- ಕೊಟ್ರೇಶ್ ಅರಸೀಕೆರೆ
response@134.209.153.225
ಆ ದಟ್ಟ ಕಾಡಿನಲ್ಲಿ
ಹೂವೊಂದು ಅರಳಿ
ಘಮಘಮಿಸುತ್ತಿತ್ತು!
ಅದು ಜಾಜಿ ಅಲ್ಲ,
ಮಲ್ಲಿಗೆಯೂ ಅಲ್ಲ!!
ಪಾರಿಜಾತ ಮೊದಲಲ್ಲ!
ಆ ಹೂವಿಗೆ ಹೆಸರಿಲ್ಲ
ಕಂಡವರು ಎಷ್ಟೋ?
ಪರಿಮಳ ಮಾತ್ರ ಕಾಡು
ನಾಡ ತುಂಬಾ……!
ಅಲ್ಲೊಂದು ಹಕ್ಕಿ
ಕಾಡ ಒಳಗೆ ಹಾಡು
ಹೆಸರಿಲ್ಲ,ಕಂಡವರಿಲ್ಲ
ಕೋಗಿಲೆಯ ನೆಂಟನಲ್ಲ!!
2
ನಾಡ ಜನ ಹೂ ಪರಿಮಳ
ಆಸ್ವಾದಿಸಿದರು,
ಹಕ್ಕಿಯ ಹಾಡಿಗೆ ಮನ
ಸೋತರು!!
ಹೂವಿಗೂ, ಹಕ್ಕಿಗೂ
ವಿಳಾಸವಿಲ್ಲ!
ಪಂಡಿತನೊಬ್ಬ ಹಕ್ಕಿ ಹಾಡ
ಕಾವ್ಯ ಮಾಡಿದ;
ರಾಜನ ಆಸ್ಥಾನಕ್ಕೆ ಹೂವಿನ
ಪರಿಮಳ ಪರಿಚಯಿಸಿದ!!
ರಾಜ ಪಲ್ಲಂಗ ಏರಿದ
ಕಾವ್ಯ ಗುಣಗಿದ!
ಪದವಿ,ಪುರಸ್ಕಾರ
ಪಂಡಿತನ ಪಾಲು!!
ಅಜ್ಞಾತ ಹಕ್ಕಿ ಹಾಡುತ್ತಲೇ
ಇದೆ ಶತ ಶತಮಾನಗಳಿಂದ!
ಪರಿಮಳದ ಹೂ ಪಸರಿಸುತ್ತಲೇ
ಇದೆ ಕಂಪನ್ನ!
ಇಲ್ಲೊಬ್ಬ ಕವಿ ಹಾಡಿದ;
“ಹಾಡು ಹಕ್ಕಿಗೆ ಬೇಕೆ
ಬಿರುದು ಸನ್ಮಾನ? “
ಆದರೂ…..