♦ ಚಂದ್ರು ಪಿ ಹಾಸನ್
newsics.com@gmail.com
ಮಮತೆಯ ಮಡಿಲಿಗೆ
ಪದಗಳಲ್ಲಿ ಬಣ್ಣಿಸಲಾಗದು
ತಾಯಿಯ ಒಲವಿಗೆ
ಉಡುಗೊರೆ ಸಲ್ಲದು
ದೇವರಿಗೆ ದೇವರುಗಳೇ
ಅಮ್ಮನು ಆಗಿರುವಾಗ
ನಾನೇನು ನೀಡಲೇಳೇ
ಒಲವಿನ ಉಡುಗೊರೆ
ಮಾಂಸದ ಮುದ್ದೆಯನ್ನು
ಗರ್ಭದಲ್ಲಿ ಇರಿಸಿದೆ
ನವಮಾಸಗಳು ನನ್ನನ್ನು
ಪಾಲಿಸಿ ಪೋಷಿಸಿದೆ
ಜಗತ್ತಿಗೆ ಪರಿಚಯಿಸಿದೆ
ಜೀವನ ಕಾಯ್ದಿರಿಸಿದೆ
ಒಲವಿನ ವಾತ್ಸಲ್ಯದಲ್ಲಿ
ಬಾಳಿಗೆ ಆಸರೆಯಾದೆ
ಅಮ್ಮ ಎಂಬ ಪದದಲ್ಲಿ
ಎಲ್ಲಾ ಶಕ್ತಿ ತುಂಬಿದೆ
ನಿನ್ನಯ ಹಾರೈಕೆಯಲ್ಲಿ
ನನ್ನ ಈ ಜೀವನವಿದೆ
ಅಮ್ಮ ಅಮ್ಮ ಓ ನನ್ನಮ್ಮ
ಗುರುವಾಗಿ ನನ್ನನ್ನು ತಿದ್ದಿದೆ
ಹಸಿದಾಗ ಅನ್ನ ನೀಡಿದೆ
ಪ್ರೀತಿಧಾರೆ ಸುರಿಸಿ ಬೆಳೆಸಿದೆ
ವಾತ್ಸಲ್ಯದ ಗುರುತುಗಳೇ
ನನ್ನ ಹಾಡಿಗೆ ಶಕ್ತಿ ತಂದಿದೆ
ಮಡಿಲಲ್ಲಿ ಕಳೆದ ಕ್ಷಣಗಳೇ
ರಾಗಭಾವ ತುಂಬಿ ಹಾಡಿದೆ
ನಿನ್ನ ತ್ಯಾಗಕ್ಕೆ ವಾತ್ಸಲ್ಯಕ್ಕೆ
ನಾಜೀವನ ಮುಡಿಪಾಗಿರಿಸಿರೇ
ಕರುಣಿಸಿದ ಬೇಡದೆ ದೇವರು
ನನಗೆ ಒಲವಿನ ಉಡುಗೊರೆ