Saturday, November 27, 2021

ಕಟ್ಟಿ ಹಾಕಬೇಡ

Follow Us

| ಮಾರುತಿ ದಾಸಣ್ಣವರ
response@134.209.153.225

 

ಬೇಡ…
ಹೆಸರ ದೀಕ್ಷೆಯ ಕೊಟ್ಟು
ಹೀಗೆ ಕಟ್ಟಿ ಹಾಕಬೇಡ..

ನೋಡಬೇಡ ಹಾಗೆ
ಹಿಂಜಿ ಹಿಂಜಿ….
ನಾನು ಪ್ರಾಸಕ್ಕಾಗಿ
ತುರುಕಿಕೊಂಡ ಶಬ್ದವಲ್ಲ..
ಅರ್ಥಕ್ಕಾಗಿ ಹೇರಿಕೊಂಡ
ಉಪಮೆಯೂ ಅಲ್ಲ.

ತೊಡಿಸಬೇಡ ಬಿಡು
ಯಾವ ಅಂಗಿಯನ್ನೂ
ನೂಲು, ನೈಲಾನು, ರೈಮಂಡು
ಬಟ್ಟೆಗೂ ತರತಮಗಳ
ಗಬ್ಬು ನಾತ

ಸಿಕ್ಕಿಸಬೇಡ
ಯಾವ ಶೀರ್ಷಿಕೆಯ ಕಿರೀಟವನ್ನು
ಮೆರೆದಾಡುವ ಗರಜು ನನಗಿಲ್ಲ

ಯಾವ ಗಂತವ್ಯದ ಬೋರ್ಡೂ
ಹಾಕಬೇಡ
ನನ್ನ ಪಯಣದ ಕೊನೆ ಮೊದಲುಗಳ
ನನಗೇ ನಿರ್ಧರಿಸಿಬಿಡು

ಹೋಗಬಿಡು ನನ್ನ
ದಾರಿ ಇದ್ದರೂ ಇರದಿದ್ದರೂ
ನಡೆವ ಅಧಿಕಾರವಾದರೂ
ಇರಲಿ

ತಾಳ ರಾಗಗಳ
ಬೇಲಿ ಹಾಕಬೇಡ
ಹಾಡಬೇಕಿದೆ ನನಗೆ
ನನ್ನವೇ ಹಾಡುಗಳ
ನನ್ನದೇ ಲಯದಲ್ಲಿ

ನಿನ್ನ ಯಾವ ಬಣ್ಣಗಳೂ
ಬೇಡ ನನಗೆ.
ಆಕಾಶದ ನೀಲಿಯಿದೆ
ರವಿಯ ಹೊಂಬಣ್ಣವಿದೆ
ಕಾಡ ಕಡು ಹಸಿರಿದೆ

ಯಾಕೋ ಇತ್ತೀಚೆಗೆ ಬಣ್ಣಗಳಿಗೇ
ಬಣ್ಣ ಬಳಿಯುವ ನಿನ್ನ
ಸಣ್ಣತನ ಇಷ್ಟವಾಗುತ್ತಿಲ್ಲ…

ಮತ್ತಷ್ಟು ಸುದ್ದಿಗಳು

Latest News

ನಕ್ಸಲ್ ಮುಖಂಡ ಮಡ್ವಿ ಭೀಮಾ ಎನ್ ಕೌಂಟರ್

newsics.com ರಾಯ್ ಪುರ: ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಡ್ವಿ ಭೀಮಾ , ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.  ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವು...

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ ಮಾಡಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾಕ್ಕೆ ಹಲವು...

ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಎಸ್ಐ ಅಮಾನತು

newsics.com ವಾರಂಗಲ್(ಆಂಧ್ರಪ್ರದೇಶ): ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪದ ಮೇಲೆ ಪೊಲೀಸ್ ಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವಾರಂಗಲ್‌ನ ‍ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಕ್ ಶಾಪಿ ಅಮಾನತುಗೊಂಡಿರುವ ಪೊಲೀಸ್ ಅಧಿಕಟರಿ. ನವೆಂಬರ್ 18ರಂದು ವಿವಾಹಿತೆಯ...
- Advertisement -
error: Content is protected !!