- ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ
response@134.209.153.225
ನಿನ್ನುಡುಗೆಯಲಿ ಅಡಗಿ
ಖುದ್ದಾಗಿ ಮುತ್ತಿಡಲು
ನಡುಗಿ ನೀ ಬೆಡಗಿನಿಂದಲೇ
ನಡುವ ಬಳಸಿದೆ
ಗುಡುಗು ಸಿಡಿಲಿನ ಮಳೆ ಹೊರಗೆ
ಒಳಗೆ ಸಾಗರದ ಬೋರ್ಗರೆತ
ಶೃಂಗಾರರಸದ ಕಡಲು
ಉಕ್ಕಿತು…
ನಾಚಿ ಮುಚ್ಚಿಕೊಂಡಿದ್ದ ಅಂಗಾಂಗಗಳೆಲ್ಲ
ಅರಿವಿಲ್ಲದೇ ಬಿಚ್ಚಿಕೊಂಡವು,
ಕಚ್ಚಿಕೊಂಡವು
ಹುಚ್ಚನ ಮಾಡಿ ನನ್ನ ಸುತ್ತಿಕೊಂಡವು
ಬೆರಳ ತುದಿಯಲಿ
ಕೊರಳಮೇಲೆ ಬರೆದ ಕವಿತೆ
ನಿನ್ನ ಸ್ವರಮಾಧುರ್ಯದ ರಾಗ ಸಂಯೋಜನೆಯಿಂದ
ಹಾಡಾಗಿ ಹೋಯಿತು
ಎದೆಯು ಬಾಯಿಗೆ ಬಂದಂತಾಗಿ
ಹೃದಯದುದ್ವೇಗ ಹೆಚ್ಚಾಗಿ
ಉಸಿರಲ್ಲೇ ಹುಟ್ಟಿದ್ದು ಈ ಉನ್ಮಾದ ಮತ್ತು ರೋಮಾಂಚನ
ತುಟಿಗೆ ತುಟಿಯ ಭೇಟಿಯಾಗಿ
ಎದೆಗೆ ಎದೆಯು ಬಿಗಿಯಾಗಿ
ನಡುವ ನಡುವೆ ಬಂಧಿಯಾಗಿ
ಗಂಧದಂಥ ಘಮವೊಂದು
ಚಿಲುಮೆಯಂತೆ ಚಿಮ್ಮಿತು…