Sunday, March 26, 2023

ಪೂರ್ಣಚಂದ್ರ ತೇಜಸ್ವಿಯವರಿಂದ ದೂರವಾಣಿ ಕರೆ!

Follow Us

ವಿಶ್ವಕೋಶ ರಸಯಾತ್ರೆ – 4
* ನವೀನ್ ಕಲ್ಗುಂಡಿ
response@134.209.153.225
ksn.bird@gmail.com

ಹೌದು! ಆ ದಿನವೂ ಇತ್ತು! ವಿಶ್ವಕೋಶದ ಸಂದರ್ಭ. ಕುಪ್ಪಳಿಯ ಕವಿಶೈಲವನ್ನು ಚಿತ್ರೀಕರಿಸಲು ಅನುಮತಿ ಕೇಳಿದ್ದೆವು. ಬಹಳ ಪ್ರೀತಿಯಿಂದ ಕೊಟ್ಟರು. ಅವರಿಗೆ ಬಿಡುವಿರಲಿಲ್ಲವಾಗಿ ಬರಲಾಗದು ನೀವು ಹೋಗಿ ಮಾಡಿಕೊಳ್ಳಿ ಎಂದಿದ್ದರು. ಹೋದೆವು. ಅಲ್ಲಿನ ಸಮಕಾರ್ಯದರ್ಶಿ ಪ್ರಕಾಶ್ ಕಡಿದಾಳ್ ಅವರ ಆತ್ಮೀಯತೆಯಿಂದ ತೋಯ್ದುಹೋದೆವು! ಅದೆಷ್ಟು ಒಪ್ಪ-ಓರಣವಾಗೀ ಕುವೆಂಪು ಸ್ಮಾರಕವನ್ನು ಕಾಪಾಡಿಕೊಂಡು ಬಂದಿದ್ದಾರೆ! ಇವರ ಶ್ರಮಕ್ಕೆ ಒಂದು ನಮಸ್ಕಾರ! ಇವರು ಹಾಗೂ ಅಲ್ಲಿ ಸಿಬ್ಬಂದಿ ಕುವೆಂಪು ಮನೆಯ ಇಂಚಿಂಚನ್ನೂ ತೋರಿಸಿದರು. ಎಲ್ಲವನ್ನು ಚಿತ್ರೀಕರಿಸಿಕೊಂಡೆವು. ಅದೊಂದು ಕೃತಾರ್ಥತೆಯ ಕ್ಷಣ. ನಮ್ಮ ಕೆಲಸವಾದ ಮೇಲೆ ಪ್ರಕಾಶರು ಬಲವಂತವಾಗಿ ಪಕ್ಕದಲ್ಲೇ ಇರುವ ಹೊಟೇಲಿಗೆ ಕರೆದೊಯ್ದು ಊಟ ಹಾಕಿಸಿದರು! ಕನಸಿನಂತಹ ದಿನವದು! ಕುವೆಂಪು ಮನೆಯ ವಿಡಿಯೋದ ಸುಮಾರು ಭಾಗ ಕನ್ನಡ ವಿಶ್ವಕೋಶದಲ್ಲಿದೆ. ಇದಕ್ಕೆ ಕಾರಣ ಮಾನ್ಯ ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರಕಾಶ್ ಕಡಿದಾಳ್. ಇವರಿಗೆ ಕನ್ನಡ ಜನತೆ ಕೃತಜ್ಞರಾಗಿರಬೇಕು.

ತೇಜಸ್ವಿಯವರೊಂದಿಗೆ ದಿನಪೂರ ಹಕ್ಕಿಗಳನ್ನು ಕುರಿತು ಮಾತಾಡಬೇಕು ಎಂದು ಕೊಂಡಿದ್ದೆ! ಅದು ಆಗಲೇ ಇಲ್ಲ! ರಾಜೇಶ್ವರಿಯವರು ಬರೆದಿದ್ದಾರೆ: “ತೇಜಸ್ವಿ ಬೇಕು” ಎಂದು. ಅದು ನಮ್ಮ ಅಂತರಂಗದ ಬಯಕೆಯೂ ಸಹ.

ಅಲ್ಲಿನ ಪ್ರಸಿದ್ಧ ಅಡುಗೆ ಮನೆ, ಕುಂದಾದ್ರಿಯ ನೋಟ, ಅಜ್ಜಯ್ಯನ ಅಭ್ಯಂಜನದ ಬಚ್ಚಲು ಮನೆ, ಬಡಬಾಗ್ನಿಯ ಮರಿಯಂತಹ ಒಲೆ! ದೇವರು ರುಜುಮಾಡುತ್ತಿರುವುದನ್ನು ನೋಡುತ್ತಾ ರಸವಶನಾಗುವ ಕವಿ ಕುವೆಂಪು….”ಮಲೆನಾಡಿನ ಚಿತ್ರಗಳು” ಕಣ್ಣೆದುರಿಗೆ… ಮತ್ತೆ ಬರುವವೇ ಆ ದಿನಗಳು!

ಮತ್ತಷ್ಟು ಸುದ್ದಿಗಳು

vertical

Latest News

ಇಂದು 36 ಉಪಗ್ರಹಗಳ ಉಡಾವಣೆ: ಕ್ಷಣಗಣನೆ ಆರಂಭ ಎಂದ ಇಸ್ರೋ

newsics.com ಶ್ರೀಹರಿಕೋಟಾ: ಇಸ್ರೊ ಸಹೋದ್ಯೋಗಿಗಳ ಜತೆ ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಭಾನುವಾರ ಬೆಳಗ್ಗೆ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. 36 ಉಪಗ್ರಹಗಳನ್ನು ಎಲ್‌ವಿಎಂ3–ಎಂ3/ಒನ್‌ವೆಬ್‌ ಇಂಡಿಯಾ–2 ಮಿಷನ್‌ನಲ್ಲಿ ಉಡಾವಣೆ...

ಸರ್ ಎಂ.ವಿ. ಜನ್ಮಸ್ಥಳಕ್ಕೆ ಬಂದಿರುವುದು ನನ್ನ ಸೌಭಾಗ್ಯ: ಮೋದಿ

newsics.com ಬೆಂಗಳೂರು: ಆಧುನಿಕ ಭಾರತಕ್ಕೆ ಮಾದರಿಯಾಗಿರುವ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಹುಟ್ಟಿದ ಪುಣ್ಯಭೂಮಿ ಚಿಕ್ಕಬಳ್ಳಾಪುರಕ್ಕೆ ಇಂದು ನಾನು ಬಂದಿರುವುದು ನನ್ನ ಸೌಭಾಗ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಚಿಕ್ಕಬಳ್ಳಾಪುರದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ...

ಕಾಸರಕೋಡು ಕಡಲತೀರದಲ್ಲಿ ಅಪರೂಪದ ‘ಗಿಟಾರ್ ಫಿಶ್’ ಪತ್ತೆ

newsics.com ಕೇರಳ: ಕಾಸರಕೋಡು ಕಡಲತೀರದಲ್ಲಿ ಅಪರೂಪದ 'ಗಿಟಾರ್ ಫಿಶ್' ಪತ್ತೆಯಾಗಿದೆ. ಕಡಲತೀರದಲ್ಲಿ ಮೀನು ಬಿದ್ದಿರುವುದು ಕಂಡು ಬಂದಿದ್ದು. ಈ ಹಿಂದೆ ಇಂತಹ ಮೀನನನ್ನು ಎಲ್ಲಿಯೂ ನೋಡಿರಲಿಲ್ಲ ಎಂದು ಕಾಸರಕೋಡಿನ ಇಕೋ ಬೀಚ್‌ನ ವ್ಯವಸ್ಥಾಪಕ ವಿನೋದ್ ಎಸ್...
- Advertisement -
error: Content is protected !!