Saturday, December 10, 2022

ಕೊರೋನಾ ವೈರಸ್ ಮೂಲದ ಜಾಡು ಹಿಡಿದು…

Follow Us

ಕೊರೋನಾ ವೈರಸ್ ಜಗತ್ತನ್ನು ಇಷ್ಟೆಲ್ಲ ಕಾಡಿಸುತ್ತಿದ್ದರೂ ಅದರ ಮೂಲವನ್ನು ಹುಡುಕಲು ಇಂದಿಗೂ ಸಾಧ್ಯವಾಗಿಲ್ಲ. ಕೊರೋನಾದಿಂದಾಗಿ ಇಡೀ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದ್ದರೂ ಚೀನಾ ಮಾತ್ರ ವಿಶ್ವ ಆರೋಗ್ಯ ಸಂಸ್ಥೆಯಿಂದ ಕ್ಲೀನ್ ಚಿಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಡಬ್ಲ್ಯುಎಚ್ಒದ ಈ ತನಿಖೆ ವಿರುದ್ಧ ಇದೀಗ ಅಂತಾರಾಷ್ಟ್ರೀಯ ವಿಜ್ಞಾನಿಗಳ ಸಮೂಹ ತಿರುಗಿಬಿದ್ದಿದ್ದು, ಚೀನಾದ ಒಳಗೊಳ್ಳವಿಕೆಯಿಲ್ಲದೆ ಹೊಸ ತನಿಖೆಗೆ ಒತ್ತಾಯಿಸಿದೆ.

ಹೊಸ ತನಿಖೆಗೆ ವಿಜ್ಞಾನಿಗಳ ಆಗ್ರಹ

newsics.com Features Desk

ಕೊರೋನಾ ವೈರಸ್ ಭೂಮಿಯನ್ನು ಕಾಡತೊಡಗಿ ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಕೊರೋನಾ ಬಂದು ಜಗತ್ತೇ ಬದಲಾಗಿಹೋಗಿದೆ. ಬದುಕನ್ನು ಈ ಪರಿ ಕಾಡಿಸಿರುವ ವೈರಸ್ ಅನ್ನು ಸಮಾಜ ಈವರೆಗೆ ಕಂಡಿರಲಿಲ್ಲ. ಇಷ್ಟೆಲ್ಲ ಆದರೂ, ವಿಶ್ವ ಸಮುದಾಯ ನಾಚಿಕೆಪಡುವಂತೆ, ಇಂಥದ್ದೊಂದು ವೈರಸ್ ಎಲ್ಲಿಂದ ಹೇಗೆ ಹುಟ್ಟಿತು ಎಂಬುದಕ್ಕೆ ಇದುವರೆಗೂ ಸ್ಪಷ್ಟವಾದ ಉತ್ತರ ದೊರೆತಿಲ್ಲ.
ಕೊರೋನಾ ವೈರಸ್ ಮೂಲದ ಬಗ್ಗೆ ಇಡೀ ಜಗತ್ತಿಗೆ ಕಣ್ಣಿರುವುದು ಚೀನಾ ಮೇಲೆ. ತನ್ನ ಪ್ರಾಬಲ್ಯ ಸಾಧಿಸಲು ಯಾವುದೇ ರೀತಿಯ ಕುಟಿಲ ನೀತಿ ಅನುಸರಿಸುವುದಕ್ಕೂ ಚೀನಾ ಹಿಂದೇಟು ಹಾಕುವುದಿಲ್ಲ. ಚೀನಾದ ಈ ಜಾಯಮಾನ ಜಗತ್ತಿಗೆ ತಿಳಿಯದಿರುವುದೇನಲ್ಲ. ಚೀನಾದ ವುಹಾನ್ ಪ್ರಾಂತ್ಯದಲ್ಲಿರುವ ಪ್ರಯೋಗಾಲಯದಿಂದಲೇ ಕೊರೋನಾ ವೈರಸ್ ಸೋರಿಕೆಯಾಗಿರುವ ಕುರಿತು ಅನೇಕ ವದಂತಿಗಳಿವೆ. ಅಲ್ಲಿನ ವಿಜ್ಞಾನಿಗಳು, ಈ ಬಗ್ಗೆ ವರದಿ ಮಾಡಿದ ಪತ್ರಕರ್ತರನ್ನು ಚೀನಾ ನಡೆಸಿಕೊಂಡ ರೀತಿ ಇದಕ್ಕೆ ಪುಷ್ಟಿ ನೀಡುತ್ತದೆ. ವೈರಸ್ ಅನ್ನು ಮೊದಲ ಬಾರಿಗೆ ಗುರುತಿಸಿದ್ದ ವಿಜ್ಞಾನಿಯೂ ಕಳೆದ ವರ್ಷ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು.
ಚೀನಾಗೆ ಕ್ಲೀನ್ ಚಿಟ್ ನೀಡಿದ ಡಬ್ಲ್ಯುಎಚ್ಒ!:
ಇಡೀ ವಿಶ್ವವನ್ನು ಇಂದಿಗೂ ಕಾಡಿಸುತ್ತಿರುವ ಕೊರೋನಾ ವೈರಸ್ ಚೀನಾದಲ್ಲಿ ಮಾತ್ರ  ನಾಶವಾಗಲು ಸಾಧ್ಯವೇ? ಮುಂದುವರಿದ ಫ್ರಾನ್ಸ್ ನಂತಹ ದೇಶ ಮೂರನೇ ಬಾರಿಯ ಲಾಕ್ ಡೌನ್ ಗೆ ಸಾಕ್ಷಿಯಾಗಿದೆ. ಆದರೆ, ಚೀನಾ ಮಾತ್ರ ತಾನು ವೈರಸ್ ಮುಕ್ತ ಎಂದು ಹೇಳಿಕೊಂಡಿದೆ. ಅಲ್ಲಿ ಸಂಭವಿಸಿದ ಸಾವು-ನೋವಿನ ಲೆಕ್ಕಾಚಾರವೂ ತೀರಾ ಬಾಲಿಶವೆನಿಸುವಂತಿದೆ. ಎಲ್ಲಕ್ಕಿಂತ ಹೆಚ್ಚಾಗಿ, ವಿಶ್ವ ಸಮುದಾಯಕ್ಕೆ ಹೆಚ್ಚು ಆಘಾತವೆನಿಸಿದ್ದು ವಿಶ್ವ ಆರೋಗ್ಯ ಸಂಸ್ಥೆ ಕೆಲ ದಿನಗಳ ಹಿಂದೆ ವೈರಸ್ ಹುಟ್ಟಿನ ಬಗ್ಗೆ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದಾಗ. ಕೊರೋನಾ ವೈರಸ್ ವುಹಾನ್ ಪ್ರಯೋಗಾಲಯದಿಂದ ಬಿಡುಗಡೆಯಾಗಿದ್ದಲ್ಲ, ಬದಲಿಗೆ ವನ್ಯಜೀವಿಗಳಿಂದ ಬಂದಿದ್ದೆಂದು ಈ ವರದಿ ಹೇಳಿದೆ.
ಈ ತನಿಖೆಯಿಂದ ಚೀನಾಕ್ಕೆ ಪರಿಶುದ್ಧತೆಯ ಪ್ರಮಾಣಪತ್ರ ದೊರೆಯಿತಾದರೂ ಹಲವಾರು ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ದೊರೆಯಲಿಲ್ಲ. ಚೀನಾ ಅಂತೂ ಪ್ರಜಾಪ್ರಭುತ್ವ ಮೌಲ್ಯಗಳಿಲ್ಲದ ದೇಶ. ಬೀಸುವ ಗಾಳಿಯೂ ಸರ್ಕಾರದ ಅಪ್ಪಣೆ ಮೇರೆಗೆ ಬೀಸಬೇಕು ಎನ್ನುವಂಥ ಧಾರ್ಷ್ಟ್ಯದ ಆಡಳಿತ. ಇಂಥ ದೇಶದಿಂದ ನಿಷ್ಪಕ್ಷಪಾತ ತನಿಖೆ ನಿರೀಕ್ಷಿಸುವುದು ಮೂರ್ಖತನ.
ಚೀನಾ ವಿರುದ್ಧ ವಿಜ್ಞಾನಿಗಳ ಆಕ್ರೋಶ: 
ಈ ಹಿನ್ನೆಲೆಯಲ್ಲಿ, ಯುರೋಪ್, ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಸೇರಿದಂತೆ ವಿಶ್ವದ ಹಲವಾರು ದೇಶಗಳ 24 ಪ್ರಮುಖ ವಿಜ್ಞಾನಿಗಳು ಇದೀಗ ಚೀನಾ ವಿರುದ್ಧ ಸೆಟೆದು ನಿಂತಿದ್ದಾರೆ. ಚೀನಾವನ್ನು ಹೊರಗಿಟ್ಟು ವೈರಸ್ ಮೂಲದ ಬಗ್ಗೆ ಹೊಸದಾಗಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಚೀನಾ ಸಹಯೋಗದಲ್ಲಿ ನಡೆದ ತನಿಖೆ ರಾಜಕೀಯ ಪ್ರೇರಿತ ಎಂದು ಈ ಅಂತಾರಾಷ್ಟ್ರೀಯ ವಿಜ್ಞಾನಿಗಳ ಗುಂಪು ಆರೋಪಿಸಿದ್ದು, ಜಾಗತಿಕ ಸಮುದಾಯಕ್ಕೆ ಪತ್ರ ಬರೆದಿದ್ದಾರೆ. ವಿಜ್ಞಾನಿ ಜಾಮೀ ಮೆಟ್ಜೆಲ್ ಎನ್ನುವವರು ‘ಚೀನಾದ ಒಳಗೊಳ್ಳುವಿಕೆಯಿಲ್ಲದೆ ತನಿಖೆ ನಡೆಸಬೇಕಾಗಿದೆ’ ಎಂದು ಒತ್ತಾಯಿಸಿದ್ದಾರೆ. ಎಲ್ಲ ಮಾಹಿತಿ ಬಹಿರಂಗಪಡಿಸುವಂತೆ ಆಗ್ರಹಿಸಿದ್ದಾರೆ. 
ತಜ್ಞರ ಜತೆ ಸಂಪರ್ಕ ಸಾಧ್ಯವಾಗಿಲ್ಲ!:
ಚೀನಾದ ಬಳಿ ಯಾವ್ಯಾವ ವೈರಸ್ ಗಳಿವೆ ಎನ್ನುವ ದತ್ತಾಂಶಗಳಿವೆ. ವೈರಸ್ ಗಳ ಮೇಲೆ ನಡೆದ ಕಾರ್ಯಕ್ಕೆ ಸಂಬಂಧಿಸಿ ಪ್ರಯೋಗಾಲಯದ ನೋಟ್ ಗಳಿವೆ. ಈ ಕೆಲಸ ನಿರ್ವಹಿಸಿದ ಬೇರೆ ಬೇರೆ ಕ್ಷೇತ್ರದ ವೈಜ್ಞಾನಿಕ ತಜ್ಞರು ಅಲ್ಲಿದ್ದಾರೆ. ಆದರೆ,  ಯಾರೊಂದಿಗೂ ನಾವು ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ, ಇದು ಸಾಧ್ಯವಾಗಬೇಕು ಎಂದೂ ಅವರು ಹೇಳಿದ್ದಾರೆ.
ಹೊಸ ತನಿಖೆ ಸಾಧ್ಯವಿಲ್ಲವೆಂದ ಚೀನಾ:
ಚೀನಾ ಹಾಗೆಲ್ಲ ತನಿಖೆಗೆ ಒಪ್ಪಿಕೊಳ್ಳುವುದೆಂದು ನಿರೀಕ್ಷಿಸಲು ಸಾಧ್ಯವೇ? ಇಲ್ಲವೇ ಇಲ್ಲ. ಚೀನಾದ ಹಿರಿಯ ವೈರಾಣು ತಜ್ಞ ಲಿಯಾಂಗ್ ವಾನಿಯನ್ ಯಾವುದೇ ರೀತಿಯ ಹೊಸ ತನಿಖೆಯ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಚೀನಾ ಬಿಟ್ಟು ಬೇರೆ ದೇಶಗಳನ್ನು ಕೇಂದ್ರೀಕರಿಸಿ ತನಿಖೆ ನಡೆಯಬೇಕಿದೆ ಎಂದಿದ್ದಾರೆ!

ಮತ್ತಷ್ಟು ಸುದ್ದಿಗಳು

vertical

Latest News

ಡಿಸೆಂಬರ್ 15ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯಕ್ಕೆ ಭೇಟಿ

newsics.com ಬೆಂಗಳೂರು:  ಗುಜರಾತ್ ಚುನಾವಣೆ ಬಳಿಕ ಬಿಜೆಪಿ ಹೈಕಮಾಂಡ್ ಇದೀಗ ರಾಜ್ಯದತ್ತ ದೃಷ್ಟಿ ನೆಟ್ಟಿದೆ. ಇದರ ಮೊದಲ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ...

ಕಾರ್ಕಳ ಬಳಿ ಭೀಕರ ಅಪಘಾತ: ದಂಪತಿ, ಮಗು ಸಹಿತ ಮೂವರ ಸಾವು

newsics.com ಮಂಗಳೂರು:  ಉಡುಪಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ  ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕಾರ್ಕಳದ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ಮೈನೇರು ಎಂಬಲ್ಲಿ ಈ ದುರಂತ ಸಂಭವಿಸಿದೆ. ಖಾಸಗಿ ಬಸ್ ಮತ್ತು...

ಇಂಡಿಗೋ ವಿಮಾನದಲ್ಲಿ ಹರಿದ ಸೀಟು: ಪೇಟಿಎಂ‌ ಸಿಇಒಗೆ ಅಚ್ಚರಿ!

newsics.com ಮುಂಬೈ: ನೀವು ಬಸ್‌ನಲ್ಲೋ, ಆಟೋದಲ್ಲೋ ಹರಿದ ಸೀಟುಗಳನ್ನು ನೋಡಿರಬಹುದು. ಆದರೆ ವಿಮಾನದಲ್ಲೂ ಹರಿದ ಸೀಟಿನ ಚಿತ್ರವನ್ನು ಪೇಟಿಎಂ ಸಿಇಒ Paytm CEO ಹಂಚಿಕೊಂಡಿದ್ದಾರೆ. 'ಈ ಏರ್‌ಲೈನ್‌ನಲ್ಲಿ ಮಾತ್ರ ಇಂತಹ ಹರಿದ ಸೀಟನ್ನು ಮೊದಲು ನೋಡಲಾಗಿದೆ'...
- Advertisement -
error: Content is protected !!