Sunday, November 29, 2020

ಮಿಸ್ ಯು…

“ವಾವ್!!!
ಇಂತಹ ಕಾಂಪ್ಲಿಮೆಂಟ್ ನನಗೆ ಯಾವತ್ತೂ ಸಿಕ್ಕಿಲ್ಲ.
ಐ ಶುಡ್ ಮಾರ್ಕ್ ದಿಸ್ ಡೇ”
ನನ್ನ ಟೀಮ್ ಮೇಟ್ ಮೆಸೇಜ್ ಮಾಡಿದ್ದ. ಅವನ ಪರ್ಫಾರ್ಮೆನ್ಸ್ ಗೆ ಅಪ್ಪ್ರೆಶಿಯೇಶನ್ ಕೊಟ್ಟದ್ದಕ್ಕೆ ಖುಷಿಯಾಗಿ.
ನಾನು “ ಎಸ್, ಯು ಕ್ಯಾನ್ ಮಾರ್ಕ್ ಇಟ್, ಡಿಸೆಂಬರ್ ೧೧, ೨೦೧೯” ಅಂದೆ.
“ ಪೆದ್ದೆ, ಇದು ನವೆಂಬರ್ ೧೧, ೨೦೧೯… ನೀನೇನು ಡಿಸೆಂಬರ್ ಅನ್ತಿದ್ದೀಯಲ್ಲ? ವಾಟ್ಸ್ ರಾಂಗ್?”
“ಊಪ್ಸ್!! ಐ ಅಂ ಸಾರೀ” ಎಂದು ವಾಟ್ಸಪ್ ನಿಂದ ಹೊರಗೆ ಬಂದಿದ್ದೆ.
ಅರೆ!! ನಿಜ!! ಹೌದು ಏನಾಗಿದೆ ನಂಗೆ? ಡಿಸೆಂಬರ್ ಅಂತ ನನಗೆ ಯಾಕೆ ಅನ್ನಿಸ್ತು? ನಾನು ಕಾಲದಲ್ಲಿ ಹಿಂದೆ ಉಳಿದುಬಿಟ್ಟಿದ್ದೀನ ! ಅಥವಾ ಮುಂದೆ ಓಡಿ ಹೋಗಿದ್ದೀನಾ!
ಹಿಂದೆ ಉಳಿದಿರುವುದೂ ಸರಿ ಹಾಗೇ ಮುಂದೆ ನಿರೀಕ್ಷಿಸುತ್ತಿರುವುದೂ ಸರಿ. ಹೇಗೆ ಮರೆಯಲಿ ಆ ದಿನವ. ಅಂದೆಯಲ್ಲವೇ ನೀನು ನನ್ನ ಬಿಟ್ಟು ಹೋಗಿದ್ದು “ಸುಮಿ”? ನನಗೆ ಗೊತ್ತು ನಿಂಗೆ “ಸುಮಿ” ಅನ್ನೋದು ಇಷ್ಟ ಆಗಲ್ಲ. ಅದೊಳ್ಳೆ ಹುಡುಗಿ ಹೆಸರು ಥರ ಅನ್ಸುತ್ತೆ ಅಂತ ಮುಖ ದಪ್ಪ ಮಾಡ್ತಿ. ಆದ್ರೆ ನಂಗೆ ನಿನ್ನ ಸುಮನ್ ಗಿಂತ “ ಸುಮಿ” ಅನ್ನೋಕ್ಕೆ ಇಷ್ಟ ಕಣೋ. ಅಬ್ಬಬ್ಬಾ!! ಅದೆಷ್ಟು ಕೋಪ ನಿಂಗೆ? ಅಷ್ಟಕ್ಕೂ ನಿನ್ನ ಯಾವ ಗುಣ ಹುಡುಗಿ ಥರ ಇದೆ ಹೇಳು? ನನ್ನ ಬಿಟ್ಟು ಹೋಗುವಾಗ ಕೂಡ ಅದೆಷ್ಟು ಕಂಟ್ರೋಲ್ ಮಾಡಿದ್ದೆ ಅಳುನ…ಆ ಕಡೆ ತಿರುಗಿ ಕಣ್ಣು ಒರೆಸಿದ್ದು ನನಗೆ ಏರ್ಪೋರ್ಟ್ ಲಾಂಜ್ ನ ಗ್ಲಾಸ್ ಲಿ ಕಾಣಿಸಿತ್ತು. ನಿನೊಂದಿಗೆ ಇದ್ದಾಗ ಕ್ಷಣಗಳಂತೆ ಉರುಳೋ ಈ ಕಾಲ, ನೀನಿಲ್ಲದೆ ಕಳೆಯೋದೆ ಕಷ್ಟ ಆಗಿದೆ. ನೀನಿಲ್ಲದ ಈ ಆಫೀಸ್ ಕೂಡ ಸತ್ತಂತಿದೆ. ಕ್ಯಾಂಟೀನ್ ನಲ್ಲಿ ನಮಿಷ್ಟದ ಪನೀರ್ ಪರೋಟ ಕೂಡ ಯಾಕೋ ಈಗ ಸಪ್ಪೆ ಸಪ್ಪೆ. ಕ್ಯಾಂಟೀನ್ ಹುಡುಗ ಇತ್ತೀಚಿಗೆ, ದಿನಾ ನನ್ನ ಕಂಪ್ಲೇಂಟ್ ಕೇಳಲಾರದೆ ಮೊದಲೇ ಎರಡು ಚಿಲ್ಲಿ ಜಾಸ್ತಿ ಕೊಡ್ತಾನೆ. ತಿಂದ ಮೇಲೆ ನಾಲಿಗೆ ಉರಿದ ನೆಪದಲ್ಲಿ ನಿನ್ನ ನೆನಪಲ್ಲಿ ಎರಡು ಹನಿ ಕಣ್ಣೀರು ಹಾಕಿ ನಿರಾಳ ಆಗ್ತೀನಿ. ಅದೆಷ್ಟು ಕೋಪ ನಿನಗೆ! ಈ ಮಿರ್ಚಿ ತರಾನೆ!
“ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು” ಅನ್ನುವ ಹಾಗೇ, ಅಪ್ಪನ ಮತ್ತು ನಿನ್ನ ಜಗಳದಲ್ಲಿ ನಾನು. ಅವರೇನೋ ಹಾಗೇ ಮಾತು ಮಾತಲ್ಲಿ, “ಮಗಳಿಗಿಂತ ಜಾಸ್ತಿ ದುಡಿಯೋ ಗಂಡನಿಗೆ ಮಾತ್ರ ನನ್ನ ಮಗಳನ್ನು ಕೊಡ್ತೀನಿ, ನೀನು ಅವಳ ಜೂನಿಯರ್ ಸೊ ಪೇರ್ ಸರಿ ಹೋಗಲ್ಲ ಅಂತ…” ಅಂದ್ರು. ಸರಿ ಅದಕ್ಕೆ ನೀನು ಅಲ್ಲೇ ಚಾಲೆಂಜ್ ಮಾಡಿ ಬಿಡೋದ “ ಮೈನೆ ಪ್ಯಾರ್ ಕಿಯ” ಚಿತ್ರದ ಹೀರೋ ಸಲ್ಮಾನ್ ಖಾನ್ ಥರ! “ನಿಮ್ಮ ಮಗಳಿಗಿಂತ ಹೆಚ್ಚು ಸಂಬಳ ಸಂಪಾದಿಸಿದ ನಂತರವೇ ಅವಳನ್ನು ಮದುವೆಯಾಗೋದು” ಅಂತ!!! ಸ್ಟುಪಿಡ್! ನಿಮ್ಮ ಇಗೋ ನಲ್ಲಿ ನಾವು ಹೆಣ್ಣು ಮಕ್ಕಳ ಆಸೆಗಳಿಗೆ ಬೆಲೆಯೇ ಇಲ್ವೇ? ಯಾರಿಗೆ ಬೇಕು ನೀನು ಹೆಚ್ಚಿಗೆ ದುಡಿಯೋದು? ನೀನು ದುಡಿದರೇನು? ನಾನು ದುಡಿದರೇನು? ನಾನು ನೀನು ಒಂದೇ ಆದಾಗ! ಇದು ಅಪ್ಪನಿಗೆ ಮನವರಿಕೆ ಮಾಡಿ ಅವರನ್ನು ಒಪ್ಪಿಸೋದ್ರಲ್ಲಿ ಬಂದೆ ಬಿಟ್ಟೆಯಲ್ಲ “ಯುಎಸ್” ಆಫರ್ನೊಂದಿಗೆ. ನನಗಿಂತ ಎರಡರಷ್ಟು ಸಂಬಳದ ನೌಕರಿಯೊಂದಿಗೆ!!
” ಬರೀ ಒಂದೇ ವರ್ಷ ಚಿನ್ನ ಬಂದುಬಿಡ್ತೀನಿ, ಯು ಕ್ಯಾನ್ ಮಾರ್ಕ್ ದಿಸ್ ಡಿಸೆಂಬರ್ ೧೧, ನೆಕ್ಸ್ಟ್ ಇಯರ್ ಡಿಸೆಂಬರ್ ೧೧ ಅಷ್ತೊತಿಗೆ ಇಲ್ಲಿರ್ತೀನಿ.” ಅಂದ್ಯಲ್ಲ…ಈಗ ಗೊತ್ತಾಯಿತ ಒಂದು ವರ್ಷ ಕಳೆಯೋದು ಎಷ್ಟು ಕಷ್ಟ ಅಂತ…ದಿನದಲ್ಲಿ ಇಬ್ಬರೂ ಸಮಯ ಒಂದಿಸಿ ಒಮ್ಮೆ ನೀನು ಒಮ್ಮೆ ನಾನು ನಿದ್ದೆ ಬಿಟ್ಟು, ಸ್ಕೈಪಿ, ವೀಡಿಯೊ ಚಾಟಿಂಗ್ ಅಂತ ಜಾಗರಣೆ ಮಾಡೋದು.. ನಂತರ ಆಫೀಸ್ನಲ್ಲಿ ಪ್ರಾಜೆಕ್ಟ್… ಟಾರ್ಗೆಟ್…ಅಂತ ಒದ್ದಾಡೋದು. ಯಾಕೆ ಬೇಕಿತ್ತು ಇದೆಲ್ಲ!!
ನಿಂಜೊತೆ ವಾರಕ್ಕೊಂದು ಹಿಂದಿ ಸಿನಿಮಾ…ಆ ಸಿನಿಮಾ…ಈ ಸಿನಿಮಾ ಅಂತ ನೋಡಿದ್ದೇ ತಪ್ಪಾಯಿತು ಅಂತ ನನಿಗೆ ಈಗ ಅನ್ನಿಸ್ತಿದೆ. ಜೀವನವನ್ನೂ ಸಿನಿಮಾ ಎಂದು ಕೊಂಡೆ ಬಿಟ್ಟೆಯೋ ಏನೋ? “ಇನ್ನೂ ಐದು ತಿಂಗಳು ಹೇಗೆ ಕಳೆಯೋದು” ಅಂತ ನಿನ್ನೆ ಗೋಗರೆದೆಯಲ್ಲ.. ಇಲ್ಲಿ ನನ್ನ ಪರಿಸ್ಥಿತಿನೂ ಏನು ಬೇರೆಯಿಲ್ಲ. ಅದು ನಿನಗೂ ಗೊತ್ತು.
ಅಪ್ಪನಿಗೂ ಗೊತ್ತಾಗಿದೆ, ನೀನು ಛಲಗಾರ ಅಂತ. ಅವರೂ ಮನಸಾರೆ ನಿನ್ನ ಒಪ್ಪಿಆಯಿತು.. ಆದರೂ ಮುಖ ಸಣ್ಣ ಆಗಿದೆ… ಮದುವೆ ಆದ ಮೇಲೆ ನನ್ನ ನಿನ್ನ ಜತೆ ಯುಎಸ್ ಗೆ ಕಳಿಸ್ಬೇಕಲ್ಲ ಅಂತ…ಅವರು ಅವತ್ತು ನಿನ್ನ ಹೀಯಾಳಿಸದೆ ಇದ್ದಿದ್ರೆ ಅಳಿಯ ಮಗಳು ಕಣ್ಣಮುಂದೆ ಇಲ್ಲೇ ಇರ್ತಿದ್ರೂ ಅಂತ ಒದ್ದಾಡ್ತಿದ್ದಾರೆ. ಪಾಪ!
ಬೇಗ ಬಂದ್ಬಿಡು ಸುಮಿ… ನಿನ್ನ ಬಿಟ್ಟು ಇರೋದು ತುಂಬಾ ಕಷ್ಟ ಆಗ್ತಿದೆ. ನಿನ್ನ ಹೆಸರ ಕನವರಿಸೋದು ಎಲ್ಲರಿಗೂ ಗೊತ್ತಾಗಿರೋ ವಿಷ್ಯಾನೇ ಈಗ ಅದ್ರ ಜತೆ ನೀನು ಬರೋ ದಿನಾಂಕನೂ ಸೇರ್ಕೊಳ್ತಾ ಅಂತಾ!? “ ಡಿಸೆಂಬರ್ ೧೧, ೨೦೧೯” ಅಂತ. ಮಿಸ್ ಯು ಸುಮಿ…ಲವ್ ಯು ಲಾಟ್ಸ್.

ಮತ್ತಷ್ಟು ಸುದ್ದಿಗಳು

Latest News

ನಟಿ ದಿವ್ಯಾ ಭಟ್ನಾಗರ್’ಗೆ ಕೊರೋನಾ; ಸ್ಥಿತಿ ಚಿಂತಾಜನಕ

newsics.com ಮುಂಬೈ: ಕೊರೋನಾ ಸೋಂಕಿನಿಂದ ಬಳಲುತ್ತಿರುವ ಹಿಂದಿ ಕಿರುತೆರೆ ನಟಿ ದಿವ್ಯಾ ಭಟ್ನಾಗರ್​ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು...

ಮ್ಯೂಸಿಯಂ, ಪಾರಂಪರಿಕ ತಾಣಗಳ ಡಿಜಿಟಲೀಕರಣ- ಮೋದಿ

newsics.com ನವದೆಹಲಿ: ಅಜಂತಾ ಗುಹೆ ಸೇರಿದಂತೆ ವಸ್ತು ಸಂಗ್ರಹಾಲಯಗಳು ಮತ್ತಿತರ ಪಾರಂಪರಿಕ ತಾಣಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನಗಳು ನಡೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.ಮನ್ ಕಿ ಬಾತ್'ನ 71ನೇ ಆವೃತ್ತಿಯಲ್ಲಿ...

ದೇಶದಲ್ಲಿ ಒಂದೇ ದಿನ 41,810 ಮಂದಿಗೆ ಕೊರೋನಾ ಸೋಂಕು, 496 ಬಲಿ

ವಿಶ್ವದಾದ್ಯಂತ ಕೊರೋನಾ ಸೋಂಕು ಪ್ರಕರಣ ಏರಿಕೆ
- Advertisement -
error: Content is protected !!