Thursday, December 9, 2021

ಯಾವ ಮೋಹನ ಮುರಳಿ ಕರೆಯಿತೋ…

Follow Us

ಒತ್ತಡದ ಬದುಕಿನಲ್ಲಿ, ಹಣವೇ ಎಲ್ಲ ಎನ್ನುವ ಈಗಿನ ಪರಿಸ್ಥಿತಿಯಲ್ಲಿ ಸಂಬಂಧಗಳಿಗೆ ಜಾಗವಿಲ್ಲ. ಎಲ್ಲೋ ಕುಳಿತ ಧಣಿಗಾಗಿ, ನಾಲ್ಕಂಕಿಯ ಸಂಬಳಕ್ಕಾಗಿ ಲ್ಯಾಪ್ಟಾಪ್ ನಲ್ಲಿ ಕಣ್ಣಿಟ್ಟು ಕೂತರೆ ಮನುಷ್ಯನಿಗೆ ಬೇರೆ ಪ್ರಪಂಚವೇ ಇಲ್ಲ. ಪ್ರಪಂಚ ಓಡುತ್ತಿದೆ. ಪ್ರಪಂಚದ ವೇಗಕ್ಕೆ ನಾವು ಹೊಂದಿಕೊಳ್ಳಬೇಕು ಎಂದು ನಾವಷ್ಟೇ ಅಲ್ಲ, ನಮ್ಮ ಮಕ್ಕಳ ಬಾಲ್ಯವನ್ನೂ ಕಸಿಯುತ್ತಿದ್ದೇವೆ.
♦ ಅನಂತ ಕಾಮತ, ಬೆಳಂಬಾರ
response@134.209.153.225

“ಯೇ.. ನೀ ನಾಳೆ ಬೊಗ್ರಿ ಹಣ್ಣು ತಕ್ಕಂಡ್ ಬಾ ನಾ ಕರಬಲ್ ಕಾಯಿ ತಕ್ಕಂಡ್ ಬರ್ತೆ..”
ಹೀಗೆ ನಾವು ಸಂಜೆ ಗೆಳೆಯರನ್ನ ಬೀಳ್ಕೊಡುವ ದಿನಗಳಿದ್ದವು. ಮಾರನೇ ದಿನ ನಾವು ತಂದ ಯಾವುದೂ ಕಾಯಿ ಅಥವಾ ಹಣ್ಣುಗಳನ್ನ ಶಾಲೆಯ ಪಕ್ಕದಲ್ಲಿ ಅಡ್ಡವಾಗಿ ಬೆಳೆದ ಮಾವಿನ ಮರದ ರೆಂಬೆಯ ಮೇಲೆ ಕೂತು ತಿನ್ನುತ್ತಿದ್ದ ದಿನಗಳಿದ್ದವು.

ಶಾಲೆಯ ವಾರ್ಷಿಕ ಪರೀಕ್ಷೆ ಮುಗಿದು ಫಲಿತಾಂಶ ಹೇಳುವವರೆಗಿನ ದಿನಗಳು ನಮಗೊಂದು ಹಬ್ಬವಿದ್ದ ಹಾಗೆ. ರಿಸಲ್ಟ್ ಬಂದ ನಂತರ ಎಲ್ಲರೂ ಅಜ್ಜಿಮನೆಗೆ ಹೋಗುವ ಕಾರಣ ಅಲ್ಲಿಯವರೆಗೆ ಎಲ್ಲರೂ ಸೇರುವ ಕಾರಣ ನಾವು ಶಾಲೆಗೆ ಹೋಗುತ್ತಿದ್ದೆವು. ಮನೆಯಲ್ಲಿದ್ದರೆ ನಮ್ಮ ಕಾಟ ತಡೆಯೋದು ಕಷ್ಟವಿದ್ದ ಕಾರಣ ಮನೆಯವರೂ ಅದನ್ನ ತಡೆಯುತ್ತಿರಲಿಲ್ಲ. ಶಾಲೆಗೆ ಹೆಚ್ಚಾಗಿ ಯಾರೂ ಬರದ ಸಮಯ ಅದು. ನಾವು ನಾಲ್ಕೈದು ಆಪ್ತಮಿತ್ರರು ಮಾತ್ರ ಸೇರಿಕೊಂಡು ಮಾವಿನ ಮರ ಹತ್ತಿ ಯಾರೋ ಯಾವತ್ತೋ ಹೇಳಿದ ದೆವ್ವದ ಕಥೆಯನ್ನೋ, ಚೌಡಿ, ಮಾಸ್ತಿ, ಜಟಕದ ಕಥೆಯನ್ನೋ.. ಹೇಳುತ್ತಾ / ಕೇಳುತ್ತಾ ಕೂರುತ್ತಿದ್ದೆವು. ಪ್ರತಿಯೊಬ್ಬರಲ್ಲೂ ಕಥೆಗಳಿದ್ದವು. ಕೇಳುವಾಗ ಪ್ರತಿಯೊಬ್ಬರ ಕಣ್ಣುಗಳು ತಾಳುತ್ತಿದ್ದ ಭಾವ, ಆ ತನ್ಮಯತೆ ಈಗಲೂ ಮರೆಯಲಾಗದ್ದು. ಕಥೆ ಕೇಳುತ್ತಿದ್ದಾಗ ತರಗೆಲೆಯ ಸರಕ್ಕ್ ಎನ್ನುವ ಸದ್ದೂ ಎಲ್ಲರನ್ನೂ ಹೆದರಿಸುತ್ತಿತ್ತು.

ಸಂಜೆ ಊಟದ ನಂತರ ಬಿಸಿಲು ಇರುವ ಕಾರಣ ಶಾಲಾ ಲೈಬ್ರರಿಯ ರಾಮಾಯಣದ್ದೋ / ಮಹಾಭಾರಥದ್ದೋ ಚಿತ್ರಕಥೆಗಳನ್ನ ಓದಿ ಸಂಜೆ ಮತ್ತೆ ಮಾರನೇ ದಿನದ ಪ್ಲಾನ್ ಮಾಡುತ್ತಿದ್ದೆವು. ಆಗ ಟಿವಿಯೂ ಅಷ್ಟಾಗಿ ಇರಲಿಲ್ಲ, ಮೊಬೈಲ್ ಕೂಡ ಇರಲಿಲ್ಲ. ಆದರೆ ಹೇಳಲು ಪ್ರತಿಯೊಬ್ಬರಲ್ಲೂ ಕಥೆಗಳಿದ್ದವು. ಕೇಳಲು ಪ್ರತಿಯೊಬ್ಬರಲ್ಲೂ ತಾಳ್ಮೆ ಇತ್ತು. ಕುತೂಹಲವಿತ್ತು. ತಿನ್ನಲು ಹಸಿವಿತ್ತು. ಆಡಲು ಕಸುವೂ ಇತ್ತು. ಆದರೆ ಈಗ..?

ಖರ್ಚು ಮಾಡಲು ಹಣವಿದೆ ನಿಜ. ಕೇಳಲು ಕಥೆಗಳಿಲ್ಲ. ಹೆಚ್ಚಾಗಿ, ಹೇಳುವವರೂ ಹತ್ತಿರವಿಲ್ಲ. ನಮಗೂ ಕೇಳುವ ತಾಳ್ಮೆಯಾಗಲೀ ಪುರುಸೊತ್ತಾಗಲೀ ಮೊದಲೇ ಇಲ್ಲ.

ವಾಟ್ಸಾಪ್ ಚಾಟ್ಗಳನ್ನೇ ನೋಡಿ ಒಮ್ಮೆ. “ಹ್ಮ್”, “ಓಕೆ”, “ಮತ್ತೇನು?” ಇವೆ ಹೆಚ್ಚಿಗೆ ಕಾಣೋದು ನಮಗೆ. ಈಗ ಯಾರ ಮನಸ್ಸಿನಲ್ಲೂ ಕಥೆಗಳಿಗೆ, ಸಂಬಂಧಗಳಿಗೆ ಜಾಗವಿಲ್ಲ. ಎಲ್ಲೋ ಕುಳಿತ ಧಣಿಗಾಗಿ, ನಾಲ್ಕಂಕಿಯ ಸಂಬಳಕ್ಕಾಗಿ ಲ್ಯಾಪ್ಟಾಪ್ ನಲ್ಲಿ ಕಣ್ಣಿಟ್ಟು ಕೂತರೆ ಮನುಷ್ಯನಿಗೆ ಬೇರೆ ಪ್ರಪಂಚವೇ ಇಲ್ಲ. ಪ್ರಪಂಚ ಓಡುತ್ತಿದೆ. ಪ್ರಪಂಚದ ವೇಗಕ್ಕೆ ನಾವು ಹೊಂದಿಕೊಳ್ಳಬೇಕು ಎಂದು ನಾವಷ್ಟೇ ಅಲ್ಲ, ನಮ್ಮ ಮಕ್ಕಳ ಬಾಲ್ಯವನ್ನೂ ಕಸಿಯುತ್ತಿದ್ದೇವೆ.

ಓಡುತ್ತಿದ್ದ ಕಾಲವನ್ನು ಅಟ್ಟುತ್ತಾ ನಾವು ಸಾಧಿಸಿದ್ದು ಏನನ್ನು..? ಚಿಕ್ಕವರಿದ್ದಾಗ ಅಮ್ಮಾ ಹಸಿವು.. ಎಂದು ಅಮ್ಮನ ಹಿಂದೆ ತಿರುಗುತ್ತಿದ್ದ ನಾವು, ಇಂದು ನಮಗಾಗಿ ನಮ್ಮ ಒಂದು ಕಾಲ್ ಗಾಗಿ ಅಮ್ಮ ರಾತ್ರಿ 11ರವರೆಗೆ ಕಾಯಬೇಕಾದ ಪರಿಸ್ಥಿತಿಯನ್ನು ತಂದಿಟ್ಟಿದ್ದೇವೆ. ಲಾಕ್ ಡೌನ್ ಸಮಯದಲ್ಲಿ ಇವೆಲ್ಲ ನೆನಪಿಗೆ ಬಂತು. ಕವಿ ಗೋಪಾಲಕೃಷ್ಣ ಅಡಿಗರು ಹೇಳಿರುವಂತೆ, ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ…’

ಮತ್ತಷ್ಟು ಸುದ್ದಿಗಳು

Latest News

ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ: ಸಂಸದ ಸುಬ್ರಮಣಿಯನ್ ಸ್ವಾಮಿ ಶಂಕೆ, ತನಿಖೆಗೆ ಆಗ್ರಹ

newsics.com ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡವಿದೆಯಾ ಎಂಬ ಸಂಶಯವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ದುರಂತವಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ...

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಪ್ರಧಾನಿ...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...
- Advertisement -
error: Content is protected !!