- ಕನ್ನಡಿ ಚಿಗುರು ಚೈತ್ರೆ, ಕಾಳನಕಟ್ಟೆ
response@134.209.153.225
ಹಿಡಿ ಮೇವು ನೀರು ಪಡೆದು
ಅಮೃತವೆ ಸುರಿಸಿದ ಗೌರಿಯದು
ದೊಡ್ಡ ಮಾತೃ ಹೃದಯ
ಸೌಮ್ಯ ಸ್ವಭಾವದ ಗುಣದವಳು
ಆರೇಳು ಕರುಗಳ ಕರುಣಿಸಿ
ನಮ್ಮ ತಬ್ಬಲಿತನ ನೀಗಿಸಿ
ಮುದಿ ಜೀವ ಮನುಷ್ಯನಾಸೆಗೆ
ಮತ್ತೆ ಗರ್ಭ ಧರಿಸಿಹಳು
ತುಂಬು ಗರ್ಭಿಣಿಯು
ಭಾರ ಒಡಲ ಹೊತ್ತು
ನಡೆಯಲಾಗದೆ ಕುಸಿದಿಹಳು
ಯಾರ ಸಹಾಯವಿಲ್ಲದ ತಬ್ಬಲಿ
ತನ್ನೆಲ್ಲ ನೋವ ನಡುವೆ
ಜನ್ಮವಿತ್ತಳು ಮುದ್ದು ಕರುವಿಗೆ
ಕೊನೆಯುಸಿರೆಳೆದಳು ವಾರದೊಳಗೆ
ತನ್ನದೇ ಕರುವಿಗ ತಬ್ಬಲಿಯೆಂದು
ಸಾರುತ್ತಿದ್ದವು ತೆರೆದಿರುವ
ಆ ಮಾತೃ ಕಂಗಳು…