Sunday, January 29, 2023

ಸಾವೆಂದರೆ…

Follow Us

ವೈರಾಣುವಿಗೆ ಉಸಿರೆರೆದು ಸೋತು.. ನಮ್ಮವರನೆಲ್ಲಾ ಮಣ್ಣೊಳಗೆ ಹೂತು.. ಆಗಂತುಕನ ಬಲೆಯೊಳಗೆ ಸಿಲುಕಿ.. ಸಂಜೀವಿನಿಗಾಗಿ ಎಲ್ಲೆಲ್ಲೋ ಕೆದಕಿ.. ಸಿಗದೆ ಅನಾಥನಂತೆ ಮಲಗಿ.. ಸಮಾಧಿಯಾಗುವುದು ಸಾವೇ..

♦ ಚಂದ್ರಶೇಖರ ಹೆಗಡೆ

ಸಹಾಯಕ ಪ್ರಾಧ್ಯಾಪಕರು,
ಬೀಳಗಿ, ಬಾಗಲಕೋಟೆ
newsics.com@gmail.com


 ಸಾ ವೆಂದರೆ ಹೀಗೆಯೇ..
ಎಲ್ಲ ಇದ್ದೂ ಇಲ್ಲವಾಗುವುದೆ ?
ಇಲ್ಲದಿರುವುದಕ್ಕೆ ಬೆನ್ನುಬಿದ್ದು
ಖಾಲಿಯಾಗುವುದೆ ?
ಹಸಿರು ತುಂಬಿದ್ದರೂ ಬರಡು
ಕೊರಡಾದೆನೆಂದು ವ್ಯಸನಿಯಾಗಿ
ಹೊರಟುಬಿಡುವುದೆ ?

ವೈರಾಣುವಿಗೆ ಉಸಿರೆರೆದು ಸೋತು
ನಮ್ಮವರನೆಲ್ಲಾ ಮಣ್ಣೊಳಗೆ ಹೂತು
ಆಗಂತುಕನ ಬಲೆಯೊಳಗೆ ಸಿಲುಕಿ
ಸಂಜೀವಿನಿಗಾಗಿ ಎಲ್ಲೆಲ್ಲೋ ಕೆದಕಿ
ಸಿಗದೆ ಅನಾಥನಂತೆ ಮಲಗಿ
ಸಮಾಧಿಯಾಗುವುದು ಸಾವೇ..

ಹಾಗಿರಲಿಕ್ಕಿಲ್ಲ…ಹಾಗಾದರೆ..
ಎಲ್ಲೆಂದರಲ್ಲಿ ಬೇರು ಚಾಚಿ
ಎಂದೂ ಅಲುಗಾಡದಂಥ
ಸ್ಥಾವರದ ಶಿಖರವೇರಿ ಉಬ್ಬಿ ನಿಂತು
ಬೀಗಿ ಜಂಗಮನಾಗದೇ ನಗುತ್ತಲೇ
ಹೃದಯ ನೀಗುವುದು… ಸಾವೆ ?

ಇಲ್ಲಾ…
ನಮ್ಮ ನಡುವೆಯೇ ಗೋಡೆಗಳ ಕಟ್ಟಿ
ವಾಲಿ ಬೀಳದಂತೆ ತೇಪೆ ಹಾಕಿ
ಬೆಚ್ವಗಿರುವುದೆಂದುಕೊಂಡ ಭವದ
ಗೂಡಿನೊಳಗೆ ಭೂಮಿತೂಕದ
ನೆಮ್ಮದಿಯನರಸಿ ಒಂಟಿಯಾಗುವುದು
ಸಾವೇ….?

ಹೊತ್ರು ಹೊತ್ತಿಗೆ ರಸಗವಳವ ಹುಡುಕಿ
ಮತ್ತೆ ಸುತ್ತಿ ಮಡಕೆ ಜಲ ಮುಕ್ಕಳಿಸಿ
ಕೊರತೆಯೊಂದಾಯಿತೆಂದು ತಾಂಬೂಲವ
ಬಯಸಿ ನಿತ್ಯಸಂತೆಯೊಳ ಹೊರಗೆ ನುಡಿಸಿ
ಎಂದಿನಂತೆ ತಿರುಗಿ ಮುರುಗಿ
ಹೊರಟುಬಿಡುವುದು ಸಾವೇ?

ಮಾತನಾಡಿದರೊಂದು ಮುತ್ತು
ಉದುರಿಹೋದೀತೆಲ್ಲಿ ಗತ್ತು
ಸಮಯಕಂಟಿಕೊಂಡು ಹರಗಿ
ನೆತ್ತಿಯ ಮೇಲೊಂದು ಒತ್ತಡದ
ತೂಗುಕತ್ತಿಯನಿಟ್ಟುಕೊಂಡು
ಎದುರಾದವರ ಮರೆಮಾಚಿ
ಧಿಕ್ಕರಿಸಿ ಬದುಕುವ ಬದುಕು…?

ಮತ್ತಷ್ಟು ಸುದ್ದಿಗಳು

vertical

Latest News

ಪಠಾಣ್ ಸಿನಿಮಾ ಗೆಲುವಿನ ಹಿಂದೆ ಐಎಸ್ಐ ಕೈವಾಡವಿದೆ : ಕಂಗನಾ ರಣಾವತ್

Newsics. Com ಮುಂಬೈ: ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಎಲ್ಲ ಅಡೆತಡೆಗಳನ್ನು ನೂಕಿಕೊಂಡು ರಿಲೀಸ್ ಆದ...

ಪೇಪರ್ ಡ್ರೆಸ್ ಧರಿಸಿ ಸಖತ್ ಹಾಟ್ ಅವತಾರದಲ್ಲಿ ನಿವೇದಿತಾ ಗೌಡ

Newsics.Com ಬೆಂಗಳೂರು: ನಿವೇದಿತಾ ಗೌಡ ಹೊಸ ಅವತಾರದಲ್ಲಿ ಬಂದಿದ್ದಾರೆ. ಈ ಹೊಸ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಕಪ್ಪು ಬಣ್ಣದ...

100ನೇ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಲೊಗೊ, ಜಿಂಗಲ್ ಆಹ್ವಾ-ಒಟ್ಟು 1.11 ಲಕ್ಷ ಬಹುಮಾನ

Newsics.Com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ನ 100ನೇ ಆವೃತ್ತಿಗಾಗಿ ವಿಶೇಷ ವಿನ್ಯಾಸದ ಲೊಗೊ ಹಾಗೂ ಜಿಂಗಲ್ಗಳನ್ನು...
- Advertisement -
error: Content is protected !!