Sunday, October 1, 2023

ಹೂವುಗಳಿಗೆ ಹೋಲಿಕೆಯೇಕೆ?

Follow Us

ಎಲ್ಲ ಮಕ್ಕಳೂ ಒಂದೇ ತೆರನಾಗಿರುವುದಿಲ್ಲ. ಬಹುತೇಕ ಮಕ್ಕಳಂತೆ ನಮ್ಮ ಮಕ್ಕಳೂ ಚೆನ್ನಾಗಿ ಓದಿ, ಬರೆದು ಮಾಡಲಿ ಎನ್ನುವ ಆಸೆ ಎಲ್ಲ ಪಾಲಕರಲ್ಲೂ ಸಹಜವಾಗಿರುತ್ತದೆ. ಆದರೆ, ಹಾಗಿಲ್ಲದೆ ಇದ್ದಾಗ ವಾಸ್ತವವನ್ನು ಒಪ್ಪಿಕೊಂಡು ಸರಿಯಾದ ಮಾರ್ಗದರ್ಶನ ಪಡೆಯುವುದು ಮುಖ್ಯವಾಗುತ್ತದೆ. ಇದು ಹೇಳುವಷ್ಟು ಸುಲಭದ ಕೆಲಸವಲ್ಲ ನಿಜ. ಆದರೆ, ಪಾಲಕರು ತಮ್ಮ ಮಕ್ಕಳ ಅಭ್ಯುದಯಕ್ಕಾಗಿ ಏನು ಬೇಕಿದ್ದರೂ ಮಾಡಬಲ್ಲರು, ಅಲ್ಲವೇ? ಹಾಗಾದಾಗ ಮಕ್ಕಳಿಗಾಗಿ ಹೊಸ ಚಿಂತನೆ, ಮಾರ್ಗಗಳನ್ನು ರೂಢಿಸಿಕೊಳ್ಳಲು ಹಿಂದೇಟು ಹಾಕಬೇಕಾಗಿಲ್ಲ.

========

* ಸುಮನಾ ಎಲ್.ಜಿ.
response@134.209.153.225

ರಣಿ ಒಬ್ಬಳೇ ಮಗಳು. ಅವಳನ್ನು ಚೆನ್ನಾಗಿ ಓದಿಸಿ ಉತ್ತಮ ಭವಿಷ್ಯ ರೂಪಿಸುವುದು ಆಕೆಯ ತಾಯ್ತಂದೆಯರ ಆಶಯ. ಎಲ್ಲ ಪಾಲಕರ ಆಸೆಯೂ ಇದೇ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಧರಣಿಯ ಲೋಕವೇ ಬೇರೆ. ತನ್ನದೇ ಸೀಮಿತ ಆಟೋಟಗಳಲ್ಲಿ ಸಮಯ ಕಳೆಯುವ ಪ್ರಯತ್ನ ಆಕೆಯದ್ದು. ಶಾಲೆಯಲ್ಲೂ ಹೆಚ್ಚಿನ ಯಾವ ಚಟುವಟಿಕೆಯಲ್ಲೂ ಆಸಕ್ತಿಯಿಲ್ಲದೇ ಸಮಯ ಕಳೆಯುತ್ತಾಳೆ. ಕೊನೆಯ ಪಕ್ಷ ಕ್ರೀಡೆ, ಸಂಗೀತ, ಡಾನ್ಸ್ ಹೀಗೆ ಯಾವುದರಲ್ಲೂ ಆಕೆಗೆ ಆಸಕ್ತಿ ಇಲ್ಲ. ಆಕೆಯ ಏಕೈಕ ಆಸಕ್ತಿ ಎಂದರೆ ನಾಟಕ. ಆಕೆಯನ್ನು ಮೂರನೇ ತರಗತಿಯ ಬೇಸಿಗೆ ರಜೆಯಲ್ಲಿ ಥಿಯೇಟರ್ ಕ್ಲಾಸಿಗೆ ಸೇರಿಸಲಾಗಿತ್ತು. ಆ ಬಳಿಕ ಆಕೆ ತನ್ನ ಆಸಕ್ತಿಯನ್ನು ಕಂಡುಕೊಂಡಿದ್ದು ಅದರಲ್ಲಿ. ಸರಿ, ಮಗುವಿಗೆ ಇಷ್ಟವೆಂದು ವಾರದಲ್ಲಿ ಎರಡು ಥಿಯೇಟರ್ ಕ್ಲಾಸುಗಳಿಗೆ ಆಕೆಯನ್ನು ಸೇರಿಸಿದರು. ಅಲ್ಲಿ ಮಾತ್ರ ಆಕೆ ಶಾಲೆಯಲ್ಲಿ ಕಾಣುವ ಧರಣಿಯೇ ಅಲ್ಲವೆನ್ನುವಷ್ಟು ಉತ್ಸಾಹಿ. ಅಷ್ಟು ನೆನಪಿನ ಶಕ್ತಿ. ತನ್ನದು ಮಾತ್ರವಲ್ಲ, ಇತರರ ಯಾವೊಂದು ಡೈಲಾಗ್ ಸಹ ಆಕೆಗೆ ಮರೆಯುತ್ತಿರಲಿಲ್ಲ. ಕಳೆದ ವರ್ಷದ ಬೇಸಿಗೆಯಲ್ಲಿ ಮಾಡಿದ ನಾಟಕದ ಡೈಲಾಗ್ ಸಹ ಇನ್ನೂ ಅವಳಿಗೆ ನೆನಪಿತ್ತು. ಆದರೆ, ಶಾಲೆಯ ಪಠ್ಯದ ವಿಚಾರ ಬಂದಾಗ ಮಾತ್ರ ಆಕೆಗೆ ಏನೂ ನೆನಪಿರುತ್ತಿರಲಿಲ್ಲ. ಕ್ರಮೇಣ ಇದೊಂದು ಸಮಸ್ಯೆ ಎನ್ನುವಂತೆ ಕಂಡುಬಂತು.
ಪಾಲಕರೊಂದಿಗೆ ಎಲ್ಲಾದರೂ ಕಾರ್ಯಕ್ರಮಗಳಿಗೆ ಹೋದರೆ ಧರಣಿ ಚೆನ್ನಾಗಿಯೇ ಇರುತ್ತಿದ್ದಳು. ಆದರೆ, ಯಾರಾದರೂ ಶಾಲೆಯ ಸುದ್ದಿ, ಓದಿನ ವಿಚಾರ ತೆಗೆದೊಡನೆಯೇ “ನನಗೆ ಶಾಲೆಗೆ ಹೋಗುವುದು ಇಷ್ಟವಿಲ್ಲ, ನಾನು ಓದಲ್ಲ, ನನಗೆ ಗಣಿತ ಬರೋದಿಲ್ಲ’ ಎಂದೆಲ್ಲ ಯಾರೂ ಕೇಳದೆಯೇ ಉತ್ತರಿಸಲು ಶುರು ಮಾಡುತ್ತಿದ್ದಳು. ಧರಣಿಯ ಪಾಲಕರಿಗೆ ಇದರಿಂದ ಬೇಸರವಾಗತೊಡಗಿ ಕಾರ್ಯಕ್ರಮಗಳಿಗೆ ಹೋಗುವುದನ್ನೇ ದೂರವಿಡಲು ಆರಂಭಿಸಿದರು. ಕೆಲವೊಮ್ಮೆ ಇದು ಎಷ್ಟು ವಿಪರೀತಕ್ಕೆ ಹೋಯಿತೆಂದರೆ, ಮಕ್ಕಳು ಮಾಡುವಂಥ ಸಾಮಾನ್ಯ ತಪ್ಪುಗಳನ್ನೇ ಧರಣಿ ಮಾಡಿದರೂ ಅದು ಅವರಿಗೆ ದೊಡ್ಡದೆಂಬಂತೆ ಕಾಣುತ್ತಿತ್ತು. ಎಲ್ಲಾದರೂ ಫಂಕ್ಷನ್‍ಗಳಿಗೆ ಹೋಗಿ ಬಂದ ಬಳಿಕ ಮನೆಚಿiÀುಲ್ಲೊಂದು ದೊಡ್ಡ ಯುದ್ಧ ನಿಶ್ಚಿತವಾಗಿತ್ತು. ಪಾಲಕರ “ನೀನು ಅಲ್ಲೇಕೆ ಹಾಗಂದೆ, ಹಾಗೇಕೆ ವರ್ತಿಸಿದೆ?’ ಇತ್ಯಾದಿ ಪ್ರಶ್ನೆಗಳಿಗೆ ಧರಣಿ ಉತ್ತರಿಸುವುದನ್ನೇ ಬಿಟ್ಟಿದ್ದಳು. ಇವೆಲ್ಲ ಏಕಾಏಕಿ ಕಂಡುಬಂದ ಸಮಸ್ಯೆಯೇನೂ ಆಗಿರಲಿಲ್ಲ. ನಾಲ್ಕೈದು ವರ್ಷಗಳ ಅವಧಿಯಲ್ಲಿ ಧರಣಿ ನಕಾರಾತ್ಮಕ ವಿಚಾರಗಳನ್ನೇ ಹೆಚ್ಚಾಗಿ ತನ್ನದಾಗಿಸಿಕೊಂಡವಳಂತೆ ಕಾಣುತ್ತಿದ್ದಳು. ಬಳಿಕ, ಶಾಲೆಯಲ್ಲಿ ದೊರೆತ ಸೂಚನೆಯಂತೆ ಆಪ್ತಸಮಾಲೋಚಕರು, ಮಾನಸಿಕ ತಜ್ಞರ ಸೂಕ್ತ ಮಾರ್ಗದರ್ಶನ ಪಡೆದು ಆಕೆಯ ಸಮಸ್ಯೆಯನ್ನು ನಿವಾರಿಸಲು ಪಾಲಕರು ಈಗ ಯತ್ನಿಸುತ್ತಿದ್ದಾರೆ.
ಧರಣಿ ಮಾತ್ರವಲ್ಲ, ನಮ್ಮ ಸುತ್ತಮುತ್ತ ಇಂಥ ಮಕ್ಕಳು ಸಾಕಷ್ಟಿರುತ್ತಾರೆ. ಈ ಮಕ್ಕಳ ಮನೋಲೋಕ, ಆಸಕ್ತಿ ಸುಲಭಕ್ಕೆ ಅರ್ಥವಾಗುವುದಿಲ್ಲ. ಸಾಮಾನ್ಯ ಮಕ್ಕಳು ಎಲ್ಲರೊಂದಿಗೆ ಬೆರೆತು ಆಟವಾಡುವುದರಲ್ಲೇ ಆಸಕ್ತರಾದರೆ ಇವರಿಗೆ ಅದರಲ್ಲೂ ಖುಷಿ ಕಂಡುಬರುವುದಿಲ್ಲ. ಒಬ್ಬರೇ ಇರಲು ಇಷ್ಟಪಡುತ್ತಾರೆ. ಅಸಲಿಗೆ, ಅವರಿಗೆ ಇತರರೊಂದಿಗೆ ಆಟವಾಡಲು ಬರುವುದೇ ಇಲ್ಲ. ಗುಂಪಿನಲ್ಲಿ ಆಟವಾಡುವಾಗ ಸೂಚನೆಗಳನ್ನು ಪಾಲಿಸಲು, ಏಕಾಗ್ರತೆ ಸಾಧಿಸಲು ಕಷ್ಟಪಡುತ್ತಾರೆ. ಹೀಗಾಗಿ, ಆಟವನ್ನೇ ಆಡಲು ಮುಂದಾಗುವುದಿಲ್ಲ. ಇಂಥ ಮಕ್ಕಳು ಶಾಲೆಯಿಂದಲೂ ದೂರುಗಳ ಸರಮಾಲೆಯನ್ನೇ ತರುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಸಮಸ್ಯೆ ನಿರ್ದಿಷ್ಟವಾಗಿ ಏನೆಂದು ತಿಳಿಯದಿದ್ದರೂ ಇಂಥ ಮಕ್ಕಳ ತಂದೆತಾಯಿಗಳು ತಮ್ಮ ಮಗುವಿಗೆ ಏನೋ ಒಂದು ಸಮಸ್ಯೆ ಇದೆ ಎಂದು ಅರಿತುಕೊಳ್ಳುವುದು ಇಲ್ಲಿ ಮುಖ್ಯವಾಗುತ್ತದೆ. ಮೊಟ್ಟಮೊದಲನೆಯದಾಗಿ ಇತರ ಮಕ್ಕಳ ಜತೆಗೆ ಅವರನ್ನು ಹೋಲಿಸಲೇಬಾರದು.
ಎಲ್ಲ ಮಕ್ಕಳೊಂದಿಗೆ ಬೆರೆಯುವುದಿಲ್ಲ ಎಂದಾಕ್ಷಣ ಸಾಮಾನ್ಯ ಪಾಲಕರು ಮಾಡುವ ಮೊದಲ ತಪ್ಪೇ ಇದು. “ಆತನನ್ನು ನೋಡು, ಆಕೆಯನ್ನು ನೋಡು, ಎಷ್ಟು ಚುರುಕಾಗಿ ಹೇಗೆ ಎಲ್ಲರ ಜತೆ ಆಟವಾಡಿಕೊಂಡಿರುತ್ತಾಳೆ, ನಿನಗೆ ಏನು ಸಮಸ್ಯೆ?’ ಎಂಬಿತ್ಯಾದಿಯಾಗಿ ಹೋಲಿಸುವುದು ಕಂಡುಬರುತ್ತದೆ. ಇಂಥವೆಲ್ಲ ಸಂಭವಿಸುವುದೇ ಸಾಮಾನ್ಯವಾಗಿ ಏಳು ವರ್ಷಗಳ ಬಳಿಕ. ಆಗಲೇ ಶುರುವಾಗುತ್ತದೆ ನಿಜವಾದ ಸಮಸ್ಯೆ.
ಹೋಲಿಸುವುದರಿಂದ ಮಕ್ಕಳು ತಮ್ಮನ್ನು ತಿದ್ದಿಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದು ತಪ್ಪು. ಮೊದಮೊದಲು ಅದರ ಪರಿಣಾಮಗಳು ಗೊತ್ತಾಗದೇ ಹೋದರೂ ಕ್ರಮೇಣ ಅವರಲ್ಲಿ ಕೀಳರಿಮೆ ಗೂಡು ಕಟ್ಟಿಕೊಳ್ಳಲು ಪಾಲಕರೇ ಕಾರಣರಾಗುತ್ತಾರೆ ಎನ್ನುವುದು ನಿಸ್ಸಂಶಯ. ಬಹಳಷ್ಟು ಪಾಲಕರು ತಮ್ಮ ಮಕ್ಕಳಲ್ಲಿ ಏನಾದರೂ ಸಮಸ್ಯೆ ಇರಬಹುದು ಎನ್ನುವುದನ್ನೇ ಒಪ್ಪಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ಅವರನ್ನು ಈಗ ತಾವು ನೋಡಿಕೊಳ್ಳುತ್ತಿರುವ ಮಾರ್ಗವೇ ಸರಿ ಎಂದು ಬಲವಾಗಿ ನಂಬಿಕೊಂಡಿರುತ್ತಾರೆ. ಅಂಥ ಕುಟುಂಬಗಳನ್ನು ನಮ್ಮ ಸುತ್ತಮುತ್ತ, ಸಂಬಂಧಿಗಳಲ್ಲಿಯೂ ಅಲ್ಲಲ್ಲಿ ಕಾಣುತ್ತೇವೆ. ಆಗ ಅವರ ಪಾಡು ಅವರದ್ದು ಎಂದು ಸುಮ್ಮನಿರದೆ ನಿಧಾನವಾಗಿ ಪಾಲಕರಿಗೆ ತಿಳಿಹೇಳುವ ಕೆಲಸ ಈಗ ಆಗಬೇಕಿದೆ. ಏಕೆಂದರೆ, ಪಾಲಕರ ಅಜ್ಞಾನಕ್ಕೆ ಮಕ್ಕಳು ಬಲಿಯಾಗುತ್ತಿರುವ ಕಾಲವಿದು. ಹೀಗಾಗಿ, ಸ್ವತಃ ಅರಿವಿಲ್ಲದಿದ್ದರೆ ಆಪ್ತಸಮಾಲೋಚಕರ ನೆರವು ಪಡೆಯುವಂತೆ ಅವರ ಮನವೊಲಿಸಬೇಕು. ಅದರಿಂದ ಅವರೂ ಬದಲಾಗುವ ಸಾಧ್ಯತೆ ಹೆಚ್ಚಿರುತ್ತದೆ. ತನ್ಮೂಲಕ, ಮಕ್ಕಳಿಗೂ ಅವರ ಬದಲಾದ ನಡೆ ಉತ್ತಮ ಭವಿಷ್ಯಕ್ಕೆ ಮೆಟ್ಟಿಲಾಗುತ್ತದೆ. ಹೀಗಾಗಿ, ಇದು ಎಲ್ಲರ ಜವಾಬ್ದಾರಿ ಎನ್ನುವುದನ್ನು ಮರೆಯದಿರೋಣ.

ಭಿನ್ನತೆ ಶಾಶ್ವತ
* ಮಕ್ಕಳು ಗಳಿಸಿದ ಅಂಕಗಳನ್ನು ಇನ್ನೊಂದು ಮಗುವಿನೊಂದಿಗೆ ಹೋಲಿಕೆ ಮಾಡಲು ಹೋಗಬೇಡಿ. ನಮ್ಮ ಮಗು ಅದರ ಸಾಮಥ್ರ್ಯಕ್ಕೆ ತಕ್ಕಂತೆ ನಿರ್ವಹಣೆ ತೋರಿದೆ ಎಂಬ ಸತ್ಯ ತಿಳಿದಿರಲಿ.
* ಕೈಯಲ್ಲಿನ ಎಲ್ಲ ಬೆರಳುಗಳು ಒಂದೇ ರೀತಿ ಇರಲು ಸಾಧ್ಯವಿಲ್ಲ. ಅದರಂತೆ ಮಕ್ಕಳೂ ಕೂಡ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಲ್ಲೇ ಭಿನ್ನತೆ ಇರುವಾಗ ಇನ್ನು ಸಮಾಜದಲ್ಲಿ, ಸುತ್ತಮುತ್ತ, ಶಾಲೆಯಲ್ಲಿರುವ ಮಕ್ಕಳೆಲ್ಲರೂ ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುತ್ತಾರೆ ಎನ್ನುವ ದೃಷ್ಟಿಕೋನ ಬೆಳೆಸಿಕೊಳ್ಳುವುದು ಅಗತ್ಯ.
* ಪ್ರತಿಯೊಬ್ಬರ ಆಸಕ್ತಿ, ಪ್ರತಿಭೆಗಳು ಬೇರೆ ಬೇರೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ಹೀಗಾಗಿ, ಪಾಲಕರೇ ಸಮತೋಲಿತ ದೃಷ್ಟಿಕೋನದೊಂದಿಗೆ ಅವರ ಸಮಸ್ಯೆಯನ್ನು ಬಗೆಹರಿಸಲು ನೆರವು ನೀಡಬೇಕೇ ಹೊರತು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಾರದು.

ಮತ್ತಷ್ಟು ಸುದ್ದಿಗಳು

vertical

Latest News

ಹಳ್ಳಕ್ಕೆ ಉರುಳಿದ ಬಸ್: 8‌ ಮಂದಿ‌ ಸಾವು, 25 ಪ್ರಯಾಣಿಕರಿಗೆ ಗಾಯ

newsics.com ಚೆನ್ನೈ: ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿ ಶನಿವಾರ ಪ್ರವಾಸಿ ಬಸ್ ಹಳ್ಳಕ್ಕೆ ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು...

ಅಕ್ಟೋಬರ್‌ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ಸಾಧ್ಯತೆ!

newsics.com ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಮತ್ತು ಸಾಮಾನ್ಯಕ್ಕಿಂತ ಹೆಚ್ಚು ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ತಿಳಿಸಿದೆ. ತಮಿಳುನಾಡು, ಕರಾವಳಿ...

ಕರ್ನಾಟಕದಲ್ಲಿ ಈ ಬಾರಿ ಶೇ. 25ರಷ್ಟು ಮಳೆಯ ಕೊರತೆ

newsics.com ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಅವಧಿಯಲ್ಲಿ ಈ ವರ್ಷ ಶೇ 25ರಷ್ಟು ಮಳೆ ಕೊರತೆಯಾಗಿದೆ. ಜೂನ್‌ 1ರಿಂದ ಸೆಪ್ಟೆಂಬರ್‌ 30ರವರೆಗಿನ ನಾಲ್ಕು ತಿಂಗಳಲ್ಲಿ ಒಟ್ಟು 845 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ, 635...
- Advertisement -
error: Content is protected !!