Saturday, November 27, 2021

ಧ್ವನಿ ಗೋವಿಂದ ಪೈಗಳದ್ದಲ್ಲವೆ?

Follow Us

ವಿಶ್ವಕೋಶ ರಸಯಾತ್ರೆ – 8

 
* ನವೀನ್ ಕಲ್ಗುಂಡಿ
response@134.209.153.225
ksn.bird@gmail.com

 

ವಿಶ್ವಕೋಶದ ಸಂದರ್ಭದಲ್ಲಿ ವಿಜ್ಞಾನದ ಲೇಖನಗಳು ಪರಿಷ್ಕಾರವಾಗುತ್ತಿದ್ದಾಗ ಮತ್ತೊಂದೆಡೆ ಮಾನವಿಕದ ಲೇಖನಗಳ ಪರಿಷ್ಕಾರ ಆರಂಭವಾಯಿತು. ಸಾಹಿತ್ಯ, ವಿಮರ್ಶೆಗೆ ಸಂಬಂಧಿಸಿದ ಲೇಖನಗಳನ್ನು ಪ್ರೊ ಎಲ್ ಎಸ್ ಶೇಷಗಿರಿರಾವ್ ಹಾಗೂ ಪ್ರೊ ಎಂ ಎಚ್ ಕೃಷ್ಣಯ್ಯನವರು ದಿನಗಟ್ಟಲೆ ನಮ್ಮ ಕಚೇರಿಯಲ್ಲಿ ಕೂತು ಪರಿಷ್ಕರಿಸಿಕೊಟ್ಟರು. ಹೊಸದನ್ನೂ ತಾವೂ ಬರೆದರು, ಇತರರಿಂದಲೂ ಬರೆಸಿದರು. ಇದೊಂದು ದೊಡ್ಡ ಅನುಭವ.
ವಿಜ್ಞಾನದಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಲೇಖನಗಳನ್ನು ಪರಿಷ್ಕರಿಸಿಕೊಟ್ಟದ್ದು ಇಸ್ರೋದ ಶ್ರೀ ಬಿ ಆರ್ ಗುರುಪ್ರಸಾದ್‍. ಅವರೆಷ್ಟು ಒಳ್ಳೆಯ ಲೇಖಕರೋ ಅಷ್ಟೇ ಬ್ಯುಸಿಯೂ ಇದ್ದಂತಹವರು! ಲೇಖನಗಳ ಕಟ್ಟನ್ನು ಕೈಗಿಟ್ಟು ಕಾರಿನಲ್ಲಿ ನಲ್ಲಿ ಓಡಾಡುವಾಗ ಬರೆದಿದ್ದು ಎಂದರು ಒಮ್ಮೆ! ಚಿತ್ರಗಳನ್ನು ಒದಗಿಸಿದರು, ವಿಡಿಯೋಗಳಿಗೆ ವ್ಯವಸ್ಥೆ ಮಾಡಿದರು. ಈ ಎಲ್ಲವೂ ಅವರ ಬಿಡುವಿರದ ಕೆಲಸ ಕಾರ್ಯಗಳ ಮಧ್ಯೆ! ಇವುಗಳಿಂದ ಅವರಿಗೆ ಆಗಬೇಕಾದ್ದು ಏನೂ ಇರಲಿಲ್ಲ! ಶುದ್ಧವಾದ ವಿಜ್ಞಾನ ಪ್ರೀತಿಗಾಗಿ ಈ ಎಲ್ಲವನ್ನು ಮಾಡಿದರು! ಅವರಿಗೆ ಕೃತಜ್ಞತೆ ಸಲ್ಲಿಸುವುದು ಕೇವಲ ಔಪಚಾರಿಕತೆ ಎನಿಸಿಬಿಡುತ್ತದೆ. ನಮೋನಮಃ
ಇನ್ನು ಜಿ ಟಿ ನಾರಾಯಣ ರಾಯರು! ಕರೆ ಮಾಡಿ ನಾನು ಜಿ ಟಿ ನಾರಾಯಣರಾವ್ ಮಾತಾಡ್ತಾ ಇರೋದು ಎಂದೇ ಹೆದರಿಸುತ್ತಿದ್ದರು! ಇವರ ಸಲಹೆ ಸಹಕಾರ ವಿಶ್ವಕೋಶದ ಯಾತ್ರೆಯುದ್ದಕ್ಕೂ ಇತ್ತು. ಕೆಲವು ಲೆಖನಗಳನ್ನು ಬರೆದುಕೊಟ್ಟರು, ಕೆಲವನ್ನು ಪರಿಷ್ಕರಿಸಿಕೊಟ್ಟರು. ಎಂ ಎಸ್ ಸುಬ್ಬುಲಕ್ಷ್ಮಿ ಕುರಿತ ಲೇಖನ ಇನ್ನು ಬಂದಿರಲಿಲ್ಲ. ತಾವೇ ಬರೆದುಕೊಟ್ಟರು. ಇಷ್ಟು ಹೊತ್ತಿಗೆ ಒಂದು ಡೆಮೊ ಆವೃತ್ತಿ ಸಿದ್ಧವಾಯಿತು. ಅದನ್ನು ತೆಗೆದುಕೊಂಡು ಹೋಗಿ ಅವರಿಗೆ ತೋರಿಸಿದೆವು, ಬಹಳ ಸಂತೋಷಪಟ್ಟರು. ಅವರಿಗೆ ತೋರಿಸುವಾಗ ನಡೆದ ಘಟನೆಯನ್ನು ಇಲ್ಲಿ ಹೇಳಲೇ ಬೇಕು. ಧ್ವನಿ ವಿಭಾಗದಲ್ಲಿ ಇದ್ದ ಮಂಜೇಶ್ವರ ಗೋವಿಂದ ಪೈಗಳ ಗಿಳಿವಿಂಡು ಕವನ, ಪೈಗಳ ಧ್ವನಿಯಲ್ಲೇ ಇತ್ತು. ಅದನ್ನು ಕೇಳಿಸಿದೆವು. ಮನೆಯ ಒಳಗೆಲ್ಲೋ ಇದ್ದ ಇವರ ಶ್ರೀಮತಿಯವರು ಬಂದು “ಗೋವಿಂದ ಪೈಗಳ ಧ್ವನಿಯಲ್ಲವೇ?” ಎಂದು ಕೇಳಿದರು! ಹೀಗೆ ಅನೇಕ ಮಹನೀಯರಿಂದ ಎಳೆಸಿಕೊಂಡ ಕನ್ನಡ ತೇರು, ವೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶ!

 

Sri M Govinda Pai

ಮತ್ತಷ್ಟು ಸುದ್ದಿಗಳು

Latest News

ನಕ್ಸಲ್ ಮುಖಂಡ ಮಡ್ವಿ ಭೀಮಾ ಎನ್ ಕೌಂಟರ್

newsics.com ರಾಯ್ ಪುರ: ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಡ್ವಿ ಭೀಮಾ , ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.  ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವು...

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ ಮಾಡಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾಕ್ಕೆ ಹಲವು...

ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಎಸ್ಐ ಅಮಾನತು

newsics.com ವಾರಂಗಲ್(ಆಂಧ್ರಪ್ರದೇಶ): ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪದ ಮೇಲೆ ಪೊಲೀಸ್ ಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವಾರಂಗಲ್‌ನ ‍ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಕ್ ಶಾಪಿ ಅಮಾನತುಗೊಂಡಿರುವ ಪೊಲೀಸ್ ಅಧಿಕಟರಿ. ನವೆಂಬರ್ 18ರಂದು ವಿವಾಹಿತೆಯ...
- Advertisement -
error: Content is protected !!