Monday, April 12, 2021

ರಾಗ

♦ ದೀಪ್ತಿ ಭದ್ರಾವತಿ
response@134.209.153.225
newsics.com@gmail.com

 ನಿ ನ್ನೊಲವ ತುಣುಕೊಂದು
ಮೈಗೆ ಮೆತ್ತಿದಾಕ್ಷಣ
ಹಕ್ಕಿಯಾಗುತ್ತೇನೆ

ಬಾನೆತ್ತರ ಸಾಗಿ ಸಾಗಿ ತೇಲಿ ಬರುವ
ಮೋಡಗಳ ಮೇಲೆಲ್ಲ
ನಮ್ಮಿಬ್ಬರ ಹೆಸರು ಬರೆಯುತ್ತೇನೆ..

ಅದು ಮೇಘಗಳ ನಾಭಿಯೊಳಗೆ
ಝಿಲ್ಲನೆ ಇಳಿಯುತ್ತದೆ
ಅದರದಲಿ ಒಳಕುದಿಗಳ
ಹೆಕ್ಕಿಕೊಳ್ಳುತ್ತೇನೆ

ಕಣ್ಣಾಲಿಗಳ ಬಿಂಬ ಚಂದ್ರನ ಚೂರಿಗೆ
ಡಿಕ್ಕಿ ಹೊಡೆಯುತ್ತದೆ
ಬೆರಳ ತುದಿಯಲಿ ಬೆಳಕ ಕಡಲು

ಚಲಿಸುತ್ತೇನೆ ಹೀಗೆ ಹೀಗೆ ಸರಿಯುತ್ತ
ನಿನ್ನ ಮೆದು ಬೊಗಸೆಯೊಳಗೆ
ಜೀವದ ಜಿನುಗು ಒಸರಿ ಅಂಟಿಕೊಳ್ಳುತ್ತೇನೆ

ಮೊರೆವ ಹೂವುಗಳೆಲ್ಲ ನಿನ್ನ ಹೆಬ್ಬೆರಳಿನಲಿ
ಅರಳುವಾಗ ಗರಿ ಹಿಗ್ಗಿಸಿ ತುಟಿಯ ಕೊಂಕಿಸಿ
ಅನಾಮಿಕ ಹಾಡೊಂದು
ಹುಟ್ಟಿಕೊಳ್ಳುತ್ತದೆ

ಓಹ್ ಒಲವ ಓಲೆಕಾರನೆ
ಸುಖ ಸುರಿವ
ನಿನ್ನ ಅನಂತ ರೋಮಗಳಲಿ
ನನ್ನ ರಾಗಗಳ ದಾಖಲಿಸಲು
ಹಾ ತೊರೆದು
ಕದ ತಟ್ಟುತ್ತೇನೆ

ಎಂದೊ ಜಡಿದ ಬೀಗ ರೊಯ್ಯನೆ
ತಲೆಗೆ ಬಡಿಯುತ್ತದೆ…

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!