Wednesday, October 5, 2022

ಮಕ್ಕಳೊಂದಿಗಿನ ಒಡನಾಟ ಹೆಚ್ಚಲಿ…

Follow Us

ಕೊರೋನಾ ತಂದಿಟ್ಟ ಪರಿಸ್ಥಿತಿಗೆ ಅನುಗುಣವಾಗಿ ಮಕ್ಕಳು ಈ ಬಾರಿ ಮನೆಯಲ್ಲೇ ‘ಮಕ್ಕಳ ದಿನ’ವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಶುಭಾಶಯ ಹೇಳಿ ಖುಷಿಪಡಿಸಿ, ಅವರೊಂದಿಗೆ ಒಡನಾಡಲು ಇದೊಂದು ಸುಸಂದರ್ಭ.

    ಮಕ್ಕಳ ದಿನ ವಿಶೇಷ    


♦ ಪ್ರಮಥ
newsics.com@gmail.com


 ಬ್ಬದ ಗಡಿಬಿಡಿ, ಲಕ್ಷ್ಮೀ ಪೂಜೆಗೆ ಸಿದ್ಧಪಡಿಸಬೇಕಿದ್ದ ಅಡುಗೆ, ಖಾದ್ಯಗಳ ಮಧ್ಯೆ ಇದ್ದಕ್ಕಿದ್ದ ಹಾಗೆ ನೆನಪಾಯಿತು, ಇಂದು ಮಕ್ಕಳ ದಿನ. ಸೀದಾ ಹೋಗಿ ಏನೋ ತನ್ನ ಪಾಡಿಗೆ ಆಟವಾಡಿಕೊಳ್ಳುತ್ತಿದ್ದ ಮಗನಿಗೆ ವಿಶ್ ಮಾಡಿದೆ. “ಇವತ್ತು ಮಕ್ಕಳ ದಿನ. ಹ್ಯಾಪಿ ಚಿಲ್ಡ್ರನ್ ಡೇ’ ಎಂದು ಖುಷಿಯಾಗಿಸಿದೆ. ಅಲ್ಲಿಯವರೆಗೆ ಕಿರಿಕಿರಿಯಲ್ಲೇ ಇದ್ದ ಮಗನೂ ಹಬ್ಬದ ಸಿದ್ಧತೆಗೆ ಪೂರ್ತಿ ಸಹಕಾರ ನೀಡತೊಡಗಿದ! ಸ್ಕೂಲ್ ನಲ್ಲಿ ಕಳೆದ ವರ್ಷ ಏನೇನೆಲ್ಲ ಮಾಡಿದ್ದೆವು ಎಂಬುದರ ಲಿಸ್ಟ್ ತಯಾರಾಗತೊಡಗಿತು.
ಪಾಪಚ್ಚಿಗಳು ಮಕ್ಕಳು. ಈ ಬಾರಿ ಮನೆಯಲ್ಲೇ ಬಂಧಿಯಾಗಿರುವ ಅವರ ಪಾಡು ಯಾರಿಗೂ ಬೇಡ. ಪ್ರತಿಬಾರಿ ಶಾಲೆಯಲ್ಲಿ ಆಡಿ ನಲಿಯುತ್ತ, ಹಾಡಿ ಕುಣಿಯುತ್ತ ತಮ್ಮ ಶಿಕ್ಷಕರಿಂದ “ಮಕ್ಕಳ ದಿನ’ದ ಶುಭಾಶಯ ಹೇಳಿಸಿಕೊಂಡು ಹಾರಿ ಮನೆಗೆ ಬರುತ್ತಿದ್ದವರು ಈ ಬಾರಿ ಮನೆಯಲ್ಲೇ. ಎಷ್ಟೋ ಮನೆಗಳಲ್ಲಿ ಅವರಿಗೆ ಕನಿಷ್ಠ ಪಕ್ಷದ ಶುಭಾಶಯ ಕೂಡ ಹೇಳುವುದಿಲ್ಲ. ತಮ್ಮ ಸಹಪಾಠಿಗಳೊಂದಿಗೆ ಮಕ್ಕಳ ದಿನದ ಸಂಭ್ರಮ ಆಚರಿಸಿಕೊಳ್ಳುವ ಅವರ ಹಕ್ಕೂ ಈ ಬಾರಿ ಮೊಟಕಾಗಿದೆ.
ಕಿರಿದಾಯ್ತು ಮಕ್ಕಳ ಲೋಕ…
2020ರ ಮಕ್ಕಳ ಪಾಲಿನ ಅತ್ಯಂತ ಕರಾಳ ವರ್ಷ ಎನ್ನಲು ಯಾವುದೇ ತೊಂದರೆಯಿಲ್ಲ. ಕೊರೋನಾ ತಂದಿಟ್ಟಿರುವ ಸಂಕಷ್ಟ ಪುಟ್ಟ ಮಕ್ಕಳ ಲೋಕವನ್ನು ಇನ್ನಷ್ಟು ಕಿರಿದಾಗಿಸಿದೆ. ಬೆಳೆಯುವ ಮಕ್ಕಳಿಗೆ ಬಾಹ್ಯ ಪ್ರಪಂಚದ ಒಡನಾಟ ಬೇಕೇಬೇಕು. ಹಳ್ಳಿಗಳ ಕಡೆಗೆ ಈ ಸಮಸ್ಯೆ ಅಷ್ಟೊಂದು ಗೊತ್ತಾಗುತ್ತಿಲ್ಲದೆ ಇರಬಹುದು. ಆದರೆ, ನಗರಗಳಲ್ಲಿ ಇದು ಎಷ್ಟರಮಟ್ಟಿಗೆ ಸಮಸ್ಯೆಯಾಗಿ ಕಾಡುತ್ತಿದೆ ಎಂದರೆ ಅಮ್ಮಂದಿರಲ್ಲಿ ಕೋಪ-ತಾಪ-ಕಿರಿಕಿರಿಯೊಟ್ಟಿಗೆ ಒಟ್ಟಾರೆ ಸಂಸಾರದ ನೆಮ್ಮದಿಯನ್ನು ಕೆಡಿಸಿದೆ. ಆನ್ ಲೈನ್ ಕ್ಲಾಸುಗಳಲ್ಲಿ ಒಂದೊಪ್ಪತ್ತು ಕಳೆಯುವ ಮಕ್ಕಳಿಗೂ ಅವರದ್ದೇ ಆದ ಸಮಸ್ಯೆಗಳು. ಆದರೆ, ಎಲ್ಲರಿಗಿಂತ ಮಿಗಿಲಾಗಿ 3-4-5 ವರ್ಷದ ಮಕ್ಕಳ ಪಾಡು ಯಾರಿಗೂ ಬೇಡ.
ಅಮ್ಮಂದಿರನ್ನು ಹೊರತುಪಡಿಸಿ ಮನೆಯ ಇತರರಿಗೆ ಮಕ್ಕಳ ಜತೆ ವ್ಯವಧಾನದಿಂದ ವರ್ತಿಸಿ, ಅವರೊಂದಿಗೆ ಬೆರೆಯುವಷ್ಟು ಸಮಯವಾಗಲೀ, ಪ್ರೀತಿಯಾಗಲೀ ಇರುವುದು ಕಡಿಮೆ. ಆದರೆ, ಅಮ್ಮನಿಗೋ ಕೈ ತುಂಬ ಕೆಲಸ. ಈ ನಡುವೆಯೂ ಸಮಯ ಮಾಡಿಕೊಂಡು ಮಗುವಿನ ಜತೆ ಸಮಯ ಕಳೆಯಲು ಯತ್ನಿಸುತ್ತಾಳೆ. ಈ ಜಂಜಾಟದಲ್ಲಿ ಆಕೆಯೂ ಬಸವಳಿದಿದ್ದಾಳೆ.
ಮೊಬೈಲ್ ಗೀಳು…
2020ರಲ್ಲಿ ಮೊಬೈಲ್, ಟಿವಿ ಗೀಳಿಗೆ ಬಿದ್ದ ಮಕ್ಕಳ ಸಂಖ್ಯೆ ಎಷ್ಟು ಹೆಚ್ಚಾಗಿದೆಯೋ ದೇವರೇ ಬಲ್ಲ. ಸದ್ಯಕ್ಕೆ ಈ ಸಮಸ್ಯೆ ತೀರ ದೊಡ್ಡದಾಗಿ ಗೊತ್ತಾಗುತ್ತಿಲ್ಲ. ಆದರೆ, ಶಾಲೆ ಆರಂಭದ ಬಳಿಕ ಓದಿನಲ್ಲಿ ಹಿಂದೆ ಬೀಳುವ, ಆಟಪಾಠದಲ್ಲಿ ಆಸಕ್ತಿ ತೋರದ ಸಮಸ್ಯೆಗಳು ಕಾಣುವ ಸಾಧ್ಯತೆ ಅಧಿಕವಾಗಿದೆ ಎನ್ನುತ್ತಾರೆ ಮನೋತಜ್ಞರು. ಅಷ್ಟೇ ಅಲ್ಲ, ಈ ಸಮಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯವೂ ಹೆಚ್ಚುತ್ತಿರುವುದು ಕಳವಳಕಾರಿ.
ಏನೇ ಆಗಲಿ, ಮಕ್ಕಳು ಮಕ್ಕಳೇ. ಹೂವಿನಂಥ ಮಕ್ಕಳಿಗೆ ಅಂಥದ್ದೇ ಪ್ರೀತಿ ಬೇಕು. ಆರೈಕೆ ಬೇಕು. ದೊಡ್ಡವರ ಪ್ರಪಂಚದ ಧಾವಂತದಲ್ಲಿ ಅವರನ್ನು ಮರೆಯದಿರೋಣ. ನಮ್ಮ ತಾಪತ್ರಯಗಳು ಯಾವತ್ತೂ ಇರುವಂಥವು. ಈ ನಡುವೆಯೂ ಅವರೊಂದಿಗೆ ಒಡನಾಡುತ್ತ, “ನಿಮ್ಮೊಂದಿಗೆ ನಾವಿದ್ದೇವೆ’ ಎನ್ನುವ ಧೈರ್ಯ ತುಂಬುತ್ತ ಅವರ ಪ್ರಪಂಚವನ್ನು ಸುಂದರವಾಗಿಸೋಣ.
ಎಲ್ಲ ಪಾಲಕರಿಗೂ ನಿಮ್ಮ ಮಕ್ಕಳ ದಿನದ ಶುಭಾಶಯಗಳು.

ಮತ್ತಷ್ಟು ಸುದ್ದಿಗಳು

vertical

Latest News

ಪ್ರಪಾತಕ್ಕೆ ಉರುಳಿದ ಬಸ್: 25 ಮಂದಿ ಸಾವು, 23 ಪ್ರಯಾಣಿಕರಿಗೆ ಗಾಯ

newsics.com ಪೌರಿ (ಉತ್ತರಾಖಂಡ): ಬಸ್ಸೊಂದು 500 ಮೀಟರ್ ಪ್ರಪಾತಕ್ಕೆ ಉರುಳಿದ ಪರಿಣಾಮ 25 ಪ್ರಯಾಣಿಕರು ಸಾವನ್ನಪ್ಪಿದ ಭೀಕರ ದುರಂತ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ...

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...
- Advertisement -
error: Content is protected !!