Tuesday, January 25, 2022

ಅತ್ಯಾಚಾರ ಎನ್ನುವ ಸಾಮಾಜಿಕ ಪಿಡುಗು

Follow Us

  • ಕೊಟ್ರೇಶ್ ಕೊಟ್ಟೂರು

ತ್ತೀಚೆಗೆ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ವಿಪರೀತ ಜಾಸ್ತಿಯಾಗುತ್ತಿವೆ. ಒಂದು ಹೆಣ್ಣನ್ನು ಬರೀ ಭೋಗದ ವಸ್ತುವಾಗಿ ತಮ್ಮ ತೆವಲು ತೀರಿಸಿಕೊಳ್ಳಲು ಕೊಲ್ಲುವ ಮಟ್ಟಕ್ಕೆ ಗಂಡು ಹೋಗ್ತಾನೆ ಎಂದರೆ ಅದನ್ನೊಂದು ಮನುಷ್ಯಸಮಾಜ ಅನ್ನಬೇಕಾ ? ನಾವು ಮನುಷ್ಯ ಸಮಾಜದಲ್ಲಿದ್ದೇವೋ ಅಥವಾ ರಾಕ್ಷಸ ಸಮಾಜದಲ್ಲಿದ್ದೇವೋ ಎನ್ನುವ ಅನುಮಾನ ನನಗೆ ಕಾಡುತ್ತದೆ. ಬರೀ ತಾಯಿಯನ್ನು ಒಂದು ಭೋಗದ ವಸ್ತುವನ್ನಾಗಿ ನೋಡಿ ತಮ್ಮ ಗಂಡಸುತನದ ತೆವಲುಗಳನ್ನು ತೀರಿಸಿಕೊಳ್ಳಲು ಗಂಡು ಆ ಮಟ್ಟಕ್ಕೆ ಬೆಳೆಯುತ್ತಾನೆ ಎಂದಾದರೆ ಅದು ಮನುಷ್ಯ ಸಮಾಜ ಎನ್ನಲು ಹೇಗೆ ಸಾಧ್ಯ ? ಇವುಗಳನ್ನು ತಡೆಗಟ್ಟಲು ಸಾಧ್ಯವಿಲ್ಲವೇ ?
ಮೊನ್ನೆ ತಾನೇ ಆಂಧ್ರಪ್ರದೇಶದ ವೈದ್ಯೆಯ ಮೇಲೆ ಅತ್ಯಾಚಾರ ಮಾಡಿ ಕೊಂದರು. ಬರೀ ಇಂತಹ ಅತ್ಯಾಚಾರ ಪ್ರಕರಣಗಳನ್ನು ನಾವು ಕೇಳುತ್ತಲೇ ಇದ್ದೇವೆ. ಇವತ್ತಿನ ಸುದ್ದಿ ನಾಳೆಗೆ ಲದ್ದಿಯಾಗಿ ನಮ್ಮ ನಮ್ಮ ಜೀವನದ ಜಂಜಾಟಗಳಲ್ಲಿ ಆಗಿರುವ ಕ್ರೂರತೆಗಳನ್ನೆಲ್ಲಾ ಮರೆಯುತ್ತಲೇ ಹೋಗುತ್ತೇವೆ. ಅದರ ಗೋಜಿಗೆ ಯಾವಾಗ ಹೋಗುತ್ತೇವೆ ಎಂದರೆ ಮತ್ತೆ ಅಂತಹ ಪ್ರಕರಣಗಳು ನಡೆದಾಗ ಮಾತ್ರ ಒಂದಷ್ಟು ಪ್ರತಿಭಟನೆ, ಫೇಸ್ಬುಕ್‍ನಲ್ಲಿ ಬರೆಯುವುದು, ಕೆಲವೊಂದು ಸಾಮಾಜಿಕ ಹೋರಾಟಗಳನ್ನು ಮಾಡುವುದು ಇವುಗಳಿಗಷ್ಟೇ ಸೀಮಿತವಾಗಿದ್ದುಬಿಡುತ್ತೇವೆ. ಇವುಗಳೆಲ್ಲವೂ ಇಂತಹ ಕ್ರೂರತೆಗಳಿಗೆ ಪರಿಹಾರವೇ ಎನ್ನುವುದನ್ನು ನಾವು ಆಲೋಚಿಸಬೇಕಾಗಿದೆ.
ಸಮಾಜದಲ್ಲಿ ಒಂಟಿಯಾಗಿ ಹೆಣ್ಣು ಜೀವಿಸಲು ಹೆದರುವಂತಹ ಪರಿಸ್ಥಿತಿ ಈಗ ಭಾರತದಲ್ಲಿದೆ. ಒಂಟಿ ಹೆಣ್ಣು ಕಂಡರೆ ಸಾಕು ಕಾಡುಮೃಗಗಳ ರೀತಿ ಅವರ ಮೇಲೆ ಎರಗಿ ಕೊಲೆ ಮಾಡುವ ಹೀನಸ್ಥಿತಿಗೆ ಗಂಡು ಇಳಿಯುತ್ತಾನೆ ಎಂದರೆ ಅವನ ಕ್ರೂರತೆ ಎಷ್ಟರ ಮಟ್ಟಿಗೆ ಉನ್ನತ ಸ್ಥಿತಿಗೆ ಹೋಗಿದೆ ಎಂದು ಊಹಿಸಲೂ ಸಾಧ್ಯವಿಲ್ಲ. ಹೀಗಾದರೆ ನಾವು ಸಮಾಜದಲ್ಲಿ ಶಾಂತಿಯನ್ನು ತರಲು ಹೇಗೆ ಸಾಧ್ಯ ? ಹೆಣ್ಣು ಸಮಾಜದ ಕಣ್ಣು ಅವಳಿಲ್ಲದೇ ಜನನವೇ ಇಲ್ಲ ಎನ್ನುವ ಅರಿವು ಪ್ರತೀಯೊಬ್ಬ ಗಂಡಸಿಗೂ ಇರಬೇಕು. ಆಗ ಮಾತ್ರ ಇಂತಹವುಗಳನ್ನು ತಡೆಯಲು ಸಾಧ್ಯ.
ಪ್ರತಿಯೊಬ್ಬ ತಾಯಿಗೂ ಮನಸ್ಸಿದೆ, ಭಾವನೆಗಳಿವೆ, ಅಂತಃಕರಣವಿದೆ ಅದಕ್ಕಿಂತ ಹೆಚ್ಚಾಗಿ ನನ್ನ ಮನೆಯಲ್ಲೂ ತಾಯಿಯಿರುವರು, ಅಕ್ಕ ತಂಗಿಯರು ಇರುವರು, ಹೆಂಡತಿಯೂ ಇರುವಳು ಇದೆಲ್ಲದ್ದಕ್ಕಿಂತ ಹೆಚ್ಚಾಗಿ ನಾನೂ ಒಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದೇನೆ ಎನ್ನುವ ಅರಿವು ಬರಬೇಕು. ಇವುಗಳು ಆ ಕೃತ್ಯ ಮಾಡುವಾಗ ಬಂದರೆ ಬಹುಶಃ ಇಂತಹ ಕ್ರೂರತೆಗಳು ಕಡಿಮೆಯಾಗಬಹುದು ಎನಿಸುತ್ತದೆ. ಭಾರತದಂತಹ ಪುರುಷ ಪ್ರಧಾನ ಸಮಾಜದಲ್ಲಿ ನಿಜವಾದ ಶೋಷಿತರಾದವರು ಯಾರು ಎಂಬುದನ್ನು ನಾವು ಆಲೋಚಿಸಬೇಕಾಗಿದೆ. ಆ ನಿಟ್ಟಿನಲ್ಲಿ ನೋಡುವುದಾದರೆ ನಾವು ಶತಶತಮಾನಗಳಿಂದಲೂ ಅಂದರೆ ಮಹಾಭಾರತ ರಾಮಾಯಣ ಕಾಲದಿಂದಲೂ ಮಹಿಳೆ ನಿಜಕ್ಕೂ ಶೋಷಿತಳಾಗೇ ಬಂದಿದ್ದಾಳೆ. ಅದು ರಾಮಾಯಣ ಕಾಲದಲ್ಲಿ ರಾಮ ಸೀತೆಯನ್ನು ಅನುಮಾನಿಸಿದ್ದೂ ಇರಬಹುದು, ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣವೂ ಇರಬಹುದು. ಇದು ಈ ಕಾಲಕ್ಕೂ ಮುಂದುವರಿದಿರುವುದು ದುರಂತವೇ ಸರಿ. ಈ ಎಲ್ಲ ಕ್ರೂರತೆಗಳ ಮಧ್ಯೆಯೂ ನಾವು ಮಹಿಳಾಪರ ಚಿಂತನೆಗಳನ್ನು ಮಾಡಬೇಕಿದೆ. ಚಿಂತನೆಗಳು ಎಂದರೆ ಹೋರಾಟ ಮಾಡುವುದು ಅಥವಾ ಎಲ್ಲರನ್ನೂ ಒಗ್ಗೂಡಿಸಿ ನಮ್ಮ ಶಕ್ತಿ ಎಷ್ಟು ಎಂದು ತೋರಿಸುವುದು ಎರಡೂ ಅಲ್ಲ. ಪ್ರತೀ ಒಬ್ಬ ಗಂಡಸು ಸಹ ತಮ್ಮ ತಮ್ಮ ಮನೆಗಳಲ್ಲಿರುವ ಹೆಣ್ಣುಮಕ್ಕಳ ಬಗ್ಗೆ ಗೌರವ ಅದಮ್ಯ ಪ್ರೀತಿಯನ್ನು ಇಟ್ಟುಕೊಂಡು ಪರರ ಹೆಣ್ಣುಮಕ್ಕಳಲ್ಲೂ ತನ್ನ ತಾಯಿಯನ್ನು ತನ್ನ ಅಕ್ಕಂದಿರನ್ನು ಕಂಡಾಗ ಮಾತ್ರ ಈ ಅತ್ಯಾಚಾರ ಎನ್ನುವ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಸಾಧ್ಯವಾಗಬಹುದು ಇಲ್ಲವಾದರೆ ಮನುಷ್ಯ ಸಂಕುಲವೇ ಸರ್ವನಾಶವಾಗಿಬಿಡುತ್ತದೆ.
ಅತ್ಯಾಚಾರ ಮಾಡಿದವರನ್ನು ಶಿಕ್ಷಿಸುವ ನ್ಯಾಯಾಂಗದ ವ್ಯವಸ್ಥೆಯಲ್ಲಿಯೂ ಹಲವಾರು ತೊಡರುಗಳಿವೆ ಅತ್ಯಾಚಾರಕ್ಕೊಳಗಾದ ಎಷ್ಟೋ ಜನ ತಾಯಂದಿರು ಮುಗಿಲನ್ನೇ ನೋಡಿಕೊಂಡು ನನಗೆ ನ್ಯಾಯ ಸಿಗಬಹುದಾ ಎನ್ನುವ ಆಶಾಭಾವನೆಯಲ್ಲಿಯೇ ಕಾಲ ತಳ್ಳುತ್ತಿದ್ದಾರೆ. ಈ ರೀತಿಯ ಹೇಯ ಕೃತ್ಯಗಳನ್ನು ಮಾಡಿದವರಿಗೂ ಸಹ ಕಠಿಣಾತಿಕಠಿಣ ಶಿಕ್ಷೆಗಳನ್ನು ಬಹುಬೇಗ ಇತ್ಯರ್ಥ ಪಡಿಸುವಂತಹ ಕಾನೂನುಗಳನ್ನು ನಮ್ಮ ರಾಜಕೀಯ ಪ್ರತಿನಿಧಿಗಳು ಮಾಡಲೇಬೇಕಾದ ಅನಿವಾರ್ಯತೆ ಇದೆ. ಬರೀ ಅವರನ್ನು ಕೊಂದ ಮಾತ್ರಕ್ಕೆ ಅವರಲ್ಲಿನ ಅತ್ಯಾಚಾರ ಮನಸ್ಸು ಸಾಯುವುದಿಲ್ಲ. ಅವರಲ್ಲಿ ಅತ್ಯಾಚಾರ ಮಾಡುವ ಮನಸ್ಸನ್ನು ಕೊಲ್ಲಬೇಕು. ಇಲ್ಲವಾದರೆ ಈ ಭೂಮಿಯ ಮೇಲೆ ಬಂದೂಕು ಮತ್ತು ರಕ್ತದ ಕಲೆ ಮಾತ್ರ ಉಳಿದುಬಿಡುತ್ತದೆ.

ಮತ್ತಷ್ಟು ಸುದ್ದಿಗಳು

Latest News

ರಾಜ್ಯದ ಐವರಿಗೆ ಪದ್ಮಶ್ರೀ ಪ್ರಶಸ್ತಿ

newsics.com ನವದೆಹಲಿ: ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ ಸೇರಿ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. 2022ನೇ ಸಾಲಿನ ಪದ್ಮ ವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ...

ರಾಜ್ಯದಲ್ಲಿ 41,400 ಮಂದಿಗೆ ಕೊರೋನಾ, 53,093 ಜನ ಗುಣಮುಖ, 52 ಸೋಂಕಿತರು ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ(ಜ.25) ಹೊಸದಾಗಿ 41,400 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ‌. ಕೊರೋನಾ ಸೋಂಕಿನಿಂದ 52 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ 1,55,054 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ಬೆಂಗಳೂರಿನಲ್ಲಿ 19,105 ಮಂದಿಗೆ...

ಮಾರ್ಚ್ 28ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

newsics.com ಬೆಂಗಳೂರು: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ನಡಯಲಿದೆ. ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈ ಮಾಹಿತಿ ನೀಡಿದೆ. ಮಾರ್ಚ್ 28- ಕನ್ನಡ, ಮಾರ್ಚ್ 30- ಇಂಗ್ಲಿಷ್, ಏಪ್ರಿಲ್ 4-...
- Advertisement -
error: Content is protected !!