Sunday, May 22, 2022

ಅಸಾಧ್ಯವೆಂಬುದು ಯಾವುದೂ ಇಲ್ಲ…

Follow Us

ವಿವೇಕ ಸ್ಪೂರ್ತಿವಾಣಿ

  • ಪ್ರಭಾ ಭಟ್ ಹೊಸ್ಮನೆ

ವನೊಬ್ಬ ಬಡ ಮತ್ತು ಅನಕ್ಷರಸ್ಥ ಬಾಲಕ. ಕಡು ಬಡತನ. ಅವನಿಗೋ ತಾನು ಬರಹಗಾರನಾಗಬೇಕೆಂಬ ಅದಮ್ಯ ಹಂಬಲ. ಆದರೇನು ಮಾಡುವುದು ಬರೆಯಲು ಅಕ್ಷರ ಜ್ಞಾನವೂ ಇಲ್ಲ, ಪದಗಳ ಬಳಕೆಯನ್ನು ತಿಳಿಯಲು ಪದಕೋಶವನ್ನು ಕೊಳ್ಳಲೂ ಹಣವಿಲ್ಲದ ಅಸಾಹಯಕ ಪರಿಸ್ಥಿತಿ. ಒಮ್ಮೆ ಎಣಿಸಿದ, ಬರವಣಿಗೆ ಎಂಬುದು ನನ್ನಿಂದ ಅಸಾಧ್ಯವಾದುದು ಎಂದು. ಅಂತೂ ಅವನ ಬಿಡದ ಛಲದಿಂದಾಗಿ, ಅಲ್ಪ ಸ್ವಲ್ಪ ಹಣವನ್ನು ದುಡಿದು ಗಳಿಸಿ-ಉಳಿಸಿ ಒಂದು ಪದಕೋಶವನ್ನು ಕೊಳ್ಳುವಂತಾಯಿತು. ಸ್ವಕಲಿಕೆಯಿಂದ ಪದಗಳ ಬಳಕೆಯನ್ನು ಕಲಿಯಲು ಆರಂಭಿಸಿದ ಬಾಲಕ ಮೊದಲು ಮಾಡಿದ ಕೆಲಸವೇನೆಂದು ತಿಳಿದರೆ ನೀವೇ ದಂಗಾಗುತ್ತೀರಿ. ಪದ ಕೋಶದಲ್ಲಿದ್ದ “impossible” ಪದವನ್ನೇ ಕತ್ತರಿಸಿ ಸೀದಾ ಅದನ್ನು ಕಸದಬುಟ್ಟಿಗೆ ಹಾಕಿದನಂತೆ. ಅಸಾಧ್ಯವೆಂಬುದು ಯಾವುದೂ ಇಲ್ಲ, ಏಕೆಂದರೆ ಅಸಾಧ್ಯ ಎಂಬ ಪದದಲ್ಲೇ “ಸಾಧ್ಯ” ಇದೆಯೆಂಬುದನ್ನರಿತ. ಅವನ ಪದಕೋಶದಲ್ಲಿಯೂ ಅಸಾಧ್ಯವೆಂಬುದನ್ನು ಅಳಿಸಿ ಹಾಕಿದ. ಆ ಬಾಲಕನೇ ಖ್ಯಾತ “ನೆಪೋಲಿಯನ್ ಹಿಲ್”.
“Have faith in yourselves, great convictions are the mothers of great deeds”
“ನಿಮ್ಮಲ್ಲಿ ಆತ್ಮವಿಶ್ವಾಸವಿರಲಿ. ಮಹತ್ವಪೂರ್ಣವಾದ ದೃಢನಂಬಿಕೆಗಳು ಎಲ್ಲ ಮಹಾಕಾರ್ಯಗಳಿಗೂ ಮೂಲ”
(ಕೃತಿ ಶ್ರೇಣಿ – ಸಂಪುಟ ೪, ಪುಟ ೧೦೮)
ಎಲ್ಲಾ ಕಾರ್ಯಗಳಿಗೂ ನಮ್ಮಲ್ಲಿರುವ ಆತ್ಮವಿಶ್ವಾಸವೇ ದಾರಿಯನ್ನು ತೋರಿಸುವಂತದ್ದು. ಆತ್ಮವಿಶ್ವಾಸ ಅಹಂಕಾರವಾಗದರಲಿ ಆಗ ತನ್ನಿಂದ ತಾನೇ ದಾರಿ ಸೃಷ್ಟಿಯಾಗುತ್ತದೆ. ವಿವೇಕಾನಂದರ ಈ ಸ್ಪೂರ್ತಿ ವಾಣಿ ಇಂದಿನ ಯುವಜನತೆಗೆ ಬಹಳ ಪ್ರಯೋಜನಕಾರಿಯಾದುದು. ಪ್ರೀತಿಯಲ್ಲಿನ ವೈಫಲ್ಯಕ್ಕೋ, ನಿರೀಕ್ಷಿತ ಫಲಿತಾಂಶ ಸಿಗಲಿಲ್ಲವೆಂದೋ, ಅಪೇಕ್ಷಿಸಿದ ಉದ್ಯೋಗ ಅಥವ ಉನ್ನತಿ ದೊರೆಯಲಿಲ್ಲವೆಂದೋ ಖಿನ್ನತೆಗೆ, ಆತ್ಮಹತ್ಯೆಗೆ ಶರಣಾಗುವ ಅದೆಷ್ಟೋ ಯುವಕರು ದುಡುಕುವ ಮೊದಲು ಒಮ್ಮೆ ನಿಮ್ಮ ಆತ್ಮವನ್ನು ಪ್ರಶ್ನಿಸಿ. ನೀನಷ್ಟು ಹೇಡಿಯೇ? ಅಷ್ಟು ಅಶಕ್ತನೇ? ಎಂಬುದಾಗಿ. ನಿಮ್ಮ ಆತ್ಮವೇ ಅದಕ್ಕೆ ಉತ್ತರಿಸುತ್ತದೆ. ಎಲ್ಲರಲ್ಲಿಯೂ ಒಂದಿಲ್ಲೊಂದು ಪ್ರತಿಭೆಯನ್ನು ಪ್ರಕೃತಿ ನಮಗೆ ಕೊಡುಗೆಯಾಗಿ ನೀಡಿರುತ್ತದೆ. ಆ ಪ್ರತಿಭೆಗೆ ಒಂದಿಷ್ಟು ಕಾಳಜಿಯನ್ನು ತೋರಿಸಿದರೆ ನಿಮ್ಮೊಳಗಿನ ಆತ್ಮವಿಶ್ವಾಸ ಜಾಗೃತಗೊಳ್ಳುತ್ತದೆ. ನಿಮ್ಮ ಭವಿಷ್ಯಕ್ಕೆ ನೀವೇ ಹೊಣೆ ಎಂಬ ಸತ್ಯವನ್ನು ಅರಿತರೆ ಸಾಕು ಉಳಿದೆಲ್ಲಾ ಕಾರ್ಯಗಳಿಗೂ ಅದುವೇ ಸ್ಪೂರ್ತಿ.
ಇನ್ನೂ ವಿಶಾಲಾರ್ಥದಲ್ಲಿ ವಿವೇಕಾನಂದರ ಈ ಮೇಲಿನ ವಾಣಿಯನ್ನು ಅರ್ಥೈಸಿಕೊಳ್ಳುವುದಾದರೆ “ನಾವು ಮತ್ತು ನಮ್ಮದು” ಎಂಬೆರಡೇ ಸ್ವಾರ್ಥದಿಂದ ಹೊರಗೆ ಬಂದು ನನ್ನ ಸಮಾಜಕ್ಕೂ ಮತ್ತು ನನ್ನ ಪರಿಸರಕ್ಕೂ ನನ್ನಿಂದಾದ ಕೊಡುಗೆಯನ್ನು ನೀಡಬೇಕೆಂದು ಪಣತೊಡಬೇಕಾದುದು ಇಂದಿನ ಯುವಕರೇ. ಈ ಪಣವೇ ಅದೆಷ್ಟೋ ಸಮಾಜಮುಖಿಯಾದ ಕಾರ್ಯಗಳಿಗೆ ನಾಂದಿಯಾಗಬಲ್ಲದು. ಒಬ್ಬರಿಂದ ಆರಂಭವಾಗುವ ಪಯಣ ಇನ್ನೊಂದು ದಿನ ಒಂದು ಸಂಘಟನೆಯನ್ನೇ ಸೃಷ್ಟಿಮಾಡಬಲ್ಲದು. ಸಮಾಜದಲ್ಲಿನ ಋಣಾತ್ಮಕತೆಯನ್ನು ಹೋಗಲಾಡಿಸಿ ಧನಾತ್ಮಕತೆಯನ್ನು ತರಲು ಸಾಧ್ಯ ಎಂಬ ದೃಢನಂಬಿಕೆಯೊಂದಿಗೆ ಮುನ್ನೆಡೆದಾಗ ಅದೆಂತಹ ಕಷ್ಟಕರ ಕಾರ್ಯಗಳೂ ಮಂಜಿನಂತೆ ಸುಲಭದಲ್ಲಿ ಕರಗಿಹೋಗಬಲ್ಲದು.
“You cannot believe in God until you believe in yourself”
ಎಂಬಂತೆ ನಿನ್ನಲ್ಲಿ ನೀನು ಮೊದಲು ನಂಬಿಕೆಯಿಡು ಆಗ ಆ ಅಮೂರ್ತ ಶಕ್ತಿಯೇ ನಿನಗೆ ಮಾರ್ಗವನ್ನು ಸೂಚಿಸುತ್ತದೆ.

ಮತ್ತಷ್ಟು ಸುದ್ದಿಗಳು

Latest News

ಕುತುಬ್ ಮಿನಾರ್ ಸಂಕೀರ್ಣ ಉತ್ಖನನ: ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಕೇಂದ್ರ ಸಚಿವ

newsics.com ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಉತ್ಖನನ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ.ಕೆ.ರೆಡ್ಡಿ ಹೇಳಿದ್ದಾರೆ. ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ...

ನನ್ನ ದೇಹದ ಖಾಸಗಿ ಭಾಗದಲ್ಲಿನ ಮಚ್ಚೆ ಬಗ್ಗೆ ಹೇಳಲಿ: ಲೈಂಗಿಕ ಕಿರುಕುಳ ಆರೋಪಕ್ಕೆ ಎಲಾನ್ ಮಸ್ಕ್ ಓಪನ್ ಚಾಲೆಂಜ್

newsics.com ನ್ಯೂಯಾರ್ಕ್: ಖಾಸಗಿ ಜೆಟ್‌ನಲ್ಲಿ ಫ್ಲೈಟ್ ಅಟೆಂಡೆಂಟ್ ಸ್ನೇಹಿತೆ ಎನ್ನಲಾದ ವ್ಯಕ್ತಿ ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಜಗತ್ತಿನ‌ ನಂಬರ್ ಒನ್ ಶ್ರೀಮಂತ ಬಿಲಿಯನೇರ್ ಎಲಾನ್‌ ಮಸ್ಕ್ ಅಲ್ಲಗಳೆದಿದ್ದಾರೆ. ಒಂದು ವೇಳೆ ಲೈಂಗಿಕ ಕಿರುಕುಳ‌ ನೀಡಿದ್ದೇನೆ...

ಪ್ರಿಯಕರನನ್ನೇ ಮದುವೆಯಾಗುವೆನೆಂದ ವಧು: ತಾಳಿ ಕಟ್ಟುವ ವೇಳೆ ಹೈಡ್ರಾಮಾ

newsics.com ಮೈಸೂರು: ಮದುವೆಯಲ್ಲಿ ತಾಳಿ ಕಟ್ಟುವ ವೇಳೆ ಮದುಮಗಳು ವರನಿಗೆ ಶಾಕ್ ಕೊಟ್ಟಿದ್ದು, ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಮದುಮಗಳು ಸಿಂಚನ ತನ್ನ ಪಕ್ಕದ ಮನೆಯ ಯುವಕನನ್ನು ಪ್ರೀತಿಸಿದ್ದು, ಆದರೆ ಮನೆಯವರು ಎಚ್.ಡಿ.ಕೋಟೆ...
- Advertisement -
error: Content is protected !!