Wednesday, May 31, 2023

ಯುವಜನರ ವ್ಯರ್ಥಾಲಾಪ…

Follow Us

ಸ್ಪೂರ್ತಿವಾಣಿ

  • ಪ್ರಭಾ ಭಟ್ ಹೊಸ್ಮನೆ

“Stand up, be bold, be strong. Take the whole responsibility on your own shoulders, and know that you are the creator of your own destiny. All the strength and succour you want is within yourselves. Therefore, make your own future.”
“ಎದ್ದು ನಿಲ್ಲಿ! ಧೀರರಾಗಿ! ಬಲಾಢ್ಯರಾಗಿ! ಜವಾಬ್ದಾರಿಯನ್ನೆಲ್ಲಾ ನೀವೇ ವಹಿಸಿ, ನಿಮ್ಮ ಅದೃಷ್ಟಕ್ಕೆ ನೀವೇ ಹೊಣೆ ಎಂದು ತಿಳಿದುಕೊಳ್ಳಿ. ನಿಮಗೆ ಬೇಕಾದ ಶಕ್ತಿ ಸಹಾಯವೆಲ್ಲ ನಿಮ್ಮಲ್ಲೆ ಇದೆ! ಆದಕಾರಣ ನಿಮ್ಮ ಭವಿಷ್ಯವನ್ನು ನೀವೇ ನಿರ್ಮಿಸಿಕೊಳ್ಳಿ.
(ಕೃತಿ ಶ್ರೇಣಿ ಸಂ.೨, ಪು.೧೫೨)
ಅದೊಂದು ಕಟ್ಟೆ. ಅದರ ಸುತ್ತೆಲ್ಲಾ ದಿನದ ಅದೇಷ್ಟೋ ಗಂಟೆಗಳ ಕಾಲ ಹರಟುತ್ತಲೋ, ಮೊಬೈಲ್ ಕುಟುಕುತ್ತಲೋ, ಹೋಗಿ ಬರುವ ಹೆಣ್ಣುಮಕ್ಕಳನ್ನು ಚುಡಾಯಿಸುತ್ತಲೋ ಇರುವ ಯುವಕರ ಗುಂಪು. ಎಲ್ಲರೂ ದೈಹಿಕವಾಗಿ ಸದೃಢರೇ. ವ್ಯಕ್ತಿತ್ವ ಮತ್ತು ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲು ಅತ್ಯಂತ ಪ್ರಶಸ್ತವಾದ ವಯಸ್ಸು ಅದು. ಹೀಗೆ ವ್ಯರ್ಥವಾಗಿ ಕಾಲಹರಣದಲ್ಲಿ ತೊಡಗಿರುವವರನ್ನು ನೋಡಿದಾಗ ನಮ್ಮ ದೇಶ ಇನ್ನೂ ಕೂಡ ದಶಕಗಳಿಂದ ಮುಂದುವರಿಯಲು ಪ್ರಯತ್ನಿಸುತ್ತಿರುವ ದೇಶ ಏಕೆ ಎಂಬುದು ಸ್ಪಷ್ಟವಾಗುತ್ತದೆ.
ಒಂದು ಮಗುವು ಬೆಳೆದಂತೆಲ್ಲ ಅದರ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಅಂತಹ ಜವಾಬ್ದಾರಿಗಳು ಮೊದಲು ನಮ್ಮ ಬಗೆಗಿನ ಜವಾಬ್ದಾರಿಯಿಂದ ಆರಂಭವಾಗಿ, ನಮ್ಮ ಕುಟುಂಬ, ಕುಟುಂಬದಿಂದ ಸಮಾಜ, ಊರು, ರಾಜ್ಯ ಆನಂತರ ನಮ್ಮ ದೇಶದ ವರಗೆ ವಿಸ್ತರಿಸಲ್ಪಡುತ್ತದೆ. ಒಂದೊಂದು ಹಂತದಲ್ಲಿಯೂ ನಮ್ಮ ಪಾಲಿಗಿರುವ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿಭಾಯಿಸುವುದು ಪ್ರತಿಯೊಬ್ಬನ ಆದ್ಯ ಕರ್ತ್ಯವಾಗಿದೆ.
ಹಾಗಾದರೆ ದೇಶದ ಪ್ರಗತಿಗೆ ಪಣತೊಡಬೇಕಾದವರು ಯಾರು? ಎಂಬ ಪ್ರಶ್ನೆ ಮೂಡುತ್ತದೆ. ಯುವಜನತೆ ದೇಶದ “ಶಕ್ತಿ” ಯಂತೆ. ಇಲ್ಲಿ “ಶಕ್ತಿ” ಎಂಬ ಪದವು ಬಹಳ ವಿಶಾಲವಾದ ಅರ್ಥವನ್ನು ಬಿಂಬಿಸುತ್ತದೆ. ನಿಮ್ಮ ಬಿಡುವಿನ ಸಮಯನ್ನು ಸ್ವಲ್ಪ ಚಿಂತನೆಯ ಕಡೆಗೆ ವ್ಯಯಿಸಿದರೆ ದೇಶದ ಪ್ರಗತಿಗೆ ನಾಂದಿಹಾಡಿದಂತೆಯೇ. ದೇಶದ ಪ್ರಗತಿಯೆಂದರೆ ನಮ್ಮ ಪ್ರಗತಿ ಕೂಡ ಹೌದು. ಎಲ್ಲೆಲ್ಲಿ ಯುವಶಕ್ತಿಯ ಉಪಯುಕ್ತತೆ ಅನಿವಾರ್ಯ ಎಂಬ ಪ್ರಶ್ನೆ ಬಂದಾಗ ನಮ್ಮ ದೇಶವನ್ನೇ ಗಣನೆಗೆ ತೆಗೆದುಕೊಂಡರೆ ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಚುನಾವಣೆಯ ಸಂದರ್ಭವನ್ನು ಮುಖ್ಯವಾಗಿ ಎತ್ತಿ ಹೇಳಬಹುದು. ಒಂದಷ್ಟು ಮಂದಿ ಯುವಕರು ತಮ್ಮ ಬಿಡುವಿನ ವೇಳೆಯನ್ನು ಚುನಾವಣೆಗೆ ಸ್ಪರ್ಧಿಸುತ್ತಿರುವ ಪ್ರತಿನಿಧಿಗಳ ಬಗೆಗೆ ವಿಮರ್ಶೆಗಳನ್ನು ಮಾಡುತ್ತಾ ತಿಳಿಯದವರಲ್ಲಿ ಚುನಾವಣೆಯ ಪಾರದರ್ಶಕತೆಯ ಅವಶ್ಯಕತೆಯ ಬಗೆಗೆ ಮಾಹಿತಿಯನ್ನು ನೀಡುವುದರ ಮೂಲಕ ಮೊದಲ ಹಂತದ ದೇಶದ ಬಗೆಗಿನ ಕಾಳಜಿಯ ಶಕ್ತಿಯನ್ನು ಪ್ರದರ್ಶಿಸಬಹುದು.
ಇಂದಿಗೂ ಅದೆಷ್ಟೋ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳೂ ಕೂಡ ಇಲ್ಲದಿರುವ ಉದಾಹರಣೆಗಳಿವೆ. ಊರಿನ ಅಗತ್ಯತೆಗಳು, ಅವಶ್ಯಕ ಮೂಲಭೂತ ಸವಲತ್ತುಗಳು ಇತ್ಯಾದಿಗಳ ಪಟ್ಟಿಯನ್ನು ತಯಾರಿಸಿ ಅಲ್ಲಿನ ರಾಜಕೀಯ ಸ್ಪರ್ಧಿಗಳ ಮುಂದಿಡುವುದು ಮತ್ತು ನಂಬಲರ್ಹ ಆಶ್ವಾಸನೆಗಳನ್ನು ಪಡೆದು ಅಂತಹ ಸ್ಪರ್ಧಿಗಳ ಬೆಂಬಲಕ್ಕೆ ನಿಲ್ಲುವುದು, ಅನಕ್ಷರತೆಯನ್ನು ಹೋಗಲಾಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದು, ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು, ಅಗತ್ಯತೆಗೆ ಅನುಗುಣವಾಗಿ ತಂತ್ರಜ್ಞಾನದ ಮಾಹಿತಿಗಳನ್ನು ಕೊಡುವುದು, ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವುದು ಇತ್ಯಾದಿ ಚಟುವಟಿಕೆಗಳಿಂದ ದೇಶದ ಪ್ರಗತಿಯಲ್ಲಿ ತೊಡಗಿಕೊಳ್ಳಬಹುದು. ಇನ್ಯಾರೋ ನಮ್ಮನ್ನು ಉದ್ಧರಿಸುತ್ತಾರೆ ಎಂದು ಕಾಯುವುದಕ್ಕಿಂತ ನಮ್ಮ ಸುತ್ತಮುತ್ತಲಿನವರ ಪ್ರಗತಿಗೆ ನಾವೂ ಸ್ವಲ್ಪವೇ ಸ್ವಲ್ಪ ಕೈ ಜೋಡಿಸುವದರಿಂದ ಸಾಮಾಜಿಕ ಸಮಾನತೆ ಸಾಧ್ಯವಾಗುತ್ತದೆ. ಹೀಗೆ ಯುವಕರ ಚಟುವಟಿಕೆಗಳು ದೇಶದ ಪ್ರಗತಿಗೆ ಪೂರಕವಾದಾಗ ಮಾತ್ರ ಉತ್ತಮ ಭವಿಷ್ಯದ ನಿರ್ಮಾಣವಾಗತ್ತದೆ. ಇದೊಂದು ಅತಿ ಚಿಕ್ಕ ಉದಾಹರಣೆ ಮಾತ್ರ. ಅಂತೆಯೇ ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ರೂಪಿಸುವುದು, ಪ್ರೋತ್ಸಾಹಿಸುವುದು ಮತ್ತು ತಮ್ಮನ್ನು ತಾವು ತೊಡಗಿಸಿಕೊಳ್ಳುವುದನ್ನು ರೂಢಿಸಿಕೊಳ್ಳುವುದರ ಮೂಲಕ ಯುವಶಕ್ತಿ ವಿವೇಕಾನಂದರ ಮಾತನ್ನು ಕಾರ್ಯರೂಪಕ್ಕೆ ತರಬಹುದು.

ಮತ್ತಷ್ಟು ಸುದ್ದಿಗಳು

vertical

Latest News

ಮಲಯಾಳಂ ಚಿತ್ರರಂಗದ ಖ್ಯಾತ ನಟ ಹರೀಶ್ ಪೆಂಗನ್ ನಿಧನ

newsics.com ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದ ಹರೀಶ್ ಪೆಂಗನ್ ಅವರು ಮಂಗಳವಾರ (ಮೇ 30) ನಿಧನ ಹೊಂದಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಹರೀಶ್ ಅವರು ಕಳೆದ...

ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ದುಷ್ಕೃತ್ಯ ಸಂಚು: ದಕ್ಷಿಣ ಕನ್ನಡದ 16 ಕಡೆ NIA ದಾಳಿ

newsics.com ಮಂಗಳೂರು: ಪ್ರಧಾನಿ ಮೋದಿಯವರ ಬಿಹಾರ ಕಾರ್ಯಕ್ರಮದ ವೇಳೆ ದುಷ್ಕೃತ್ಯ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಕ್ಷಿಣ ಕನ್ನಡ ಜಿಲ್ಲೆಯ 16‌ ಕಡೆ ದಾಳಿ‌ ನಡೆಸಿದೆ. ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ,...

ಸಮುದ್ರಕ್ಕೆ ಬಿತ್ತು ಉತ್ತರ ಕೊರಿಯಾ ಉಡಾಯಿಸಿದ ‘ಗೂಢಚರ್ಯೆ ಉಪಗ್ರಹ’

newsics.com ಸೋಲ್: ಉತ್ತರ ಕೊರಿಯಾ ಬುಧವಾರ ಉಡಾವಣೆ ಮಾಡಿದ ಗೂಢಚರ್ಯೆ ಉಪಗ್ರಹ ಸಮುದ್ರದ ಪಾಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಾಂತ್ರಿಕ ಕಾರಣಗಳಿಂದಾಗಿ ಗೂಢಚರ್ಯೆ ಉಪಗ್ರಹ ಸಮುದ್ರಕ್ಕೆ ಬಿದ್ದಿದೆ ಎಂದು ಉತ್ತರ ಕೊರಿಯಾ ಮಾಧ್ಯಮಗಳು ತಿಳಿಸಿವೆ. ಮೊದಲು...
- Advertisement -
error: Content is protected !!