Wednesday, November 30, 2022

ಹಸಿರು ಮರದ ಕೆಳಗೆ …

Follow Us


ಪ್ರಭಾಕರ ತಾಮ್ರಗೌರಿ ಗೋಕರ್ಣ
newsics.com@gmail.com

ದಟ್ಟ ಹಸಿರಿನ ಮರದ ಕೆಳಗೆ 
ತೊಟ್ಟಿಕ್ಕುವ ಇಬ್ಬನಿ ಸೋನೆ
ಹೊರಟ ಸೂರ್ಯನ ಕಿರಣಕ್ಕೆ 
ವಿರಮಿಸಲು ನಿನ್ನ ಜೊತೆ 
ಯಾರಿದ್ದಾರೆ …?
 
ಕೋಗಿಲೆಯ ಇಂಪಾದ 
ಕುಹೂ …ಕುಹೂ …
ಆಲಿಸುವವರು ಯಾರು …?
ಇಲ್ಲಿ ನಿಮಗೆ ವೈರಿಗಳಿಲ್ಲ 
ಇಲ್ಲಿ ನಿಮಗೆ ಸಿಗುವುದು 
ಚಳಿಗಾಲದ ಬೆಚ್ಚನೆಯ ಹವೆಯು  !
 
ಯಾರು ತನ್ನ ಆಸೆಗಳನ್ನೆಲ್ಲಾ 
ಅದುಮಿಟ್ಟು ಸೂರ್ಯನ 
ಎಳೆ ಬಿಸಿಲಿಗೆ ಮೈಯೊಡ್ಡಲು 
ಬಯಸುವರೋ ,
ಅಲ್ಲಲ್ಲಿ ಉದುರಿಬಿದ್ದ ಹಣ್ಣುಗಳನ್ನು 
ಹೆಕ್ಕಲು ಬರುವರೋ ,
ಇಲ್ಲಿ ಯಾವುದು ದೊರೆಯುವುದೋ ,
ಅದರಲ್ಲಿ ತೃಪ್ತಿ ಪಡೆಯುವರೋ ,
ಅವರು ಇಲ್ಲಿಗೆ ಬನ್ನಿ …
ಯಾಕೆಂದರೆ ,
ಇಲ್ಲಿ ನಿಮಗೆ ವೈರಿಯು ಸಿಗಲಾರ 
ಇಲ್ಲಿ ನಿಮಗೆ ಸಿಗುವುದು 
ಚಳಿಗಾಲದ ಬೆಚ್ಚನೆಯ ಹವೆಯು …!

 

ಮತ್ತಷ್ಟು ಸುದ್ದಿಗಳು

vertical

Latest News

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್ ತನಿಖೆಯಲ್ಲಿ ಈ ಅಂಶ ಬಯಲಾಗಿದೆ. ಕೇವಲ...
- Advertisement -
error: Content is protected !!