Saturday, January 23, 2021

ಹೊಸ ವರ್ಷದ ಆಶಯ

ಹೊಸವರ್ಷವೆಂಬ ನವಭಾವದ ಬೆನ್ನೇರಿ
ಸಾಗಲಿ ಜೀವನದ ನಿರಂತರ ಸವಾರಿ
ಕಲಿಯುತ ತಿಳಿಯುತ ಬಾಳಿನ ಸರಿದಾರಿ
ಆಗಲಿ ಸರ್ವರ ಬಾಳು ಚೇತೋಹಾರಿ…

♦ ಪ್ರಕಾಶ ಲಕ್ಕೂರ್, ಬೆಂಗಳೂರು
newsics.com@gmail.com


 ಹೊ ಸವರ್ಷವೆಂಬ ನವೋಲ್ಲಾಸದ ತಂಗಾಳಿ
ಮುದಗೊಳಿಸಲಿ ಮೈ-ಮನಸಿನ ಕರಾವಳಿ
ತಗ್ಗುತ ಕುಗ್ಗುತ ಈ ವೈರಾಣುವಿನ ಹಾವಳಿ
ಎಲ್ಲೆಡೆ ಮೂಡಲಿ ಭರವಸೆಯ ಪ್ರಭಾವಳಿ


ಹೊಸವರ್ಷವೆಂಬ ನವೋದಯದ ಕಿರಣ

ಆಗಲಿ ಅಂತರಂಗವ ಬೆಳಗುವ ಹೊಂಗಿರಣ
ತಿದ್ದುತ ತೀಡುತ ಪ್ರಕೃತಿಯ ರಂಗಾಯಣ
ಹೈರಾಣಾದ ಮನುಕುಲಕೆ ತರಲಿ ಆಶಾಕಿರಣ


ಹೊಸವರ್ಷವೆಂಬ ನವಚೈತನ್ಯದ ಜತೆಗೆ

ಜೀವನಾನ್ವೇಷಣೆ ಬೆಳೆಯಲಿ ಗಮ್ಯದೆಡೆಗೆ
ಬೀಳುತ ಮೇಲೇಳುತ ಅಳುಕದೆ ಅಡೆತಡೆಗೆ
ನಡೆಯಲಿ ಪಯಣ ಸಾರ್ಥಕ ಬದುಕಿನೆಡೆಗೆ

ಹೊಸವರ್ಷವೆಂಬ ನವಭಾವದ ಬೆನ್ನೇರಿ
ಸಾಗಲಿ ಜೀವನದ ನಿರಂತರ ಸವಾರಿ
ಕಲಿಯುತ ತಿಳಿಯುತ ಬಾಳಿನ ಸರಿದಾರಿ
ಆಗಲಿ ಸರ್ವರ ಬಾಳು ಚೇತೋಹಾರಿ

ಮತ್ತಷ್ಟು ಸುದ್ದಿಗಳು

Latest News

ತುಪ್ಪದ ಬೆಡಗಿ ರಾಗಿಣಿ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆ

Newsics.com ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಇಂದು ಪರಪ್ಪನ ಅಗ್ರಹಾರ ಜೈಲ್ಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಅವರ ವಕೀಲರ ಕೈ ಸೇರಿದ್ದು,...

ಕೊರೋನಾ ಮಾರ್ಗ ಸೂಚಿ ಉಲ್ಲಂಘನೆ: ವಾಟಾಳ್ ವಿರುದ್ದ ಎಫ್ ಐ ಆರ್

Newsics.com ಬೆಂಗಳೂರು: ನಗರದಲ್ಲಿ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಡಿಸೆಂಬರ್ 5, 2020ರಂದು ನಗರದ...

ಶಿವಮೊಗ್ಗ ದುರಂತ: ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

Newsics.com ಬೆಂಗಳೂರು: ದೇಶವನ್ನು ನಡುಗಿಸಿರುವ ಶಿವಮೊಗ್ಗ ಸಮೀಪದ  ಹುಣಸೋಡು ಸ್ಫೋಟ ಸಂಭವಿಸಿದ ಪ್ರದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಭೇಟಿ ನೀಡಲಿದ್ದಾರೆ. ದುರಂತದಲ್ಲಿ ಐದು ಮಂದಿ ಮೃತಪಟ್ಟಿರುವುದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಶಿವಮೊಗ್ಗ ನಗರದಿಂದ ಕೇವಲ ಎಂಟು ಕಿಲೋ...
- Advertisement -
error: Content is protected !!