Monday, November 29, 2021

ಉತ್ಸವ ಮೂರ್ತಿಯ ಜೈತ್ರ ಯಾತ್ರೆ!

Follow Us

ವಿಶ್ವಕೋಶ ರಸಯಾತ್ರೆ 11

♦ ಕಲ್ಗುಂಡಿ ನವೀನ್
newsics.com@gmail.com
ksn.bird@gmail.com

ವಿಶ್ವಕೋಶದ ಕೆಲಸ ಒಂದು ನಿರ್ಣಾಯಕ ಹಂತ ತಲುಪಿತ್ತು. ಒಂದೆಡೆ ಅದರ ಒಳಪಿಡಿಯ ಪರಿಷ್ಕರಣ, ಅಡಿಯೋ, ವಿಡಿಯೋ ಮತ್ತು ಅನಿಮೇಷನ್ ಆದರೆ ಮತ್ತೊಂದೆಡೆ ಅದಕ್ಕಾಗಿ ಕೋಡಿಂಗ್! ಈ ಭಾಗದ ಆಂದರೆ ಅದರ ಕೋಡಿಂಗ್ ಭಾಗದ ಕಾರ್ಯವನ್ನು ಮಾಡಿದವರು ಸುಬ್ರಹ್ಮಣ್ಯ, ಅವರ ಜತೆಗಿದ್ದವರು ರಾಜಕೃಷ್ಣ ಹಾಗೂ ಅಭಿಷೇಕ್.

ಒಂದು ಡೆಮೊ ಆವೃತ್ತಿ ಸಿದ್ಧಪಡಿಸಿ ಗಣ್ಯರಿಗೆ ಕಳಿಸಲಾಯಿತು. ಹಾಗೆಯೇ ಅದನ್ನು ತೆಗೆದುಕೊಂಡು ನಾವೂ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಹೋಗಿ ಅನೇಕರಿಗೆ ತೋರಿಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಂಡು ಬಂದೆವು.

ಕನ್ನಡ ತಂತ್ರಜ್ಞಾನ ಜಗತ್ತಿಗೆ ಇದೊಂದು ಹೊಸ ಕೊಡುಗೆಯಾಗಿತ್ತು. ನನ್ನ ಊಹೆ ಸರಿಯಿದ್ದರೆ ಇಂತಹ ಪ್ರಯೋಗ ಇಡೀ ಭಾರತೀಯ ಭಾಷೆಗಳಲ್ಲೇ ಪ್ರಥಮ.

ಹಿರಿಯರಾದ ಜಿಟಿಎನ್, ಪ್ರೊ ಪ್ರಭು ಶಂಕರ, ಪ್ರೊ.ಕೆ.ಬಿ. ಸದಾನಂದ ಹೀಗೆ. ಅನೇಕರು ಮುದ್ರಿತ ಆವೃತ್ತಿಯಲ್ಲಿಯೂ ಕೆಲಸ ಮಾಡಿದ್ದರು. ಹಾಗಾಗಿ ಅವರುಗಳಿಗೆ ಒಂದು ಬಗೆಯ ಕುತೂಹಲ ಮತ್ತು ಆತಂಕ ಸಹ ಇತ್ತು. ಆದರೆ, ಈ “ಉತ್ಸವ ಮೂರ್ತಿ” ಯಾಗಿದ್ದ ಡೆಮೊ ಆವೃತ್ತಿಯನ್ನು ಮನಸಾರೆ ಮೆಚ್ಚಿದರು. ಬೇಗ ಪೂರ್ತಿ ಮುಗಿಸಿ ತನ್ನಿ ಎಂದರು.

ಈ ಸಂದರ್ಭದಲ್ಲಿ ಒಂದು ಘಟನೆಯನ್ನು ಹೇಳಬೇಕು. ಮುದ್ರಿತ ವಿಶ್ವಕೋಶಕ್ಕೆ ಕಾರಣರಾದ ಪ್ರೊ.ದೇಜಗೌ ಅವರನ್ನು ಭೇಟಿಯಾದೆವು. ಅವರಿಗೆ ಅವರ ಒಂದು ಯೋಜನೆಯಂತೆ ವಿಶ್ವಕೋಶ ಸಾಗುತ್ತಿಲ್ಲ ಎಂಬ ಅಸಮಾಧಾನ ಇತ್ತು. ತಾವು ಏನನ್ನೂ ನೋಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿ ಕಳಿಸಿದರು. ನಂತರ ಪರಿಷತ್ತಿನ ಹಿರಿಯರ ಮಾತಿಗೆ ಒಲಿದು ನೋಡಿ ಬಹಳ ಸಂತೋಷಪಟ್ಟರು. ಬಹಳ ಅಭಿಮಾನದ ಮಾತುಗಳನ್ನು ಆಡಿದರು.

ಮುಂದೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯರ ಜತೆ ಪ್ರಗತಿ ಪರಿಶೀಲನಾ ಸಭೆ! ನಮ್ಮೊಂದಿಗೆ ವಿಶ್ವವಿದ್ಯಾಲಯದ ನಾಲ್ಕು ಸಂಪುಟದ ನಿಘಂಟಿನ ಸಿಡಿಯ ಪ್ರದರ್ಶನ ಸಹ ಇತ್ತು. (ಅದು ಪ್ರಿಸಂ ಬುಕ್ಸ್ ಅವರಿಂದ ಅಭಿವೃದ್ಧಿಯಾ ಗಿತ್ತು). ಎರಡೂ ಡೆಮೋ ಆವೃತ್ತಿಗಳಲ ಪ್ರದರ್ಶನಗಳು ಯಶಸ್ವಿಯಾದವು. ವಿಶ್ವಕೋಶದ ಪ್ರದರ್ಶನವಂತೂ ಒಂದು ಸಂಚಲನವನ್ನೇ ಮೂಡಿಸಿತು. ಸಭೆ ಮುಗಿದು ಹೊರಬಂದ ಮೇಲೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ ಅರವಿಂದ ಮಾಲಗತ್ತಿಯವರು “ಅಧ್ಯಯನ ಸಂಸ್ಥೆಗೆ ಕೋಡು ಮೂಡಿಸಿದಿರಿ” ಎಂದರು. ಅದು ಇಂದಿಗೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ.

ಮುಂದಿನ ನಾಲ್ಕು ತಿಂಗಳುಗಳಲ್ಲಿ ಪೂರ್ಣವಿಶ್ವಕೋಶದ ಡಿವಿಡಿ ಆವೃತ್ತಿಯನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳ ಕೈಗಿತ್ತೆವು. ಅದು ಮತ್ತೊಂದು ಸಂಭ್ರಮ. ಮತ್ತೆ ಬರೆಯುವೆ.

ಮತ್ತಷ್ಟು ಸುದ್ದಿಗಳು

Latest News

ಮಹಿಳಾ ಸಂಸದರೊಂದಿಗೆ ಸೆಲ್ಫಿ ಶೇರ್ ಮಾಡಿ ಲೋಕಸಭೆ ಆಕರ್ಷಕ ಸ್ಥಳ ಎಂದ ಶಶಿ ತರೂರ್, ಕ್ಷಮೆಯಾಚನೆ

newsics.com ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್, ಆರು ಮಹಿಳಾ ಸಂಸದರೊಂದಿಗೆ ತೆಗೆದ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. "ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ?"...

ಭಾರತ – ನ್ಯೂಜಿಲೆಂಡ್ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ

newscis.com ಕಾನ್ಪುರ: ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಮಂದ ಬೆಳಕಿನಿಂದ ಪಂದ್ಯವನ್ನು ನಿಲ್ಲಿಸಬೇಕಾಯಿತು. ನಾಲ್ಕು ವರ್ಷಗಳಲ್ಲಿ ಭಾರತದ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್...

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು ಸಮ್ಮತಿಯ ಲೈಂಗಿಕ ಸಂಬಂಧಗಳ ಅಪರಾಧೀಕರಣದ ಕುರಿತಾದ...
- Advertisement -
error: Content is protected !!