Monday, April 12, 2021

ಅಪ್ಪನಿಗೇನು ಹೇಳಲಿ?

♦ ಡಾ.ಶುಭಶ್ರೀಪ್ರಸಾದ್ ಮಂಡ್ಯ
 response@134.209.153.225
 newsics.com@gmail.com

 

ಅಪ್ಪನಿಲ್ಲದ ಆಗಸದೆ
ಮಿಂಚುವುವೆ ತಾರೆಗಳು?
ನಕ್ಕಾವೆ ಸೂರ್ಯ ಚಂದ್ರರು?

ಮೊದಲು ಮಡಿಲಿನಲಿ ಮತ್ತೆ ತೋಳಿನಲಿ,
ಬೆನ್ನಿನ ಮೇಲೆ ಕೂಸುಮರಿ,
ಕೊನೆತನಕ ಮೆರವಣಿಗೆಯಂಬಾರಿ

ತನ್ನೆಲ್ಲ ಕಷ್ಟಗಳ
ಒಳಗೊಳಗೇ ನುಂಗಿ
ತಣ್ಣಗೆ ನಗುವ ಅಚಲ ಹಿಮಾಲಯ

ರೆಕ್ಕೆ ಇರದ ಪುಟ್ಟ ಹಕ್ಕಿಗಳ
ಬೆಚ್ಚನೆಯ ಎಲೆಯೊಳಗಡಗಿಪ
ಬಿಸುಪಿನ ವಿಶಾಲ ವೃಕ್ಷ

ಸಗ್ಗದೂರಿನ ಕರ ಚಾಚಿ ಕರೆವಾಗ
ತನ್ನನಾಶ್ರಯಿಸಿದ ಜೀವಗಳಿಗೆ
ಸಿಹಿಯುಣಿಸಿಯೇ ನಡೆವ ಕಾಮಧೇನು

ಮಳೆಯಲಿ ಛತ್ರಿ
ಚಳಿಯಲಿ ಕಂಬಳಿ
ಬಿರುಬಿಸಿಲಿಗೆ ಬೀಸಣಿಗೆ

ಏನ ಹೇಳಲಿ ಅಪ್ಪಾ
ನೀನಿಲ್ಲದೆ ಆಗಸದೆ
ಮಿಂಚುವುವೆ ತಾರೆಗಳು?
ನಕ್ಕಾವೆ ಸೂರ್ಯ ಚಂದ್ರರು?

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!