Monday, November 29, 2021

ಮರೀಚಿಕೆ

Follow Us

Dr Ajith Hareeshi
♦ ಡಾ. ಅಜಿತ್ ಹರೀಶಿ
response@134.209.153.225
newsics.com@gmail.com

 

ಪ್ರೀತಿಯೊಂದು ಅಕಾರಣ ಮನಸ್ಥಿತಿ 
ಬೇಕೊಂದು ಗುಡಿ ಮತ್ತು ಮೂರ್ತಿ
ಹುಡುಕಾಟದಲ್ಲಿ ತೊಡಗಿದವರಿಗೆ
ಸಿಗಬಹುದು ತುಸು ಬೇಗ
ಬೇಗುದಿ ಹೆಚ್ಚಿದಂತೆ ಹುತ್ತಕೂ ಹಾಲೆರವ

ಕಾಮವೊಂದು ಕಾಡುವ ಹಸಿ
-ವು ತೀವ್ರತೆಯ ಆಧಾರಿಸಿ
ಮನದಲಿ ಸಿದ್ಧವಾಗುವ ಮೆನು
ರಸಗುಲ್ಲಾ ಸಿಗದಿದ್ದರೆ ಜಾಮೂನು
ಕಾಮತ್ ಅಲ್ಲದಿದ್ದರೆ ಉಡುಪಿ ಭವನ

ಕವಿತೆ, ಕತೆ, ಕಾದಂಬರಿ
ಕಡೆ ಪಕ್ಷ ಕೇಳಿಗೊಂದು ಪ್ರಶ್ನೆ ಹಾಕಿರಿ
ಹೊರಹಾಕುವ ಕ್ರಿಯೆಯೇ ಹಾಗೆ
ಭಾವ ಪ್ರಪಂಚದಿಂದ ಬರಹಕ್ಕೆ
ದೇಹದಿಂದ ತೀರದ ದಾಹ ಚಣಕಾಲ ಹೊರಕ್ಕೆ

ಮತ್ತೆ ಮತ್ತೆ ಹೊರಳುತ್ತದೆ ಹಾದಿ ಒಂಟಿಯಾಗಿಯೇ
ಪ್ರೀತಿ ನಿಲ್ಲುತ್ತದೆ ಎದುರು ಕನ್ನಡಿಯಾಗಿಯೇ
ಒಪ್ಪ ಓರಣ ಎಲ್ಲ ಅವರವರ ಕೈಯಲ್ಲಿ
ಇರಬಹುದು ಗುಟ್ಟು ಇಲ್ಲಿ;

ದರ್ಪಣವು ಹೊದಿಕೆ ಕಳಚತ್ತಾ
ಗಾಜಾಗುವ ಪಾರದರ್ಶಕತೆಯಲ್ಲಿ
ಗಾಜನ್ನು ಇಲ್ಲವಾಗಿಸುತ್ತ ನಿಜವಾಗುವಲ್ಲಿ
ಕುಸುರಿ ಕೆಲಸವಾಗಲ್ಲ ಸುಲಭದಲ್ಲಿ
ಕೈತಪ್ಪಿದರೆ ಪುಡಿ ಪುಡಿ ಕನ್ನಡಿ
ಎಂಬ ಆತಂಕದಲ್ಲಿ ನಿಲುವು
-ಗನ್ನಡಿಯೇ ಒಳಿತೆಂಬ ಒಲವು

ಹಾಗಾಗಿಯೇ ಇರಬೇಕೇ?
ಕುರುಡರ ಸಂತೆಯಲ್ಲಿ ಕನ್ನಡಿಗೆ ಬೇಡಿಕೆ!

 

ಕವಿತೆ ವಾಚನ: ಅಮೃತಾ ಎ. ಶೆಟ್ಟಿ, ಮುಂಬೈ

ಮತ್ತಷ್ಟು ಸುದ್ದಿಗಳು

Latest News

ಮಹಿಳಾ ಸಂಸದರೊಂದಿಗೆ ಸೆಲ್ಫಿ ಶೇರ್ ಮಾಡಿ ಲೋಕಸಭೆ ಆಕರ್ಷಕ ಸ್ಥಳ ಎಂದ ಶಶಿ ತರೂರ್, ಕ್ಷಮೆಯಾಚನೆ

newsics.com ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್, ಆರು ಮಹಿಳಾ ಸಂಸದರೊಂದಿಗೆ ತೆಗೆದ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. "ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ?"...

ಭಾರತ – ನ್ಯೂಜಿಲೆಂಡ್ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ

newscis.com ಕಾನ್ಪುರ: ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಮಂದ ಬೆಳಕಿನಿಂದ ಪಂದ್ಯವನ್ನು ನಿಲ್ಲಿಸಬೇಕಾಯಿತು. ನಾಲ್ಕು ವರ್ಷಗಳಲ್ಲಿ ಭಾರತದ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್...

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು ಸಮ್ಮತಿಯ ಲೈಂಗಿಕ ಸಂಬಂಧಗಳ ಅಪರಾಧೀಕರಣದ ಕುರಿತಾದ...
- Advertisement -
error: Content is protected !!