Saturday, April 17, 2021

ನದಿಯಂತೆ ಹಾಡೊಂದಿದೆ…

Sunitha Kushalanagara
P T Binu
♦ ಸುನೀತ ಕುಶಾಲನಗರ
♦ ಮೂಲ -ಮಲಯಾಳಂ, ಪಿ.ಟಿ. ಬಿನು
response@134.209.153.225
newsics.com@gmail.com

 

           ಹನಿ ಕವಿತೆಗಳು          

1.
ನನ್ನೊಳಗೆ
ನದಿಯಂತೆ
ಹಾಡೊಂದಿದೆ.
ನೀ ಹಾಡಿದಾಗಲೇ
ನಾನದನ್ನ
ಕೇಳಿದ್ದು.

2.
ಹೂಗಳು
ಜೇನು
ಹೀರುವ
ಚಿಟ್ಟೆಗಳೊಂದಿಗೆ
ಯಾವ ಭಾಷೆಯಲ್ಲಿ
ಮಾತನಾಡುತ್ತವೆ?

3.
ಮೌನ
ನಮ್ಮ ಮಧ್ಯೆ
ಒಂದು ಹಿಮ ಹನಿ
ಯಂತಿದೆ.
ನಿನಗೆ
ನಾ ಬರೆದ
ಕವಿತೆಯ
ಮೊದಲ ಸಾಲಿನಂತೆ.

4.
ಒಂದೇ ಮರದಲ್ಲಿ
ಎರಡು ಸಮಯಗಳಲ್ಲಿ
ಅರಳಿ
ಉದುರಿದ
ಹೂಗಳು
ನೀನೂ
ನಾನೂ
ನಾನೇ ಮೊದಲು
ನಿನಗಾಗಿ
ನನ್ನ ಗಂಧ
ಮರದ ಸುತ್ತ
ಉಳಿದಿದೆ.

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!