Saturday, June 10, 2023

ನ್ಯಾನೋ ಕತೆಗಳು

Follow Us

  • ಅಂಬ್ರೀಶ್ ಎಸ್ ಹೈಯ್ಯಾಳ್

 

ದೇವರ ಫೋಟೊ

ಬೆಳಗೆದ್ದು ದೇವರ ಫೋಟೊ ನೋಡೆಂದು
ಅಮ್ಮ ಹೇಳಿದಳು ನಾನು ಅವಳನ್ನೆ ದಿಟ್ಟಿಸಿ
ನೋಡಿದೆ

***

ಉಸಿರು

ಗಾಳಿ ಹಿಡಿದೆ ತೀರುತ್ತೆನೆಂದು ಉಸಿರು
ಬಿಗಿ ಹಿಡಿದು ಕುಳಿತ

***

ಭವಿಷ್ಯ

ಹಸ್ತವಿಲ್ಲದವನ ಭವಿಷ್ಯ ಅಧ್ಬುತವಾಗಿತ್ತು.

***

ಅನಿಷ್ಟ

ಅನೇಕ ಸ್ವಚ್ಚತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ
ಎಡಗೈ ಕೊನೆಗೆ ಅನಿಷ್ಟವಾಗೆ ಉಳಿಯಿತು.

***

ಸೋಮಾರಿ

ಅಲ್ರಾಮ್ ನಲ್ಲಿ ಸ್ನೂಜ್ ಕಂಡುಹಿಡಿದಿದ್ದು ಕೂಡ
ಒಬ್ಬ ಸೋಮಾರಿಯೆ…

***

ಸತ್ಯ

ಸುಳ್ಳು ಹೇಳಬೇಕೆಂದು ಎಣ್ಣೆ ಕುಡಿಸಿ
ಕೋರ್ಟಿಗೆ ಕರೆದುಕೊಂಡು ಬಂದರು
ಕುಡುಕ ಸತ್ಯ ಹೇಳಿದ

***

ಹಾರೈಕೆ

ವೃದ್ಧಾಶ್ರಮದಲ್ಲಿ ತಂದೆ ತಾಯಿ
ವಿದೇಶದಲ್ಲಿದ್ದ ಮಕ್ಕಳಿಗೆ
ನಮ್ಮಂತಾಗದೆ ಸುಖವಾಗಿರಲೆಂದು
ಹಾರೈಸಿದರು

***

ಸಾಧನೆ

ಶ್ರಮ ವಹಿಸಿ ದುಡಿದು ದೊಡ್ಡ
ಸಾಧನೆಗೈಯ್ಯಬೇಕೆಂದೆ ಆದರೆ
ವೈರಿಗಳಿರದೆ ಸೋತುಹೋದೆ

***

ಏಳು ಬಣ್ಣ

ಬಿಳಿ ಬಣ್ಣ ತಾನು ಚಂದ ಮತ್ತು
ಶುಭ್ರವೆಂದು ಹೊರಗೆ ಕೊಚ್ಚಿಕೊಳ್ಳುತ್ತಿತ್ತು
ಒಳಗಿನ ಏಳು ಬಣ್ಣಗಳು ಮರೆಯಲಿ
ಸುಮ್ಮನೆ ಕುಳಿತಿದ್ದವು

***

ಕುಡುಕ

ಬಾರ್ ಒಳಗೆ ನೀರು ಕುಡಿದು
ಹೊರ ಬರುವಾಗ ಅವನು
ಕುಡುಕನಾದ

***

ತಂತ್ರಜ್ಞಾನ

ಜಗತ್ತು ಅದೆಷ್ಟೊ ಮುಂದುವರೆದಿದ್ದರು
ಹಸಿವಾದಾಗ ಹೊಟ್ಟೆ ತುಂಬಿಸುವ
ತಂತ್ರಜ್ಞಾನ ಸೃಷ್ಟಿಸಲು ಸಾಧ್ಯವಿಲ್ಲ

ಮತ್ತಷ್ಟು ಸುದ್ದಿಗಳು

vertical

Latest News

ಚಾಮರಾಜನಗರ: ಮರಿ ಆನೆ ಅಟ್ಯಾಕ್, ಬೈಕ್ ಸವಾರ ಜಸ್ಟ್ ಮಿಸ್

Newsics.com ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗಡಿ ಭಾಗದ ನಾಲ್ ರೋಡ್ ಚೆಕ್ ಪೋಸ್ಟ್ ಬಳಿ ಆನೆ ಮರಿಯೊಂದು ದ್ವಿಚಕ್ರ...

‘ಶಕ್ತಿ’ ಯೋಜನೆಗೆ ನಾಳೆ ಚಾಲನೆ: ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

Newsics ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ...

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ...
- Advertisement -
error: Content is protected !!