♦ ಹರೀಶ್ ಗೌಡ ಗಂಗೆಕೊಳ್ಳ ಗೋಕರ್ಣ
newsics.com@gmail.com
ಹೋಗಿ ಬಾ ದೊರೆಯೆ ಹೋಗಿ ಬಾ
ಕಾಣದ ಲೋಕವ ಹುಡುಕಿರುವೆ ನೀನು
ಕಂಡರೂ ಕಾಣದೆ ಮನದೊಳಗೊಮ್ಮೆ
ತಪ್ಪುವುದೇ ದಾರಿ ಪುನಃ ಬರಲು ನೀನು
ಕಲ್ಮಶವಿಲ್ಲದ ಹೃದಯಾಂತರಾಳವು
ಭಗವಂತ ಕುಳಿತಿಹನು ನಿನ್ನಾತ್ಮದಲ್ಲಿ
ವಿಧಿಯಾಟವನಿಲ್ಲಿ ಬಲ್ಲವರಿಲ್ಲ
ಆಡಿಸಿ ನಡೆದನು ಪರಮಾತ್ಮನಿಲ್ಲಿ
ಅರಸಂತೆ ಕಂಡು ಆಳಂತೆ ನಡೆದು
ಅಸಹಾಯಕ ಮನಗಳಿಗೆ ಆಧಾರವಾದರು
ಕರುನಾಡು ಕಂದನೀ ಅಭಿಮಾನದ ಬಿಂದು ನೀ
ಅಭಿಮಾನಿ ಮನದೊಳಗೆ ನೀವೆಂದು ಅಮರರು
ಕಣ್ಗಳು ತುಂಬಿವೆ ಹನಿಯೊಂದು ಜಾರಿದೆ
ಆ ನಗುವಿನ ಚಿತ್ತಾರ ಮನದೊಳಗೆ ತುಂಬಿದೆ
ರಾಷ್ಟ್ರದ ತಿರಂಗ ಬಿಗಿದಪ್ಪಿ ನಿಂತಿದೆ
ಅಪ್ಪುವಿನ ಆತ್ಮಕ್ಕೆ ಚಿರಶಾಂತಿ ಕೋರಿದೆ…