Wednesday, May 31, 2023

ಹೊಸ ವರುಷ…

Follow Us

• ಶಿವಾನಂದ್ ಕರೂರ್ ಮಠ್,
ಶಿಕ್ಷಕರು, ಶ್ರೀ ಸೋಮೇಶ್ವರ ವಿದ್ಯಾಲಯ. ದಾವಣಗೆರೆ
newsics.com@gmail.com

ರಲಿದೆ ಹೊಸ ವರುಷ
ತರಲಿ ಎಲ್ಲರ ಬಾಳಲಿ ಹರುಷ
ನೋವು ದ್ವೇಷಗಳ ಕಳೆದು
ಸ್ನೇಹ ಸಂಬಂಧವ ಕೂಡುತ
ಶುರುವಾಗಲಿ ಸುಖದ ಪರ್ವವು
ಮೊಳಗಲಿ ಕೀರ್ತಿ ಅನಂತವು
ಬರಲಿ ಹೊಸ ವರುಷ ಬಾಳಲಿ
ಹೊಸ ಚೈತನ್ಯ ಮೂಡಲಿ
ಗುರಿಯ ತಟ ಸನಿಹವಾಗಲಿ
ಸಕಲವೂ ಶುಭವಾಗಲಿ…
ಗತಿಸಿದ ಅವಮಾನಗಳೆಲ್ಲವೂ
ಸನ್ಮಾನವಾಗಿ ಸಜ್ಜನರ ಮುಡಿಗೇರಲಿ
ಬರಲಿ ಹೊಸ ವರುಷ ಬಾಳಲಿ
ಕಷ್ಟಗಳನು ತಳ್ಳೋಣ ಪಾಳು ಗುಂಡಿಗೆ
ಸಕಲಗಳನು ಮೆಟ್ಟುವ ಮೂಡಲಿ ಗುಂಡಿಗೆ
ಇಷ್ಟಗಳನು ಸಾಧಸಿ ಹಂಚೋಣ ಮಂಡಿಗೆ
ಛಲವು ಮೂಡಲಿ ಮೊಗದಲಿ
ಫಲವು ದೊರೆಯಲಿ ಯುಗದಲಿ
ಬರಲಿ ಹೊಸ ವರುಷ ಬಾಳಲಿ
ಒಣಗಿದ ಬೀಜ
ಭುವಿಯ ನೀರಿನ ಸೆಲೆಗೆ ಸಿಕ್ಕು
ಮೊಳೆತು ಹಸಿರಾಗುವಂತೆ,
ಬಂಜೆಯ ಒಡಲಲಿ
ಹೊಸ ಜೀವದ ಸುಳಿವಿನ
ಖುಷಿಯ ಕೊಟ್ಟಂತೆ,
ಸುಡು ಬಿಸಿಲಲಿ ವರುಣ
ಧರೆಗೆ ಗಂಗೆಯನು
ಧಾರೆ ಎರೆದಂತೆ
ಜೊತೆಯಾಗಲಿ ಬರುವ ದಿನಗಳು
ನಮ್ಮೆಲ್ಲರನು ಸ್ವಾಗತಿಸಿ
ಸುಖದ ಹೂಮಳೆಗೈವಂತೆ,
ಬರಲಿ ಹೊಸ ವರುಷ ಬಾಳಲಿ
ತರಲಿ ಹರುಷವ ಬರುವ ದಿನಮಾನಗಳಲಿ.

ಮತ್ತಷ್ಟು ಸುದ್ದಿಗಳು

vertical

Latest News

ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ದುಷ್ಕೃತ್ಯ ಸಂಚು: ದಕ್ಷಿಣ ಕನ್ನಡದ 16 ಕಡೆ NIA ದಾಳಿ

newsics.com ಮಂಗಳೂರು: ಪ್ರಧಾನಿ ಮೋದಿಯವರ ಬಿಹಾರ ಕಾರ್ಯಕ್ರಮದ ವೇಳೆ ದುಷ್ಕೃತ್ಯ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಕ್ಷಿಣ ಕನ್ನಡ ಜಿಲ್ಲೆಯ 16‌...

ಸಮುದ್ರಕ್ಕೆ ಬಿತ್ತು ಉತ್ತರ ಕೊರಿಯಾ ಉಡಾಯಿಸಿದ ‘ಗೂಢಚರ್ಯೆ ಉಪಗ್ರಹ’

newsics.com ಸೋಲ್: ಉತ್ತರ ಕೊರಿಯಾ ಬುಧವಾರ ಉಡಾವಣೆ ಮಾಡಿದ ಗೂಢಚರ್ಯೆ ಉಪಗ್ರಹ ಸಮುದ್ರದ ಪಾಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಾಂತ್ರಿಕ ಕಾರಣಗಳಿಂದಾಗಿ ಗೂಢಚರ್ಯೆ ಉಪಗ್ರಹ ಸಮುದ್ರಕ್ಕೆ ಬಿದ್ದಿದೆ ಎಂದು ಉತ್ತರ ಕೊರಿಯಾ ಮಾಧ್ಯಮಗಳು ತಿಳಿಸಿವೆ. ಮೊದಲು...

ರಾಜ್ಯದ ಹಲವೆಡೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

newsics.com ಹಾವೇರಿ/ತುಮಕೂರು/ಶಿವಮೊಗ್ಗ: ಇಂದು(ಮೇ 31) ಬೆಳ್ಳಂಬೆಳಗ್ಗೆ ಹಾವೇರಿ, ತುಮಕೂರು ಹಾಗೂ ಶಿವಮೊಗ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿರುವ ನಿರ್ಮಿತಿ ಕೇಂದ್ರದ ಇಂಜಿನಿಯರ್ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ದಾಳಿ...
- Advertisement -
error: Content is protected !!