Saturday, November 27, 2021

ಗುಲಾಬಿ ಕಥೆ

Follow Us

♦ ಸ್ಮಿತಾ ಅಮೃತರಾಜ್ ಸಂಪಾಜೆ
response@134.209.153.225
newsics.com@gmail.com

 

ಬಾ ಮಗಳೇ ಬಾ..
ಹೇಳುವೆನು ಇವತ್ತೊಂದು
ಹೊಸ ಬಗೆಯ ಕಥೆ
ಪುಟ್ಟ ದಿಟ್ಟ ಎದೆಯೊಳಗೆ
ರಕ್ತ ಚಿಮ್ಮಿ ಹೂವಾಗಿ
ಅರಳಿಕೊಂಡ ಬಗೆ.

ಅಕೋ..ನೋಡು ಅಲ್ಲೇ
ಪೊದೆ ಗುಲಾಬಿ ಗಿಡ
ಮೈತುಂಬ ಹಸಿರು ಎಲೆ
ಗೇಣು ಗೇಣಿಗೂ ಗೆಲ್ಲು ಗೆಲ್ಲಿಗೂ
ಮುಳ್ಳ ಮೊನೆ.

ಮುಳ್ಳನ್ನೇ ಹೊದ್ದುಕೊಂಡ
ಆ ಗಿಡದಲ್ಲಿ ರಕ್ತವರ್ಣದ
ಗುಲಾಬಿಯೊಂದು ತುತ್ತತುದಿಯಲ್ಲಿ
ಎಷ್ಟು ಮಂದಸ್ಮಿತ!.

ಚೆಂಗುಲಾಬಿ ಕೆಂಗುಲಾಬಿ
ಗಾಢ ಕೆಂಪಿನ ರೋಜಾ ಗುಲಾಬಿ
ಬಗೆ ಬಗೆಯ ನವಿರು ಬಣ್ಣದ ಬಣ್ಣನೆಗಳು
ಬಳಿ ಬಂದು ಪಿಸುಗುಟ್ಟಿದರೂ ಚಂಚಲೆಯಲ್ಲ
ಚೆಂಗುಲಾಬಿ ನಿರ್ಲಿಪ್ತ ಸಂತೆ.

ಪ್ರತಿ ಪಾದ ಎತ್ತಿಟ್ಟಾಗಲು
ತಿವಿದು ನೂಕಿದರು
ಆಳಕ್ಕೆ ಚುಚ್ಚಿ ನೋಯಿಸಿದರೂ
ಹಂತಹಂತದ ಹೆಜ್ಜೆಯಲ್ಲೂ ಛಲ
ಧಿಮಾಕಿಗಿಷ್ಟು ..ಅಂತ ಹೀಗೆಳೆದರೂ
ನೋಡು.. ! ಬಿಡಲಿಲ್ಲ ಹಠ.

ತೊಟ್ಟಿಕ್ಕುವ ಹನಿ ರಕ್ತ ವನ್ನೆಲ್ಲಾ
ಹೆಪ್ಪುಗಟ್ಟಿಸಿ
ಮುದುಡಿದ ಹಿಡಿ ಹೃದಯವ
ಮುಗುಳುನಗೆಯೆಲ್ಲಿ ಆದ್ದಿಸಿ
ತೆಗೆದಾಗ ಕಂಡೆಯಾ..

ಬಿರಿದ ಹೂವಲ್ಲೂ ಎಂತಹ ಚೆಲುವು
ಅದರೊಳಗೆ ನಗುವ ಗೆಲುವು
ಬಿಟ್ಟ ಕಣ್ಣು ಬಿಟ್ಟಂತೆಯೇ
ಸೂರ್ಯನೂ ನಿಬ್ಬೆರಗು.

ಒಂದು ಅರಳು ಗುಲಾಬಿಯ ಹಿಂದೆ
ಅಷ್ಟೊಂದು ಯಾತನೆಯಾ…?
ಅದಕ್ಕೆ ಅವಳಿಗೂ ಹೂವಿಗೂ
ಇಷ್ಟೊಂದು ಸಾಮ್ಯತೆಯಾ..?

ಅಮ್ಮ ಹೇಳಿದ ಗುಲಾಬಿ ಕಥೆಗೆ
ಮಗಳ ಹೋಲಿಕೆ ಸಾಗುತ್ತಿದೆ ಹೀಗೆ ..
ಎಲ್ಲಾ ಅಮ್ಮಂದಿರು ಈಗ
ಗುಲಾಬಿಯ ತದ್ರೂಪ ಅವಳಿಗೆ.

 

ಮತ್ತಷ್ಟು ಸುದ್ದಿಗಳು

Latest News

ಡಿಸೆಂಬರ್ 6ರಂದು ರಷ್ಯಾ ಅಧ್ಯಕ್ಷ ಪುತಿನ್ ಭಾರತಕ್ಕೆ ಭೇಟಿ

newsics.com ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್  ಡಿಸೆಂಬರ್ 6ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತ ಮತ್ತು ರಷ್ಯಾ ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಭಾರತ ಪ್ರವಾಸದ ವೇಳೆ ಪುತಿನ್,...

ರೈತರ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್: ರಾಜ್ಯದ ಚಿಂತನೆ

newsics.com ಬೆಂಗಳೂರು: ಜಲ ಮೂಲಗಳಿಂದ ಸಾಕಷ್ಟು ವಿದ್ಯುತ್ ಲಭಿಸದ ಕಾರಣ ಸೌರ ವಿದ್ಯುತ್ ಘಟಕಗಳಿಂದ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ...

ನಕ್ಸಲ್ ಮುಖಂಡ ಮಡ್ವಿ ಭೀಮಾ ಎನ್ ಕೌಂಟರ್

newsics.com ರಾಯ್ ಪುರ: ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಡ್ವಿ ಭೀಮಾ , ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.  ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವು ಪ್ರಕರಣಗಳಲ್ಲಿ ಭೀಮಾ ಆರೋಪಿಯಾಗಿದ್ದ ಎಂದು ಪೊಲೀಸರು...
- Advertisement -
error: Content is protected !!