Thursday, September 23, 2021

ಅಡ್ವಾಂಟೇಜ್

Follow Us

  • ಶ್ರೀರಾಜ್ ಎಸ್. ಆಚಾರ್

ಮೈ ಮುಟ್ಟಿ ಸುಮ್ನೆ ಅಡ್ವಾಂಟೇಜ್ ತಗೊಳ್ಳೊದು ಬೇಕಾಗಿಲ್ಲ. ಇಷ್ಟ ಆಗಲ್ಲ ನನಗೆ.
ಮುಟ್ಟಿದ್ದು ಬೇರೆಯವರನ್ನಲ್ಲ ನನ್ನ ಹೆಂಡತಿಯನ್ನೇ ಅವನಂದ.
ಹೋಹೋ… ಹೆಂಡ್ತಿ, ಡೈವರ್ಸ್ ಕೊಟ್ಟಾಗಿದೆ ನನ್ಗೆ ಮತ್ತೆ ನಿಮ್ಗೆ ಸಂಬಂಧ ಇಲ್ಲ.
ಮತ್ಯಾಕೆ ನನ್ ರೂಮ್ಗೆ ಬಂದಿದ್ದು…? ಅವನು ಕೇಳಿದ.
ಎರಡೆರಡು ಭಾರಿ ಬಸುರಿ ಮಾಡಿದ್ದೀರಿ ಅಲ್ವಾ..? ನಿಮ್ ಪಿಂಡನಾ ನನ್ ಹೊಟ್ಟೆಗ್ ಹಾಕಿದ್ದೀರಿ ಅಲ್ವಾ…?
ಅಷ್ಟಕ್ಕೂ… ನೀವೆ ಅಲ್ವೇ ನಿನ್ನೆ, ಮಮತಾ ನಿನ್ ಜೊತೆ ಮಾತಾಡ್ಬೇಕು ಅಂತ ಹೇಳಿದ್ದು. ಅದಕ್ಕೆ ಏನೋ ಹೀಗೆ ಕೆಳಗಿದ್ದವಳು ಮೇಲೆ ಬಂದೆ. ನಾನು ನಿಮ್ ತರ ಕರುಣೆ, ಭಾವನೆ ಇಲ್ದೆ ಇರೋಳಲ್ಲ ಅಂತ ಅಂದ್ಕೋಂಡಿದ್ದೀರಾ…?
ನನಗೂ ಭಾವನೆಗಳಿವೆ, ನೆನಪಿನಾಚೆಗೆ ಹೋಗಿಲ್ಲ ನಾನು. ಅವಳಂದ್ಲು.
ಅಷ್ಟಕ್ಕೂ ಏನಾಗಿತ್ತು. ಡೈವರ್ಸ್ ಬೇಕು ಅಂತ ಹೇಳಿದ್ದು ನೀನೆ ಅಲ್ವಾ..?
ಆವಾಗ ಭಾವನೆಗಳಿರ್ಲಿಲ್ವಾ..?
ಹೌದು… ಹೆಸರಿಗೊಬ್ಬಳು ಹೆಂಡ್ತಿ, ಮಂಚಕ್ಕೊಬ್ಬಳು ಹೆಂಡ್ತಿ ಇಟ್ಕೊಂಡವರ ಜೊತೆಗೆ ಇರೋದಕ್ಕೆ ಇಷ್ಟ ಇರ್ಲಿಲ್ಲಾ..? ಆಕೆಯ ದನಿಯಲ್ಲಿ ದುಃಖ ಉಮ್ಮಳಿಸುತ್ತಿತ್ತು.
ಮಮತಾ… ಜಸ್ಟ್ ಶಟ್ ಅಪ್… ! ನನ್ ಬಗ್ಗೆ ಎರಡೆನಿಸಿ ಮಾತಾಡ್ಬೇಡ. ಅವನ ಸ್ವರ ಏರಿತ್ತು. ಸಿಟ್ಟಿನಿಂದಂದ.
ವೈ ಶುಡ್ ಐ.., ಮಿಸ್ಟರ್ ಕಿರಣ್‍ಚಂದ್ರ..? ನಾನು ಮನಸ್ಸಿನಲ್ಲಿ ಗಟ್ಟಿಯಾಗಿದ್ದೆ.
ನಾನೊಬ್ಬ ರಂಗ ನಿರ್ದೇಶಕ. ಈ ಸಮಾಜ ನನ್ನನ್ನ ಬೇರೆ ರೀತಿಯಲ್ಲಿ ಗೌರವಿಸುತ್ತದೆ. ಯು ನೋ..? ಅವನಂz.À
ನಾನು, ಒಬ್ಬ ಶಾಲಾ ಭಾಷಾ ಶಿಕ್ಷಕಿ, ನನಗೂ ಈ ಸಮಾಜದಲ್ಲಿ ಸ್ಥಾನ ಮಾನ, ಮರ್ಯಾದೆ, ಗೌರವವಿದೆ. ಅದು ನಿಮ್ಮಂತ ರಂಗ ನಿರ್ದೇಶಕರಿಗೆ ಗೊತ್ತೆ ಇರಬೇಕಲ್ವೇ..?. ಅವಳಂದ್ಲು. ಆ ಮಾತಿನಲ್ಲಿ ನೋವಿತ್ತು.
ನನ್ಗೆ ಗೊತ್ತು. ಗೋಡೆಗೆ ಒರಗಿ ಸಿಗರೇಟು ಸೇದುತ್ತಾ ಹೇಳಿದ.
ಹಾಗಾದ್ರೆ.., ಹೆಂಡ್ತಿ ಇದ್ದೂ, ಆ ಹೆಂಡ್ತಿಗೆ ಎರಡು ಭಾರಿ ಬಸುರಿ ಮಾಡಿಯೂ… ಇನ್ನೊಬ್ಬಳ ಜೊತೆ ರಾತ್ರಿ ಕಳೆದಿದ್ದೀರಿ ಅಂದ್ರೆ ಏನರ್ಥ.?
ಮಮತಾ.., ನೀನು ನನ್ನನ್ನ ತುಂಬಾ ಕೆಣಕ್ತಿದ್ದೀಯಾ
ಕೆಣ್ಕೋ ಹಾಗೆ ನನ್ನ ಮನ್ಸಿಗೆ ಬೆಂಕಿ ಹಚ್ಚೀದ್ದೀರಿ ನೀವು.
ಆಕೆ ನನ್ನ ರಂಗ ಶಾಲಾ ವಿದ್ಯಾರ್ಥಿನಿ. ನನ್ನ ನಿರ್ದೇಶನ ಇಷ್ಟ ಪಟ್ಟವಳು. ನನ್ನ ನಟನೆ ಇಷ್ಟ ಪಟ್ಟವಳು. ಅವಳ ಬಯಕೆಯಂತೆ ಒಂದು ದಿನ ರಾತ್ರಿ ಮಲಗಿದ್ದೆ. ಏನಾಯ್ತು ಈಗ.
ಹೋ ಅವಳು ನಿಮ್ಮನ್ನ ಕರೆದ್ಲಂತೆ.., ನೀವು ಅವಳ ಬಯಕೆಯಂತೆ ಹೋದ್ರಿ. ಮಲಗಿದ್ರಿ, ಅವಳನ್ನ ಸೇರಿದ ನೆನಪಿಗೆ ಒಂದು ಮಗುವನ್ನೂ ಅವಳ ಕೈಗೆ ಕೊಟ್ರಿ. ಎಷ್ಟು ಸುಲಭವಾಗಿ ಹೇಳ್ತೀರಿ. ಅಸಹ್ಯ ಅನ್ಸಲ್ವಾ…ನಿಮ್ಗೆ..? ಹೋಗಿ ಅವಳ ಜೊತೆನೇ ಮಲಗಿ ಈ ಮನೆಗೆ ಯಾಕ್ ಬರ್ತೀರಿ..? ಡೈವರ್ಸ್ ಆಗಿದೆ.
ನಾನೊಬ್ಬ ರಂಗ ನಿರ್ದೇಶಕ. ನನ್ನನ್ನ ಸಮಾಜ ಗುರುತಿಸುವುದೇ ಬೇರೆ ರೀತಿಯಲ್ಲಿ. ಮೈಂಡ್ ಇಟ್. ಅವನಂದ. ಅಷ್ಟಕ್ಕೂ ಅವಳು ಈಗ ನನ್ನನ್ನ ಹತ್ತಿರಕ್ಕೆ ಸೇರಿಸುತ್ತಿಲ್ಲ.
ಯಾಕೆ..? ಆಕೆ ತಮಗೆ ಎರಡÀನೆಯವಳು ಅಂತನಾ..? ಪ್ರಶ್ನೆ ಹರಿತವಾಗಿತ್ತು.
ನನ್ನನ್ನ ಕೇಳೊರಿದ್ದಾರೆ ಮಮತಾ..,
ನನ್ನನ್ನಾ..? ಕೇಳೋರಿಲ್ವಾ..? ಸಮಾಜ ನನ್ನನ್ನ ಈಗಾಗಲೇ ಗಂಡ ಬಿಟ್ಟವಳು ಅಂತ ಕರೆಯುತ್ತಿದೆ. ಅದಕ್ಕೆ ನೀವು ಮಾಡಿದ ಒಳ್ಳೆಯ ಕೆಲಸವೇ ಕಾರಣ.
ನೀವೇನೂ ಸಮಾಜದ ಮಾತಿಗೆ ವಿಷಯವಾಗದೆ ಇಲ್ಲ ಬಿಡಿ. ನಿಮ್ಮನ್ನೂ ಹೆಂಡ್ತಿ ಬಿಟ್ಟವಳು, ಎರಡನೇ ಮದ್ವೆ ಆದೋನು ಅಂತೆಲ್ಲಾ ಹೇಳುತ್ತಿದ್ದಾರೆ.
ಕೇಳೋದಕ್ಕೆ ಹಿತವಾಗುತ್ತೇನೋ ಅಲ್ವಾ..?
ಪ್ರಶ್ನೆ, ಕಿರಣ್‍ಚಂದ್ರನನ್ನು ಕೆರಳಿಸಿತು.
ಆಕೆಯ ಜೊತೆ ನಾನು ಯಾವುದೇ ಅಗ್ನಿ ಸಾಕ್ಷಿಯಾಗಿ ಮದ್ವೆ ಆಗಿಲ್ಲ.
ಸಾಕ್ಷಿಯೊಂದು ಬೆಳಿತಿದೆ ಅಲ್ವಾ ಅವಳ ಹೊಟ್ಟೆಯಲ್ಲಿ. ನಿಮ್ಮದೇ ವೀರ್ಯ ಅವಳ ಗರ್ಭವನ್ನು ಸೇರಿ. ಮತ್ತೇನು ಬೇಕು ಸಾಕ್ಷಿ..?
ಅದು ಸಮಾಜಕ್ಕೆ ಗೊತ್ತಿಲ್ಲ. ಅವನಂದ.
ಹೋ ಗೊತ್ತಿಲ್ಲದ ಹಾಗೆ ಏನನ್ನ್ಬೇಕಾದರೂ ಮಾಡ್ಬಹುದಾ…? ಡೈವರ್ಸ್ ಆಗಿದೆ, ಹೆಂಡ್ತಿ ಬಿಟ್ಟವನಿಗೆ ಇನ್ನೊಂದು ಮದ್ವೆ ಆಗಿದೆ. ಆದ್ರೂ ಒಂದೆ ಮನೆಯಲ್ಲಿ ಮೇಲೆ ಕೆಳಗೆ ಇದ್ದಾರೆ. ಅಂತ ಜನರು ಆಡ್ಕೋತ್ತಿದ್ದಾರೆ.
ಆಡ್ಕೊಳ್ಳಲಿ ಬಿಡು. ಯಾಕೆ ಟೆನ್ಶನ್ ಮಾಡ್ಕೊತೀಯಾ..?
ನೀವೊಬ್ಬ ರಂಗ ನಿರ್ದೇಶಕ, ಸಮಾಜ ನಿಮ್ಮನ್ನ ನೋಡುವ ರೀತಿಯೇ ಬೇರೆ. ಸಮಾಜದಲ್ಲಿ ಮರ್ಯಾದೆ ಉಳಿಸಿಕೊಳ್ಳಬೇಕಾದರೆ, ಹಾಗೆ ಬದುಕಬೇಕು.
ನಿಮ್ಮ ಮರ್ಯಾದೆ ಉಚಿತವಾಗಿ ಹರಾಜಾಗುತ್ತಿದೆ. ನನ್ನದೂ ಕೂಡ. ನಾನೊಬ್ಬಳು ಹೆಂಗಸು. ನನಗಿಲ್ಲಿ ಸಮಾಜ ಒಂದು ಚೌಕಟ್ಟು ಹಾಕಿದೆ. ಆಕೆಯ ಸ್ವರ ಅಳುತ್ತಿತ್ತು.
ನನಗೂ ಚೌಕಟ್ಟಿದೆ. ನಾನೊಬ್ಬ ರಂಗ ನಿರ್ದೇಶಕ.
ಆ ಚೌಕಟ್ಟನ್ನ ದಾಟಿ. ಬೇರೊಂದು ಚೌಕಟ್ಟಿನೊಳಗೆ ತಮ್ಮ ಆಟ ಪ್ರದರ್ಶಿಸಿ ಬಂದಿಲ್ವೆ ನೀವು. ಪ್ರಶ್ನೆ ಬೆಂಕಿಯಂತಿತ್ತು.
ಮಮತಾ… ನಾನು ನಿನ್ನ ಗಂಡ ನೆನಪಿರಲಿ. ನೆತ್ತಿಗೇರಿದ ಸಿಟ್ಟಿನಿಂದ ಹೇಳಿದ.
ಹೆಲೋ…ಯಾರು ಹೇಳಿದ್ದು..? ಡೈವರ್ಸ್ ಆಗಿದೆ. ನಿಮಗೆ, ನನಗೆ ಸಂಬಂಧವಿಲ್ಲ. ಅವಳ ಮೈ ಸುಖ ಹೀರುವಾಗ.., ನಾನು ನಿಮ್ಮ ಹೆಂಡ್ತಿ ಅಂತ ಮರೆತು ಹೋಗಿತ್ತಾ..?
ಕೋಣೆಯ ಕತ್ತಲು. ನಾಚಿಕೆ, ಮಾನ ಯಾವುದು ಇರಲ್ಲ..! ಇನ್ನು ನೆನಪು ಎಲ್ಲಿಯ ವಿಚಾರ..? ನಾನಂದೆ.
ಅವನಲ್ಲಿ ಮಾತು ಮೌನ ಮುರಿಯಲಿಲ್ಲ. ಮಾಡಿದ್ದು ತಪ್ಪೆನಿಸಿತೇನೋ ಅವನಿಗೆ.
ಸ್ವಾರಿ ಮಮತಾ.., ಐ ಸ್ಪಾಯಿಲ್ಡ್ ಯುವರ್ ಲೈಫ್. ಮೊಣಕಾಲೂರಿ ಕೇಳಿದ. ನನಗೋ ಕಣ್ಣಿರು ತೊಟ್ಟಿಕ್ಕುತ್ತಿತ್ತು. ಅವನ ಕಣ್ಣಿನಲ್ಲೂ.
ನಾನು ಈಗ ಗೌರವ ನೀಡುವುದನ್ನು ಮರೆತಿದ್ದೇನೆ. ‘ಅವನು’ ಅಂತ ಹೇಳುತ್ತಿದ್ದೇನೆ.
ನನ್ನ ಲೈಫ್ ಹಾಳು ಮಾಡಿದ್ದಕ್ಕಿಂತ ಹೆಚ್ಚು ಅವನ ಲೈಫನ್ನೇ ಅವನು ಹಾಳು ಮಾಡಿಕೊಂಡ.
ಮಾತಾಡಬೇಕು ಅಂತ ಹೇಳಿದ್ದು ಯಾಕೆ..? ಏನು ಮಾತಾಡೊಕಿದೆ ಇನ್ನು..? ಅಂತ ಕೇಳಿದೆ.
ಮಮತಾ…ಮನ್ಸಿಗ್ ಚುಚ್ಚ್ಬೇಡ್ವೆ.. ಪ್ಲೀಸ್. ನನ್ನನ್ನ ಕ್ಷಮಿಸಿ ಬಿಡು.
ನಾನ್ ಕ್ಷಮ್ಸಿದ್ರೂ.. ನನ್ ಮನ್ಸು ಕ್ಷಮ್ಸಲ್ವಲ್ಲಾ..ಏನ್ ಮಾಡ್ಲಿ..?
ಹೆಣ್ಣಿನ್ ಮನ್ಸು. ನೋವಾದದಕ್ಕೆ ಕ್ಷಮ್ಸೋದಿಲ್ಲ.
ಐ ಮೆ ಸೆ.., ಇಟ್ಸ್ ಓಕೆ. ನಾನು ಹೇಳ್ಬ್ಹುದು ಕ್ಷಮ್ಸಿದ್ದೀನಿ ಅಂತ.
ಕ್ಷಮ್ಸಲ್ವೆ ನನ್ನೊಳಗಿನವಳು. ನನ್ನ ಕಣ್ಣಲ್ಲಿ ನೀರು ತುಂಬಿತ್ತು.
ನನ್ನ ಕಾಲನ್ನು ಹಿಡಿದು ಬಿಟ್ಟ. ಸಹಿಸಿಕೊಳ್ಳುವುದಕ್ಕಾಗಲಿಲ್ಲ ನನಗೆ. ಮತ್ತೆ ದುಃಖ ಉಮ್ಮಳಿಸಿತು. ಎಷ್ಟಿದ್ದರೂ..ಮದ್ವೆ ಆದವನಲ್ವೇ.., ಸ್ವಲ್ಪ ದಿನ ನಾನು ಪ್ರೀತಿಯಿಂದ ಮಾತಾಡಿಸಿದ್ದೇನೆ. ನನಗೆ ಭಾವನೆಗಳಿವೆ. ಕ್ಷಮಿಸೋದಿಲ್ಲ ಅಂತ ನನ್ನ ಒಳ ಮನಸ್ಸೂ ಹೇಳುತ್ತಿಲ್ಲ. ಆದ್ರೆ ಅವನಿಗೆ ನನ್ನ ಒಳಮನಸ್ಸು ಸುಟ್ಟು ಹೋಗಿದ್ದು ತೋರಿಸಬೇಕು ಎಂದು ಹೇಳುತ್ತಿತ್ತು.
“ಕ್ಷಮಯಾ ಧರಿತ್ರಿ” ಎಷ್ಟು ನೋವು ಕೊಟ್ಟಿಲ್ಲ ಭೂಮಿಗೆ. ಆಕೆ ಕ್ಷಮಿಸಲಿಲ್ವೇ. ನೊಂದಾಗ ಪ್ರತಿಕಾರ..ವಿಕೋಪಗಳ ಮೂಲಕ ಪಾಠ ಹೇಳಿ ತಿಳಿಸಿ.
ಪ್ರತಿಕಾರ ಏನಿಲ್ಲ ನನಗೆ. ಭೂಮಿಗೂ ಇಲ್ಲ.
ನೊಂದಿದ್ದೇನೆ ಈ ಜನರ ಮಾತುಗಳಿಂದ. ಅದು ಇನ್ನು ನನ್ನಿಂದ ದೂರ ಹೋಗುವುದಿಲ್ಲ. ಅದು ನನ್ನ ಮನಸ್ಸನ್ನು ಮತ್ತೆ ಮತ್ತೆ ಹಿಂಡಿ ಹಿಂಸಿಸುತ್ತಲೇ ಇರುತ್ತದೆ.
ಇವನದ್ದೇ ತಪ್ಪು ಅಂತ ಹೇಳಲಾರೆ ನಾ. ಆಕೆ ಇವನ ಮನಸ್ಸನ್ನು ಕೆಡಿಸಿರಬಹುದು. ಆದ್ರೂ… ಇವನೊಬ್ಬ ರಂಗ ನಿರ್ದೇಶಕ. ಸಾಮಾನ್ಯ ಜ್ಞಾನ ಬೇಡ್ವೇ..? ಮದ್ವೆ ಆದವಳಿಗೆ ಎರಡು ಮಕ್ಕಳಿರುವಾಗ, ಸಮಾಜದಲ್ಲಿ ತನ್ನ ಜವಾಬ್ದಾರಿ ಏನು ಅಂತ ಅವನ ತಲೆಗೆ ಬಂದಿರಲಿಲ್ವೇ..? ಎಂಬ ಪ್ರಶ್ನೆ ಯಾವಾಗಲೂ ಕಾಡೋದು ನನ್ಗೆ.
ಇಬ್ಬರು ಮಕ್ಕಳು, ಇನ್ನೂ ಚಿಕ್ಕವರು. ನನ್ನಮ್ಮನ ಮನೆಯಲ್ಲಿದ್ದಾರೆ. ಆ ಮಕ್ಕಳಿಗೆ ಈ ವಿಚಾರ ಗೊತ್ತಾದ್ರೆ…ಏನ್ ಮಾಡೋದು…? ಇವನಿಂದಲೇ ಹುಟ್ಟಿದ್ದು.
ಈ ಜವಾಬ್ದಾರಿಗಳೆನ್ನೆಲ್ಲಾ ಮರೆಯುವವರಿಗೆ ಏನ್ ಹೇಳೊದು. ನನ್ನದಾಯ್ತು ಬದುಕು. ಇವತ್ತೋ ನಾಳೆನೋ.
ಆದ್ರೆ ನನ್ನ ನಾಳೆಗಳ ಕಥೆ ಏನು..?
ಗರ್ಭಗುಡಿಯೊಳಗೆ ಬೆತ್ತಲೆ ಕುಳಿತಿರುವ ದೇವರೆ ಹೇಳಬೇಕು.
ಬದುಕು ಸೊನ್ನೆ, ಅದರೊಳಗಿರುವ ಮೌನದೊಳಗೆ ಮೌನವಾಗಿದ್ದ ವಾಸನೆ ಅಮೂರ್ತ ಸಂಕಲನದ ಗಾಳಿ ತಾಗಿ ದುರ್ನಾತ ಬೀರುತ್ತಿದೆ.
ನಾನೂ ದುರ್ನಾತ ಬೀರುತ್ತಿದ್ದೇನೆ.
ಅವನೊಂದಿಗೆ ಪ್ರೀತಿಯಿಂದಲೇ ಕತ್ತಲೆಯೊಳಗೆ ಬೆತ್ತಲಾದೆ.
ಈಗ ನನ್ನ ಬದುಕು ಬೆತ್ತಲಾಗಿ ಹೋಯ್ತು. ಅವನಿಂದಲೇ.
ಅವನನ್ನು ಕ್ಷಮಿಸುತ್ತೇನೆ, ನಾನೊಬ್ಬಳು ಹೆಣ್ಣು. ಶಾಪ ಹಾಕುವವಳಲ್ಲ.
“ಜಾÐನಸ್ಯಾಭರಣಂ ಕ್ಷಮಾ”
ಜಾÐನ ಕಾಣುವುದು ಕ್ಷಮಾಗುಣದಿಂದ.
ಜ್ಞಾನ ನನಗಿದೆ. ಅದೇ ಜ್ಞಾನದಿಂದ ನೋವು ನುಂಗಿದ್ದೇನೆ.
ಅವನಿಗೂ ಇದೆ. ಕ್ಷಮೆ ಕೇಳುತ್ತಿದ್ದಾನೆ.
“ಥಿಂಗ್ಸ್ ಮೆ ಎಂಡ್,
ಬಟ್ ಮೆಮೊರೀಸ್ ಲಾಸ್ಟ್ ಫಾರೆವರ್”.
ಅವನು ಕ್ಷಮೆ ಕೇಳುತ್ತಿದ್ದಾನೆ, ನಾನು ಕ್ಷಮಿಸಬಹುದು. ಆದರೆ ಅವನಿಂದಾದ ನೋವಿನ ಸುಂದರ ನೆನಪುಗಳು ಶಾಶ್ವತವಾಗಿರುತ್ತದೆ ಅಲ್ವಾ..?
ಒಬ್ಬ ಹೆಣ್ಣಾಗಿ ನೊಂದು ಬೆಂದು ಸುಮ್ಮನಿರಲೇ,
ಕ್ಷಮಿಸಿ ಬಿಡಲೇ.
ಹೆಣ್ಣಿಗೋ…, ನೋವು ಸಿಹಿ ಭಕ್ಷ್ಯ.

ಮತ್ತಷ್ಟು ಸುದ್ದಿಗಳು

Latest News

ಅಕ್ಟೋಬರ್ ಒಂದರಿಂದ ಮೈಸೂರು ಅರಮನೆಗೆ ಪ್ರವೇಶ ನಿಷೇಧ

newsics.com ಮೈಸೂರು: ಅರಮನೆಯಲ್ಲಿ ರಾಜಮನೆತನದ ಸದಸ್ಯರು ಸಾಂಪ್ರದಾಯಿಕ ದಸರಾ ಆಚರಣೆಗೆ ಸಿದ್ದತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ಒಂದರಿಂದ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಅರಮನೆಯಲ್ಲಿ  ರತ್ನ ಖಚಿತ ಸಿಂಹಾಸನದ...

ವಿಮಾನ ಪ್ರಯಾಣದಲ್ಲೂ ಕಡತ ಪರಿಶೀಲಿಸಿದ ಮೋದಿ

newsics.com ಏರ್ ಇಂಡಿಯಾ ವಿಶೇಷ ವಿಮಾನ: ಪ್ರಧಾನಿ ನರೇಂದ್ರ ಮೋದಿ ಇದೀಗ ಅಮೆರಿಕ ತಲುಪಿದ್ದಾರೆ. ಭಾರತ ಅಮೆರಿಕ ನಡುವಿನ ಪ್ರಯಾಣದ ವೇಳೆ ಕೂಡ ಅವರು ಕರ್ತವ್ಯ ನಿಭಾಯಿಸುತ್ತಿದ್ದರು. ಕಡತಗಳನ್ನು ಪರಿಶೀಲಿಸಿದರು. ಈ ಕುರಿತ ಚಿತ್ರವೊಂದನ್ನು ಪ್ರಧಾನಿ...

ಹೊಸದಾಗಿ 31,923 ಕೊರೋನಾ ಪ್ರಕರಣ, 31,990 ಮಂದಿ ಗುಣಮುಖ, 282 ಜನರ ಸಾವು

newsics.com ನವದೆಹಲಿ: ದೇಶದಲ್ಲಿ ಹೊಸದಾಗಿ  31,923  ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.  ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 31,990  ಮಂದಿ ಕಳೆದ 24 ಗಂಟೆ ಅವಧಿಯಲ್ಲಿ ಗುಣಮುಖರಾಗಿದ್ದಾರೆ. ದೇಶದ ವಿವಿಧ ಆಸ್ಪತ್ರೆಗಳಲ್ಲಿ 3,01,604  ಮಂದಿ ಚಿಕಿತ್ಸೆ...
- Advertisement -
error: Content is protected !!