Thursday, December 9, 2021

ಸ್ಕ್ರೀನುಗಳೇ ಜಗತ್ತಾಗಿರುವ ಹೊತ್ತಲ್ಲಿ…

Follow Us

* ಎಚ್.ಕೆ.ಶರತ್, ಹಾಸನ
response@134.209.153.225
newsics.com@gmail.com

 

ದೆಯ ಮೇಲೂ
ಸವಾರಿ ಹೊರಟಿರುವ
ಅಸಹನೆಯೇ,
ತುಸುವಾದರೂ ವಿಶ್ರಮಿಸು.

ಫೇಸ್‌ಬುಕ್ಕು, ವಾಟ್ಸಪ್ಪು
ಅದು ಇದು
ಎಲ್ಲದರಿಂದಲೂ ಹೊರ ಬಂದು,
ರೋದಿಸುವವರ ಲೋಕದ
ದನಿ ಆಲಿಸು.

ನಿನ್ನೆ ಅಲ್ಲಿದ್ದವರು
ಇಂದು ಇಲ್ಲಿಯೂ ನಿಂತು
ಭಾಷಣ ಬಿಗಿಯುವರು.
ಅಲ್ಲಿದ್ದಾಗ ಇವರ ಕುರಿತು
ಇಲ್ಲಿದ್ದಾಗ ಅವರ ಮೇಲೆ
ನಿನ್ನನ್ನೇ ಕಾರುವರು.

ಎಲ್ಲರ ಮಿದುಳಿಗಿಳಿದ
ಅಹಂಕಾರವೇ,
ಒತ್ತುವರಿ ತೆರವುಗೊಳಿಸಿ
ಒಂದಿಷ್ಟು ಸಹನೆಗೂ
ಸ್ಥಳಾವಕಾಶ ಕಲ್ಪಿಸು.

‘ಸ್ಕ್ರೀನು’ಗಳೇ
ಜಗತ್ತಾಗಿರುವ ಹೊತ್ತಲ್ಲಿ
ಸರಾಗವಾಗಿ
ಎಲ್ಲೆಡೆಯೂ ತೂರಿಕೊಳ್ಳುವ
ಅಸಹನೆಯೇ,
ನಿನ್ನೊಳಗಿನ ಅಹಂಕಾರದ ಬಗೆಗೆ
ಇನಿತಾದರೂ ಅಸಹನೆ ಬೆಳೆಸಿಕೋ!

 

ಮತ್ತಷ್ಟು ಸುದ್ದಿಗಳು

Latest News

ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ: ಸಂಸದ ಸುಬ್ರಮಣಿಯನ್ ಸ್ವಾಮಿ ಶಂಕೆ, ತನಿಖೆಗೆ ಆಗ್ರಹ

newsics.com ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡವಿದೆಯಾ ಎಂಬ ಸಂಶಯವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ದುರಂತವಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ...

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಪ್ರಧಾನಿ...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...
- Advertisement -
error: Content is protected !!