* ಶಂಕರಿ ಶರ್ಮ, ಪುತ್ತೂರು
response@134.209.153.225
ಸುವಿಚಾರ ಧಾರೆ ತಾ ಸುರಿಯೆ ಕರ್ಣದ ಮೇಲೆ
ಮನಸಿಗುಲ್ಲಾಸ ನಿಜ ನಿತ್ಯ ಜೀವನದಿ
ಕುಟಿಲತೆಯ ಮಾತುಗಳು ತೂರೆ ಬಾಣದ ತೆರದಿ
ಅರಳಲಾರದು ನಗುವ ಹೂವು ಮೊಗದಿ
ಸಂಕೀರ್ಣ ಭಾವದಲೆ ಏರಿಳಿವ ಶರಧಿಯಲಿ
ಸವಿನೆನಪುಗಳ ತೆರೆಯ ನೊರೆಯು ಚೆಲ್ಲಿ
ಅಂತರಾಳದಿ ಒಲವು ತಾನುಕ್ಕಿ ಬರೆ ನಿತ್ಯ
ಅದೆ ಜೀವನದಿ ನೀಡೆ ಸದಾ ಗೆಲುವನಿಲ್ಲಿ
ಮನಕಡಲಿನಲಿಯಿರುವ ರತ್ನ ಮೇಲಕೆ ತರಲು
ಸತ್ಕಾರ್ಯ ಸನ್ನಡತೆ ನಾವೆ ತಾ ಬರಲು
ಸದ್ವಿಚಾರದ ಹುಟ್ಟು ಸ್ಥೈರ್ಯ ಅಂಬಿಗನಿರಲು
ಗೆಲುವು ನಮ್ಮೊಳಗೆ ತಾನೆ ತಾನಾಗಿ ಬರಲು