗುಂಡಿಗಳಲ್ಲಿ
ತುಂಬಿಕೊಳ್ಳುವ ಅಲೆಗಳನ್ನು ನೋಡುತ್ತಾ ನಿಂತುಕೊಂಡಿದ್ದೆವು…
ಗೂಡು ಸೇರಲು ಹೊರಟ ಗಿಳಿಹಿಂಡು ದಾರಿ ತಪ್ಪಬಾರದೆಂದು
ಹೇಳಿ ಕೈಬೀಸಿ ಕಳುಹಿಸಿಕೊಟ್ಟಿದ್ದೆವು…
ಅಲೆಗಳೊಂದಿಗೆ ತೀರಗಳೆಡೆಗೂ
ನಂತರ ತಿರುಗಿ ಕಡಲಿನೆಡೆಗೂ
ಓಟದ ಸ್ಪರ್ಧೆಗಿಳಿದಿತ್ತು…
ಸೇರಿಸಿಟ್ಟು ಬರೆದಿದ್ದ ಹೆಸರ ಮೇಲೆ
ಅಲೆಗಳು ಬಂದು ಅಪ್ಪಳಿಸಿದಾಗ,
ಜಗಳವಾಡಿದ ಆ ಹಾದಿಯ ನಿರ್ಗುಳ್ಳೆಗಳನ್ನು
ಒಡೆದುಹಾಕಿ ಹಗೆಯ ಸಾಧಿಸಿದ್ದೆವು…
ಮತ್ಯಾಕೆ ನಾನೊಮ್ಮೆ
ಹಿಂತಿರುಗಿನೋಡುವಷ್ಟರಲಿ, ನೀಯೆನ್ನನು
ಒಂಟಿಯನ್ನಾಗಿಸಿ ಏನೂ ಮಾತನಾಡದೆ
ಕಡಲಿನೆಡೆಗೆ ಇಳಿದು ನಡೆದೇ ಬಿಟ್ಟೆಯಲ್ಲ…?
ಇಂದು…
ಈ ಜನ್ಮದಲ್ಲೂ,
ನಾನು ಇಲ್ಲಿ ಈ ತೀರದಲ್ಲಿ ಅಲೆಗಳಿಂದ
ತೊಯ್ದು ತೊಪ್ಪೆಯಾಗುತ್ತಾ ಒಂಟಿಯಾಗಿ ಕುಳಿತ್ತಿದ್ದೇನೆ…
ಹಿಂತಿರುಗಿ ಬಂದು ನೀಯೆನ್ನ
ಕೈಹಿಡಿದುಕೊಳ್ಳುತ್ತಿಯಾ ಎಂದು ನೆನೆಪಿಸಿಕೊಂಡು…