newsics.com
ಇಂದು ಭಕ್ತಿಗಿಂತ ಆಡಂಬರವೇ ಹೆಚ್ಚಿದೆ. ದೇವರ ಪೂಜೆಯಲ್ಲೂ ಶ್ರದ್ಧಾಭಕ್ತಿ ಕಡಿಮೆಯಾಗಿ ತೋರಿಕೆಯ ಪ್ರದರ್ಶನ ಕಾಣುತ್ತಿದೆ. ಈ ಸನ್ನಿವೇಶದಲ್ಲಿ ಹಾಗೂ ಎಲ್ಲ ಸಂದರ್ಭಗಳಲ್ಲೂ ‘ಮಾನಸ ಪೂಜೆ’ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.
ಏನಿದು ಮಾನಸ ಪೂಜೆ?:
ಮನಸ್ಸಿನಲ್ಲಿ ಇಷ್ಟದೇವರ ಮೂರ್ತಿಯನ್ನು ಸೃಷ್ಟಿಸಿ ಕೊಂಡು, ಮನದಲ್ಲೇ ಮಾಡುವ ಪೂಜೆಯೇ ಮಾನಸ ಪೂಜೆ.
ಇದಕ್ಕೆ ಯಾವುದೇ ತಯಾರಿ ಬೇಡ, ಯಾವುದೇ ನಿಖರವಾದ ಸ್ಥಳ ಬೇಡ, ನಮ್ಮ ಮುಂದೆ ದೇವರ ಪ್ರತಿಷ್ಠಾಪನೆಯ ಅಗತ್ಯವೂ ಇಲ್ಲ.
ಯಾವುದೇ ವಸ್ತುವಿನ/ ಆಹಾರ ನೈವೇದ್ಯ ಬೇಡ, ಹೂವಿನ ಅಲಂಕಾರ ಬೇಡ. ಇಲ್ಲಿ ಬೇಕಿರುವುದು ಒಬ್ಬ ವ್ಯಕ್ತಿ ಹಾಗೂ ಆತನ ಮನಸ್ಸು. ಅದುವೇ ಮಾನಸ ಪೂಜೆ.
ಎಲ್ಲೆಲ್ಲಿಯೂ ದೇವರಿದ್ದಾನೆ. ಆತನಿಗೆ ಬೇಕಿರುವುದು ಕೇವಲ ನಿಷ್ಕಲ್ಮಶ ಭಕ್ತಿ ಎಂಬುದಕ್ಕೆ ಈ ಮಾನಸ ಪೂಜೆಯೇ ಸಾಕ್ಷಿ. ಜಡ ಮನಸ್ಸನ್ನು ಬಡಿದೆಬ್ಬಿಸುವ, ಮನಸ್ಸಿಗೆ ನೆಮ್ಮದಿ ಕೊಡುವ, ಸ್ಥಿರತೆಯನ್ನು ಮೂಡಿಸುವಲ್ಲಿ ಈ ಮಾನಸ ಪೂಜೆಯು ಸಹಕಾರಿಯಾಗುತ್ತದೆ.
ಹೆಣ್ಣು ಮಕ್ಕಳು, ಮನದಲ್ಲಿ ಲಕ್ಷ್ಮಿಯನ್ನು ಸ್ಮರಿಸಿ, ಮನದಲ್ಲೇ ಆಕೆಯನ್ನು ಅಲಂಕರಿಸಿ, ಆ ದೇವಿಯ ಮೂರ್ತಿಯನ್ನು ಮನದಲ್ಲೇ ಪ್ರತಿಷ್ಠಾಪಿಸಿ ಪೂಜೆ ಮಾಡಿದರೆ ಆ ದೇವಿ ಒಲಿಯದೆ ಇರಲಾರಳು.
ಬನ್ನಿ ಹಾಗಾದರೆ ನಿತ್ಯ ಮಾಡೋಣ “ಮಾನಸ ಪೂಜೆ”.