* ರಮೇಶ್ ಬಾಬು ಹೈದ್ರಾಬಾದ್
response@134.209.153.225
ಅವ ಇವತ್ತ ಎತ್ತರದಲ್ಲದಾನ
ಯಾಕ ಇರಲ್ಲ ಮತ್ತ
ಮುಂಚಿನಿಂದಲೂ ಹಂಗ ಅವಾ
ಬಾನೆತ್ತರದ ಕನಸ ಕಾಣಾವ
ಮುಗಿಲೀಗಿ ದಾರ ಪೋಣ್ಸಾವ
ಆಕಾಶಕ್ಕ ಏಣಿ ಹಾಕಾವ
ಚಂದ್ರಮಾನ ಕಿಸೆಗ್ಹಾಕ್ತೀನಿ ಅನ್ನಾವಾ
ನಕ್ಷತ್ರಗಳ ಬೀದ್ಯಾಗ
ಸಾರೋಟು ಓಡ್ಸೋ ಕನಸ ಕಾಣಾವ
ಸೂರ್ಯಾನ್ ತರ
ಸುರಸುರಗುಟ್ತೀನೋ ಅನ್ನಾವಾ
ಯಾರಮ್ಯಾಲೂ
ಅವಂದು ದೂರನ್ನೋದಿಲ್ಲ
ಯಾಕಾರ ಹುಟ್ಟೀನೋ
ಅಂತ ಎಂದಿಗೂ ಅಂದಿಲ್ಲ
ಯಾವಗ್ಲೂ ಮ್ಯಾಲ ನೋಡೋ
ತನ್ನ ಚಾಳೀನ್ನ ಬಿಡ್ಲಿಲ್ಲ
ತನ್ನ ಸುತ್ತುಮುತ್ತಿನವರೆಲ್ಲ
ತನ್ನವರ ಅಂದಾವ
ಜಗತ್ತಿಗ ಅಂಥಾವ್ರ ಬೇಕು
ಜತೀಗ ಬೆಳೆಯೋರು
ಬರೀ ಬೆರಿಗಿಲೆ ನೋಡೋರಲ್ಲ