* ಕೊಟ್ರೇಶ್ ಅರಸೀಕೆರೆ
response@134.209.153.225
—
ನಿಶ್ಯಬ್ದವನ್ನು ನಾನು ಪ್ರೀತಿಸು
ವುದನ್ನು ಕಲಿತಿದ್ದೇನೆ;
ಜನ್ಮಾಂತರದ ಶಬ್ದ ಭಂಡಾರವನ್ನ
ಸಾಣೆ ಹಿಡಿಯಲು!!
ಆಡಿ, ಆಡಿ ಹಾಡಲು ಬರದಷ್ಟು ಶಬ್ದ
ಗಳನ್ನು ವ್ಯರ್ಥಗೊಳಿಸಿದ್ದೇನೆ;
ಮೌನದ ಬಂಗಾರ ಗಣಿಗಾಗಿ ಶೋಧ
ಅಂತಾರಾತ್ಮದಲಿ!!
ನಿತ್ಯದ ರಾತ್ರಿ ನಡಿಗೆಯಲಿ ಒಬ್ಬಂಟಿ
ಮನಸ್ಸಿಗಾಗಿ ಕಾತರಿಸುವಾಗ….
ಮೇಲೆ ಆಕಾಶ,ಮಿನುಗು ನಕ್ಷತ್ರ
ಕತ್ತಲಿನ ಧ್ವನಿ ಕಂಡು ಬೆಚ್ಚುತ್ತೇನೆ
ಮಾನ ಕಳೆದುಕೊಂಡ ಪತಿವ್ರತೆಯಂತೆ!
ನಿಶ್ಯಬ್ದತೆಯು ಕತ್ತಲಿಗೂ ಧ್ವನಿ ಇರುವುದನ್ನು
ತೋರಿಸಿ ಕೊಟ್ಟಿದೆ;
ಭೂ ಮಂಡಲದ ಪ್ರತಿ ಅಣುವಿಗೂ ತನ್ನದೇ
ಧ್ವನಿ,ಭಾವ,ಅವತಾರ!
ಕಂಠದ ಪ್ರಭುತ್ವದ ಮುಂದೆ ಸಂಕೋಚ
ಲಜ್ಜೆಯ ನಿಶ್ಯಬ್ದತೆಯನ್ನು ಪ್ರೀತಿಸುತ್ತೇನೆ!