Thursday, May 6, 2021

ವಿಶ್ವಕೋಶದಲ್ಲಿ ವಾಯುಪಡೆಯ ದೃಶ್ಯಗಳು…

ವಿಶ್ವಕೋಶ ರಸಯಾತ್ರೆ- 2

  • ಕಲ್ಗುಂಡಿ ನವೀನ್
    response@134.209.153.225
    ksn.bird@gmail.com

ಕೆಲವು ವಿಷಯಗಳನ್ನು ತೆಗೆದುಕೊಂಡರೆ ನಾನು ಬಹಳ ಅದೃಷ್ಟವಂತ! ಅಂತಹ ಅದೃಷ್ಟಗಳಲ್ಲಿ ಒಂದು ಕನ್ನಡದ ಮಹತ್ವದ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು. ನೀವು ಹಿಂದೆ ಪೀಠಿಕೆಯಲ್ಲಿ ನೋಡಿದ ವಿಶ್ವಕೋಶದ ಅಭಿವೃದ್ಧಿಯಲ್ಲಿನ ಹೃದ್ಯಘಟನೆಗಳಲ್ಲೊಂದು, ನಮಗೆ ಭಾರತೀಯ ವಾಯುಪಡೆಯ ಸಿಡಿಯನ್ನು ಬಳಸಿಕೊಳ್ಳಲು ಅನುಮತಿ ಸಿಕ್ಕ ಪ್ರಸಂಗ!

ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ಆಂಕಿಕ ಕಾರ್ಯ (ಡಿಜಿಟೈಸೇಷನ್) ಅಂತಹ ಒಂದು ಯೋಜನೆ. ಲೇಖನಗಳನ್ನು ಪರಿಷ್ಕರಿಸಿ, ಆಡಿಯೋ ವಿಡಿಯೋ ಸೇರಿಸಬೇಕಾಗಿತ್ತು.

ಅದು ಇಂತಹ ಮೊಬೈಲು- ವಿಡಿಯೋ ಯುಗವಾಗಿರಲಿಲ್ಲ (೨೦೦೫), ಒಂದೊಂದು ವಿಡಿಯೋಗೂ ಅದೆಷ್ಟು ಕಷ್ಟಪಟ್ಟೆವು ಎಂಬುದನ್ನು ನೆನೆದರೆ ಈಗ ಆಶ್ಚರ್ಯವಾಗುತ್ತದೆ, ನಗುವೂ ಬರುತ್ತದೆ. ಇನ್ನು ಸಿಕ್ಕ ವಿಡಿಯೋಗಳನ್ನು ವಿಶ್ವಕೋಶಕ್ಕೆ ಹಾಕಲು ಅನುಮತಿ ಬೇಕು! ಅದು ಇನ್ನೊಂದು ಹಂತ!

ವಾಯುಪಡೆಯಿಂದ ಒಳ್ಳೆಯ ಎರಡು ಸಿಡಿಗಳನ್ನು ತರಿಸಿದ್ದೆ. ಆದರೆ ಅದನ್ನು ಹಾಕಲು ಅನುಮತಿ?

ಈ ಸಂದರ್ಭದಲ್ಲಿ ಸಹಾಯ ಮಾಡಿದ್ದು ನನ್ನ ಹಿರಿಯ ಮಿತ್ರರಾದ ಡಿ. ಆರ್. ಪ್ರಹ್ಲಾದ್. ಖುದ್ದು ವಾಯುಪಡೆಯಲ್ಲಿದ್ದು ನಿವೃತ್ತರಾದವರು. ವಾಯುಪಡೆಯ ಮಹತ್ವದ ಕಾರ್ಯಾಚರಣೆಗಳಲ್ಲಿ ಭಾಗಿಯಾದವರು. “ಒಂದು ಪತ್ರ ಬರೆದುಕೊಂಡು ಬನ್ನಿ. ನನಗೆ ಕಮಾಂಡೆಂಟ್ ಆಗಿದ್ದವರ ಬಳಿ ಕರೆದುಕೊಂಡು ಹೋಗುತ್ತೇನೆ. ಮುಂದಿನದು ಅವರು ಹೇಳಿದಂತೆ!” ಎಂದರು. ಪಕ್ಕಾ ಮಿಲಿಟರಿ ಸ್ಟೈಲ್ನಲ್ಲಿ!

ಸರಿ ಹೋದೆವು. ಬೆಂಗಳೂರಿನ ಮೆಖ್ರಿ ಸರ್ಕಲ್ನಲ್ಲಿನ ವಾಯುಪಡೆಯ ತರಬೇತಿ ಕಮಾಂಡ್! ಅದರ ಏರ್ ಆಫಿಸರ್ ಕಮಾಂಡಿಂಗ್ ಇನ್ ಛೀಪ಼್ ಅವರೇ ನನ್ನ ಮಿತ್ರರ ಕಮಾಂಡೆಂಟ್. ಏರ್ ಮಾರ್ಷಲ್ ಸುಭಾಶ್ ಭೋಜ್ವಾನಿ ಎಂದು ಅವರ ಹೆಸರು. ಮಿತ್ರರ ಸಹಾಯದಿಂದ ಪ್ರವೇಶ ದೊರೆಯಿತು. ಒಳಗೆ ಅವರ ಕ್ವಾರ್ಟರ್ಸ್ ಬಳಿ ಕಾಯಹೇಳಿದರು. ಹೋಗಿ ಕಾಯುತ್ತಾ ನಿಂತಿದ್ದೆವು. ಹತ್ತು ನಿಮಿಷದಲ್ಲಿ ಅವರ ಕಾರ್ ಬಂದಿತು. ಅವರು ಇಳಿದು ನಮಗೆ ಬರಲು ಸನ್ನೆ ಮಾಡಿದರು. ಮಿತ್ರರು ಅವರಿಗೆ ಮಿಲಿಟರಿ ಸಲ್ಯೂಟ್ ನೀಡಿದರು. ವಿಷಯ ಏನೆಂದು ಕೇಳಿದರು. ಹೇಳಿದೆ. ಅಷ್ಟುಹೊತ್ತಿಗೆ ಡೆಮೊ ತೋರಿಸಲು ಒಂದು ಆವೃತ್ತಿಯನ್ನು ಸಿದ್ಧಪಡಿಸಿಕೊಂಡಿದ್ದೆವು. ಅವರು ಮನೆಯ ಮುಂದಿದ್ದ ಉಯ್ಯಾಲೆಯ ಮೇಲೆ ಕೂತು ತಮ್ಮ ಪಕ್ಕಕ್ಕೆ ಬರಲು ತಿಳಿಸಿದರು! ಭಯ-ಹೆಮ್ಮೆಗಳಿಂದ ಹೋಗಿ ಕೂತು ತೋರಿಸಿದೆ. ಎಲ್ಲ ಕೂಲಂಕಷವಾಗಿ ನೋಡಿದರು. ವಾಯುಪಡೆಯ ವಿಡಿಯೋ ಬಳಸಲು ಅನುಮತಿ ಕೇಳಿದೆ. ಪತ್ರ ಕೊಟ್ಟೆ. ಕ್ಷಣಕಾಲ ನೋಡಿ, “ವೆಲ್, ಯು ವಿಲ್ ಹಿಯರ್ ಡೈರೆಕ್ಟ್ಲೀ ಫ್ರಂ ದ ಏರ್ ಹೆಡ್ ಕ್ವಾರ್ಟರ್ಸ್” ಎಂದು ಹೇಳಿ ಎದ್ದು ಕೈಕುಲುಕಿ ಹೊರಟುಬಿಟ್ಟರು! ಬಿರುಗಾಳಿ ಕ್ಷಣಕಾಲ ಬಂದು ಹೋದಂತೆ! ನನಗೆ ಹೋದ ಕೆಲಸ ಕಾಯೋ ಹಣ್ಣೋ ತಿಳಿಯಲಿಲ್ಲ.

ಏನಾದರಾಗಲಿ, ಇಂತಹವರನ್ನು ಭೇಟಿ ಮಾಡಿದೆನಲ್ಲ? ಅದೇ ಅದೃಷ್ಟ ಎಂದುಕೊಂಡೆ. ಅವರು ಹಲವು ಯುದ್ಧಗಳಲ್ಲಿ ಭಾಗವಹಿಸಿದ್ದವರು. ಕಾರ್ಗಿಲ್ ಸಂಘರ್ಷದ ಸಂದರ್ಭದಲ್ಲಿ ಇವರು ಡೈರೆಕ್ಟರ್ ಆಪ಼್ ಆಪರೇಷನ್ಸ್ (ಅಫೆನ್ಸಿವ್) ಆಗಿದ್ದರಂತೆ. ಒಂದು ಮಿಶ್ರಭಾವದಿಂದ ವಾಪಸಾದೆವು. ಕೆಲವೇ ದಿನಗಳಲ್ಲಿ ವಿಂಗ್ ಕಮಾಂಡರ್ ದರ್ಜೆಯ ಒಬ್ಬ ಅಧಿಕಾರಿಯಿಂದ ಪತ್ರ ಹಾಗೂ ದೂರವಾಣಿ ಕರೆ ಎರಡೂ ಬಂದವು. ಅನುಮತಿ ಕೊಟ್ಟಿದ್ದರು! ಧನ್ಯೋಸ್ಮಿ!

ಕನ್ನಡ ವಿಶ್ವಕೋಶಕ್ಕೆ ವಾಯುಪಡೆಯ ವಿಡಿಯೋಗಳು ದಕ್ಕಿದ್ದು ಹೀಗೆ! ಏರ್ ಮಾರ್ಷಲ್ರ ಮತ್ತು ನನ್ನ ಮಿತ್ರರ ಔದಾರ್ಯದಿಂದ! ವಿಶ್ವಕೋಶದಲ್ಲಿ ಆ ವಿಡಿಯೋಗಳಿವೆ. ಭಾರತಕ್ಕೆ ಪಾಕಿಸ್ತಾನ ಶರಣಾದ ದೃಶ್ಯಗಳು, ವಾಯುಪಡೆಯ ಯುದ್ಧವಿಮಾನಗಳ ಮೈನವಿರೇಳಿಸುವ ಹಾರಾಟ, ಸೂರ್ಯಕಿರಣ್ ವೈಭವ ಎಲ್ಲವೂ ವಿಶ್ವಕೋಶದಲ್ಲಿದೆ! ಆನಂತರ ಅವರಿಗೆ ಕೃತಜ್ಞತೆ ಸೂಚಿಸಿ ಬರೆದೆವು.

ನೀವು ದೆಹಲಿಗೆ ಹೋದರೆ ತಪ್ಪದೆ ವಾಯುಪಡೆಯ ಮ್ಯೂಸಿಯಮ್ಗೆ ಹೋಗಿ (ಏರ್ಪೋರ್ಟ್ ಸಮೀಪ – ಮಂಗಳವಾರ ರಜ). ಅಲ್ಲಿ ಸಾಲ್ಟ್ ಆಫ್ ದ ಅರ್ಥ್ ಮತ್ತು ಆಕಾಶ್ ಯೋದ್ಧ ಎಂಬ ಎರಡು ಸಿಡಿಗಳ ಜೊತೆ ಇನ್ನು ಅನೇಕ ಸಿಡಿಗಳಿವೆ (ಬೆಲೆ ಸುಮಾರು ಆರುನೂರು ರೂಪಾಯಿಯಿತ್ತು, ಆಗ). ತಂದು ಮಕ್ಕಳಿಗೆ ತೋರಿಸಿ. ಸೇನೆಯ ವೈಭವ ಮತ್ತು ಶೌರ್ಯವನ್ನು ಮಕ್ಕಳು ನೋಡಲಿ.

—————————-
#ವಿಶ್ವಕೋಶದ_ನೆನಪುಗಳು
ಕನ್ನಡ ವಿಶ್ವಕೋಶದ ಡಿವಿಡಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಲಭ್ಯ. ಬೆಲೆ ರೂ.ಐದುನೂರು.

ಮತ್ತಷ್ಟು ಸುದ್ದಿಗಳು

Latest News

ಇನ್ನು ಪ್ರತಿದಿನ ಬೆಡ್ ಲಭ್ಯತೆ ಬಗ್ಗೆ ಬುಲೆಟಿನ್ ಬಿಡುಗಡೆ: ಬಸವರಾಜ್ ಬೊಮ್ಮಾಯಿ

newsics.com ಬೆಂಗಳೂರು: ರಾಜ್ಯದಲ್ಲಿ ಲಭ್ಯವಿರುವ ಬೆಡ್'ಗಳ ಬಗ್ಗೆ ಪ್ರತಿದಿನ ಬುಲೆಟಿನ್ ಬಿಡುಗಡೆಗೊಳಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಬಿಬಿಎಂಪಿ ವ್ಯಾಪ್ತಿಯೂ ಸೇರಿದಂತೆ ರಾಜ್ಯದಾದ್ಯಂತ ಸರ್ಕಾರಿ ಮತ್ತು...

ಮಾರಾಟಕ್ಕಿಟ್ಟ ತರಕಾರಿ ಬುಟ್ಟಿ ಒದ್ದ ಪೊಲೀಸ್ ಅಧಿಕಾರಿ ಅಮಾನತು

newsics.com ಪಂಜಾಬ್: ಬೀದಿ ಬದಿಯಲ್ಲಿ ಮಾರಾಟ‌ಮಾಡುತ್ತಿದ್ದ ತರಕಾರಿ ಬುಟ್ಟಿಗಳನ್ನು ಕಾಲಿನಿಂದ ಒದ್ದುಹಾಕಿದ ಪೊಲೀಸ್ ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದಾರೆ. ಪಂಜಾಬ್ ನಗರದ ಸ್ಟೇಷನ್ ಅಧಿಕಾರಿ ನವದೀಪ್ ಸಿಂಗ್ ಅಮಾನತುಗೊಂಡ ಪೊಲೀಸ್ ಅಧಿಕಾರಿ. ಪಂಜಾಬ್ ನಲ್ಲಿಯೂ ಕೊರೋನಾ ಕರ್ಫ್ಯೂ ಜಾರಿಯಲ್ಲಿದ್ದು, ಅಗತ್ಯ...

ಮಹಾರಾಷ್ಟ್ರದಲ್ಲಿ ಒಂದೇ ದಿನ 920 ಜನ ಕೊರೋನಾಗೆ ಬಲಿ, 57,640 ಮಂದಿಗೆ ಸೋಂಕು

newsics.com ಮಹಾರಾಷ್ಟ್ರ:. ಮಹಾರಾಷ್ಟ್ರದಲ್ಲಿ ಮಾರಕ ಕೋರೋನಾಕ್ಕೆ ಇಂದು ಒಂದೇ ದಿನ 920ಮಂದಿ ಸಾವನ್ನಪ್ಪಿದ್ದು, 57,640 ಹೊಸ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 48,80,542 ಕ್ಕೆ ಏರಿಕೆ ಯಾಗಿದ್ದು 6,41,596 ಸಕ್ರಿಯ ಪ್ರಕರಣಗಳಿವೆ. ಈ ವರೆಗೆ...
- Advertisement -
error: Content is protected !!