Monday, May 23, 2022

ಕೇಳಿ ಬಿಡು ಮಾತೊಂದಿದೆ

Follow Us

  • ಶ್ರೀದೇವಿ ಕೆರೆಮನೆ

    response@134.209.153.225

ರಲಿ ಬಿಡು,
ಅದೆಷ್ಟೋ ಹೇಳಲಾಗದ
ಕಾರಣಗಳಿರಬಹುದು ನಿನಗೆ
ಹೇಗೆ ಆರೋಪಿಸಲಿ ದೂರವಾದನೆಂದು?

ಹೊರಡುವ ಕೊನೆ ಗಳಿಗೆಯಲ್ಲಿ
ಎದೆಯನ್ನೊಮ್ಮೆ ನೇವರಿಸಿಕೊ
ನನ್ನ ತುಟಿಯ ಹಸಿ
ಹಾಗೇ ಉಳಿದಿದ್ದರೆ
ಅಲ್ಲೇ ಪಕ್ಕದಲಿರುವ
ಸಾರ್ವಜನಿಕ ಬಾವಿ ಕಟ್ಟೆಯ ಮೇಲೆ
ಯಾರೋ ತುಂಬಿಸಿಟ್ಟ
ನೀರಿನ ಕೊಡ ಬಗ್ಗಿಸಿ ತೊಳೆದುಕೊಂಡು ಬಿಡು

ತೇವವನ್ನು ಎದೆಯಲ್ಲಿಟ್ಟು ಹೊರಡಲೇ ಬಾರದು
ಬೀಜ ಮೊಳೆತು, ಚಿಗುರಿ
ಮತ್ತೆ ಪ್ರೇಮದ ಮರ
ಹೂವರಳಿಸಿ ಕಾಯಾಗಿ ಹಣ್ಣಾಗಿ
ಲಕಲಕಿಸುವಂತಾಗಲೇ ಬಾರದು

ಮರೆತಿದ್ದೆ ನೋಡು ಕೊನೆಯ ಮಾತೊಂದ
ಅದೋ ನನ್ನ ಮನೆಯ ಬಾಗಿಲಿನ
ಎಡಗಡೆಯ ಚರಿಗೆಯೊಂದರಲ್ಲಿ
ನಿನಗೆಂದೇ ಒಲವು ಬೆರೆಸಿದ
ನೀರು ತುಂಬಿಸಿಟ್ಟಿದ್ದೆ
ಬಿಡು, ಈಗದರ ಅವಶ್ಯಕತೆಯೇನಿದೆ?
ಹೊರಡುವಾಗ ಸುಮ್ಮನೆ ಎಡಗಾಲನ್ನೊಮ್ಮೆ
ಎಡವಿ ಬಿಡಲು ಮರೆಯಬೇಡ
ಚರಿಗೆ ಕವುಚಿಬಿದ್ದು
ಅಲ್ಲೇ ಒಣ ನೆಲದಲ್ಲಿ
ಇಂಗಿ ಹೋಗಲಿ ಒಲವು
ಮತ್ತಾರಿಗೂ ದಕ್ಕದಂತೆ
ಒಂದಿಷ್ಟು ಜೋರಾಗಿ ಒದ್ದು
ಚರಿಗೆಯೇ ಒಡೆದು ಚೂರಾದರೆ
ಇನ್ನೂ ಸಂತೋಷ

ಅರೇ, ಮತ್ತೂ ಒಂದು ಮಾತಿದೆ
ಮತ್ತೇನು ಎಂದು ಮುಖ ಸಿಂಡರಿಸ ಬೇಡ
ನೀನು ಹೊರಡುವುದು ಖಾತ್ರಿಯಾದ ಮೇಲೆ
ಮಾತು ಮುಗಿಯುತ್ತಲೇ ಇಲ್ಲ
ಯಾವ ಕಾರಣಕ್ಕೂ ಬರಲೇ ಬೇಡ
ನನ್ನ ಶವ ಸಂಸ್ಕಾರಕ್ಕೆ
ಎದ್ದು ಕುಳಿತೇನು ನಾನು
ಗಾಳಿಯಲ್ಲಿ ತೇಲಿ ಬಂದ ನಿನ್ನ ಮೈಗಂಧ
ನನ್ನ ನವಿರಾಗಿ ಸೋಕಿದಾಗ
ಹಳೆಯ ಕ್ಷಣಗಳೆಲ್ಲ ಆವರಿಸಿ

ಇದೊಂದು ಮಾತು ಕೇಳಿ ಬಿಡು
ಓಡಾಡ ಬೇಡ ಅಪ್ಪಿತಪ್ಪಿಯೂ
ನನ್ನ ದಹಿಸಿದ ಜಾಗದಲ್ಲಿ
ಹಾರಿ ಬರಬಹುದು ಫಿನಿಕ್ಸ್
ನನ್ನ ಬೂದಿಯಿಂದಲೇ

ಸಾಕು, ಹೊರಡು
ತೀರಿ ಹೋಗುವವರೆಗೆ ಜನ್ಮಜನ್ಮಾಂತರಗಳ‌ ಭವಾಭವ
ನಾನು ಸಿಗದಿರಲೆಂದು
ನೀನು ನಂಬುವ ಶಿವನಲ್ಲೊಮ್ಮೆ ಪ್ರಾರ್ಥಿಸಿ…

 

ಮತ್ತಷ್ಟು ಸುದ್ದಿಗಳು

Latest News

ಆಣೆಕಟ್ಟಿನಲ್ಲಿ ಹುಚ್ಚು ಸಾಹಸ ಪ್ರದರ್ಶಿಸಲು ಹೋಗಿ ಆಯ ತಪ್ಪಿ ಬಿದ್ದ ವ್ಯಕ್ತಿ!

newsics.com ಯಾವುದೇ ಆಧಾರವಿಲ್ಲದೇ ಆಣೆಕಟ್ಟಿನ ಗೋಡೆಯನ್ನು ಹತ್ತಲು ಹೋದ ವ್ಯಕ್ತಿಯು ಆಯತಪ್ಪಿ ಬಿದ್ದು ಗಾಯಗೊಂಡ ಘಟನೆಯು ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಆಣೆಕಟ್ಟಿನಲ್ಲಿ ನಡೆದಿದೆ. ಆಣೆಕಟ್ಟಿನಲ್ಲಿ ನೆರೆದಿದ್ದ ಪ್ರವಾಸಿಗರ ಎದುರು ಹುಚ್ಚು...

ಬೋನಿನಲ್ಲಿದ್ದ ಸಿಂಹದ ಜೊತೆ ಚೆಲ್ಲಾಟವಾಡುತ್ತಿದ್ದವನ ಬೆರಳುಗಳೇ ಕಟ್!

newsics.com ಹುಲಿ, ಸಿಂಹ ಹಾಗೂ ಚಿರತೆಗಳಂತಹ ಪ್ರಾಣಿಗಳ ಜೊತೆ ನಾವು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಹ ಕಡಿಮೆಯೇ. ಆದರೆ ಇಲ್ಲೊಬ್ಬ ವ್ಯಕ್ತಿ ಸಿಂಹದ ಬೋನಿನಲ್ಲಿ ಕೈ ಹಾಕುವ ಹುಚ್ಚು ಸಾಹಸ ಪ್ರದರ್ಶಿಸಲು ಹೋಗಿ ತನ್ನ...

ಬಾಡಿಗೆಗೆ ವಾಸವಿದ್ದ ಯುವತಿ ಮೇಲೆ ಮನೆ ಮಾಲೀಕನಿಂದ ಅತ್ಯಾಚಾರ

newsics.com ಬೆಂಗಳೂರು : ಬಾಡಿಗೆಗೆ ವಾಸವಿದ್ದ ಯುವತಿಗೆ ಬೆದರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ತಲೆಗೆ ಪಿಸ್ತೂಲಿಟ್ಟು ಬೆದರಿಕೆಯೊಡ್ಡಿದ್ದ ಮನೆ ಮಾಲೀಕನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ...
- Advertisement -
error: Content is protected !!