Tuesday, July 5, 2022

ಪಯಣ…

Follow Us

♦ ಪ್ರೊ. ಚಂದ್ರಶೇಖರ ಹೆಗಡೆ
ಕನ್ನಡ ಸಹಾಯಕ ಪ್ರಾಧ್ಯಾಪಕರು
newsics.com@gmail.com

ಬಾಳ ಹೆದ್ದಾರಿಯಲಿ
ಎದ್ದೋಡುವವರದೇ ಆರ್ಭಟ
ಎತ್ತ ಸಾಗುವರೋ
ಹೊರಟ ಮೇಲೆಯೇ ದಾರಿ ದಿಟ
ಅಪಾಯವೆಂದರೂ ಅವಸರ ಬಿಡರು ; 
ಅವರವರದೇ ಚಿತ್ತಹೂಟ

ಅದೆಂತಹ ದಾಳಿಯ ಧಾವಂತ 
ಒಬ್ಬರ ಮೇಲೊಬ್ಬರದಾಟ
ಎಲ್ಲಿದೆ ಸಹಜತೆಯ ಏಕಾಂತ 
ಮರೀಚಿಕೆಯೆಂಬಂತಿದೆ ಒಳನೋಟ
ದೂರ ದಾರಿಯ ತೀರದ ದಾಹ
ಮುಗಿಯದು; ಇರಲಿ ದೂರನೋಟ

ಗಂತವ್ಯವ ಶೋಧಿಸಿ ಶರಣು
ಶರಣಾದವರದದೋ ಇಲ್ಲಿದೆ ಪಾಠ
ಜೋಕೆ, ಮಧ್ಯೆ ಗಾಲಿ, ಮೈ,
ಮುರಿದುಕೊಂಡವರ ಗೋಳಾಟ
ವಿರಮಿಸಿ; ಅನುಭವಿಸಿ
ಕಂಡರಿಯದ ಬದುಕಿನ ತೋಟ

ಅಬ್ಬಾ ಇದೇ ಅಲ್ಲವೇ
ಶರೀಫರು ಹಾಡಿದ ಕೊಡದ ಮಾಟ
ಮುಗಿಯದ ಅಧ್ಯಾಯವಿದು
ಪಯಣವೆಂದರದೋ ದೊಡ್ಡಸ್ತಿಕೆಯ ಕಾಟ
ತಮ್ಮ ಪಾಡಿಗೆ ತಾವೆಂದುಕೊಂಡು
ಸೆಳೆತವಿಲ್ಲದೇ ಹೊರಟವರ ಆನಂದ ಕೂಟ

ಸವಾಲುಗಳ ದಿಣ್ಣೆ ದೊಣ್ಣೆಗಳ ಕೆನ್ನೆ
ಸವರಿದಂತೆ, ಬಾಳದೋ ಚೆಲ್ಲಾಟ
ದಟ್ಟಣೆಯೊಳಗೆಲ್ಲವ ಬಾಚಿಕೊಂಡು
ಉಳಿಯಬೇಕೆನ್ನುವ ಸ್ವಾರ್ಥದ ತಳ್ಳಾಟ
ವಿಶ್ವಪಥದ ಹಾದಿಯಲ್ಲೀಗ ಖಾಲಿತನ
ಗೊತ್ತಿಲ್ಲವೇ ಪಥೇಶ್ವರನಿಗೆ ಈ ಮಳ್ಳಾಟ

ಮತ್ತಷ್ಟು ಸುದ್ದಿಗಳು

vertical

Latest News

ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಸ್ಪೈಸ್ ಜೆಟ್

newsics.com ನವದೆಹಲಿ:  ದೆಹಲಿಯಿಂದ  ದುಬೈಗೆ ಪ್ರಯಾಣಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ದೋಷದ ಕಾರಣ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ  ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ...

ಚಾಕು ಇರಿದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವರ ಬಾಳಿಗೆ...

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರ ಶೇಖರ್ ಗುರೂಜಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.  ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ  ಕೊಲೆ ಮಾಡಲಾಗಿದೆ ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಂದ್ರಶೇಖರ್ ಗುರೂಜಿ ಅವರನ್ನು ಚಾಕುವಿನಿಂದ...
- Advertisement -
error: Content is protected !!