ನ್ಯಾನೋ ಕತೆ
* ಸಿಂಧು ಭಾರ್ಗವ್ ಬೆಂಗಳೂರು
response@134.209.153.225
ಘಮವು ನಿನ್ನ ತನುಮನವ ಸುತ್ತಲಿ. ಕಾಲೇಜಿನ ದಿನಗಳಲ್ಲಿ ಅವರಿಬ್ಬರ ಸ್ನೇಹ, ಬೆಳೆದು ಪ್ರೀತಿಯಾಗಿ ತಿರುಗಿತು. ಊರ ತುಂಬೆಲ್ಲ ಪುಕಾರು ಹಬ್ಬಲು ಶುರುವಾಯಿತು. ಮಾನ ಮರ್ಯಾದೆಗೆ ಹೆದರಿ ನೆಂಟರಿಷ್ಟರಾರೂ ಒಪ್ಪಿಗೆ ಸೂಚಿಸದೇ ಪ್ರೇಮಿಗಳ ದೂರ ಮಾಡಿದರು. ಕೊನೆಯ ಭೇಟಿಯಾಗಿ ಗೆಳೆಯನು ನಾಲ್ಕು ಮಾತನಾಡಲು ಇಚ್ಛಿಸಿದನು. “ಪ್ರೀತಿಯಲಿ ನೋವು ನಗುವು ಮಾಮೂಲಿ ಗೆಳತಿ. ನೀನು ಸಿಕ್ಕ ಪ್ರತಿಕ್ಷಣ ನಾನು ಆತ್ಮಾನಂದವ ಪಡೆದಿದ್ದೆ. ನಮ್ಮ ಪ್ರೀತಿಯ ಹೆಜ್ಜೆ ಗುರುತುಗಳು ಊರು ತುಂಬಾ ಹಬ್ಬಿದ ಬಳ್ಳಿಗಳಾಗಿವೆ. ಮರೆಯದೆ ನೆನಪಿನ ಸುಮಗಳು ಅರಳಿದಾಗೆಲ್ಲ ಕೊಯ್ದು ನಿನ್ನ ತುರುಬಿನಲ್ಲಿರಿಸಿಕೋ”. ಆಗ ಹುಡುಗಿಯು ನಿನ್ನ ಬಿಟ್ಟಿರಲು ಸಾಧ್ಯವೇ ಇಲ್ಲ ಎಂದು ಒಂದು ಉಪಾಯವನ್ನು ಕಿವಿಯಲ್ಲಿ ಉಸುರಿದಳು.
ಕೊನೆಗವರು ಉದ್ಯೋಗದ ಹೆಸರಿನಲ್ಲಿ ಊರು ಬಿಟ್ಟು ಲಿವ್_ಇನ್ ನಲ್ಲಿ ಬದುಕಲಾರಂಭಿಸಿದರು.