Saturday, April 17, 2021

ಎಲ್ಲರ ಮನ ತಣಿಸಲಿ ಕವಿತೆ

ಇಂದು ವಿಶ್ವ ಕಾವ್ಯ ದಿನವನ್ನು ಆಚರಿಸಲಾಗುತ್ತಿದೆ. ಮನುಷ್ಯ ತನ್ನ ಜೀವನದ ಒಂದಿಲ್ಲೊಂದು ಹಂತದಲ್ಲಿ ಕವಿಯಾಗುತ್ತಾನೆ, ನಾಲ್ಕಾರು ಸಾಲುಗಳನ್ನು ಗೀಚಿರುತ್ತಾನೆ. ಅಷ್ಟರಮಟ್ಟಿಗೆ ಕವಿತೆ ಪ್ರತಿಯೊಬ್ಬರ ಬದುಕನ್ನು ಪ್ರಭಾವಿಸುತ್ತದೆ. ಕಾವ್ಯ ದಿನದ ಶುಭಾಶಯಗಳು…

    ವಿಶ್ವ ಕಾವ್ಯ ದಿನದ ಶುಭಾಶಯಗಳು…  


♦ ಸಮಾಹಿತ
newsics.com@gmail.com


 ನದ ಮಾತುಗಳಿಗೆ ಕಾವ್ಯಮಯವಾದ ಸಾಲುಗಳನ್ನು ನೀಡಿದ್ದು ಅದ್ಯಾವ ಮಾಯೆ? ದುಗುಡ, ತಲ್ಲಣ, ಅನುಭವಗಳನ್ನು ಕೆಲವೇ ಶಬ್ದಗಳ ಹಿಡಿತದಲ್ಲಿಡಲು ಸಾಧ್ಯವಾಗಿದ್ದು ಹೇಗೆ? ಮನುಷ್ಯನಿಗೆ ಕಾವ್ಯ ರಚಿಸಬೇಕೆನ್ನುವ ತುಡಿತ ಎಲ್ಲಿಂದ ಮೂಡಿತು? ಅಷ್ಟಕ್ಕೂ ಈ ಕವಿತೆ ಮೊಟ್ಟಮೊದಲು ಹುಟ್ಟಿದ್ದು ಎಲ್ಲಿ? ಹೇಗೆ? ಕನ್ನಡದ ಆದಿಕವಿ ಪಂಪನಾದರೂ ಅವನಿಗಿಂತ ಮೊದಲು ಕವಿತೆ ಇರಲಿಲ್ಲವೇ? ಗೊತ್ತಿಲ್ಲ…ಈ ಪ್ರಶ್ನೆಗಳಿಗೆ ಉತ್ತರವಿಲ್ಲ, ಉತ್ತರ ಹುಡುಕುವುದು ಸುಲಭವೂ ಇಲ್ಲ. ಒಟ್ಟಿನಲ್ಲಿ ಕವಿತೆ ಎನ್ನುವುದು ಮನುಷ್ಯನ ಬದುಕನ್ನು ಸುಂದರಗೊಳಿಸಿರುವುದು ಖರೆ.
ರಾಮಾಯಣ, ಮಹಾಭಾರತದಂಥ ಬೃಹತ್ ಇತಿಹಾಸವನ್ನೇ ಕಾವ್ಯದಲ್ಲಿಟ್ಟ ಜಾಣರು ನಮ್ಮವರು. ಜಗದ ಜಂಜಡಗಳನ್ನು ಕವಿತೆಯಲ್ಲಿಡಲು ಸಾಧ್ಯವಾಗಿದೆ. ಇಲ್ಲಿ, ನೋವಿದೆ, ನಲಿವಿದೆ, ಖುಷಿಯ ಅಲೆಗಳಿವೆ, ಅದಷ್ಟೇ ಏಕೆ? ನಮ್ಮೆದೆಯ ಭಾವಗಳೆಲ್ಲವೂ ಇವೆ, ಅವೆಲ್ಲ ಲಾಲಿತ್ಯಮಯ ಶಬ್ದಗಳಾಗಿ ಹೊಮ್ಮಿವೆ. ಎದೆಯ ಭಾರ ಕಡಿಮೆ ಮಾಡುವ ಸಾಧನಗಳಲ್ಲಿ ಕವಿತೆಯ ಪಾತ್ರವಂತೂ ಪ್ರಮುಖವಾಗಿದೆ.
ಕಾವ್ಯವೆಂಬ ಚೇತನ
ಮನುಷ್ಯನ ಬದುಕಿಗೆ ಕಾವ್ಯ ನೀಡುವ ಚೇತನ ಅಂತಿಂಥದ್ದಲ್ಲ. ಹಳೆಯ ಸಂಸ್ಕೃತ ಕಾವ್ಯಗಳಲ್ಲಿ ಚೈತನ್ಯದ ಹೊಳೆಯೇ ಹರಿದಿದೆ. ಹಳೆಗನ್ನಡ, ನಡುಗನ್ನಡ, ನವ್ಯ ಕಾವ್ಯಗಳೆಂದು ವಿಂಗಡಿಸಿದರೂ ಅವುಗಳ ಮೂಲಸತ್ವವೊಂದೇ ಆಗಿದೆ. ಮನುಷ್ಯನ ಬದುಕು ಬದಲಾಗುತ್ತ ಸಾಗಿದಂತೆ ಕವಿತೆಗಳ ನೋಟವೂ, ದಿಕ್ಕೂ ಬದಲಾಗಿದೆ. ಇಂದಿನ ಆಧುನಿಕ ಕಾವ್ಯಗಳಂತೂ ಮಾತುಗಳನ್ನೇ ಇಟ್ಟ ಹಾಗೆನಿಸಿದರೂ ಅಲ್ಲೊಂದು ಲಾಲಿತ್ಯವಿದ್ದೇ ಇದೆ.
ಇಂತಹ ಕಾವ್ಯಗಳನ್ನು ಇನ್ನಷ್ಟು ಆಪ್ತಗೊಳಿಸಲು ಇಂದು (ಮಾರ್ಚ್ 21) ವಿಶ್ವ ಕಾವ್ಯ ದಿನ ಆಚರಿಸಲಾಗುತ್ತಿದೆ. ಹೊಸ ತಲೆಮಾರಿನ ಜನರನ್ನು ಕವಿತೆಗಳತ್ತ, ಕಾವ್ಯಗಳತ್ತ ಮುಖ ಮಾಡುವುದೇ ಇದರ ಗುರಿ. ಆಧುನಿಕ ಬದುಕಿನ ತಲ್ಲಣಗಳಲ್ಲಿ ಕಳೆದುಹೋಗುವ ಮನುಷ್ಯನಿಗೆ ಸೌಂದರ್ಯದ, ನೆಮ್ಮದಿಯ ಬದುಕಿನ ಗುಟ್ಟುಗಳನ್ನು ಹೇಳುವ ಖಜಾನೆ ತೋರಿಸುವ ಪ್ರಯತ್ನವಿದು.
1999ರಿಂದ ವಿಶ್ವ ಕಾವ್ಯ ದಿನ ಆಚರಿಸಲಾಗುತ್ತಿದೆ. ಯುನೆಸ್ಕೋದಿಂದ ಆರಂಭವಾದ ಈ ಪರಿಪಾಠ ಇಂದು ವಿಶ್ವಮನ್ನಣೆ ಗಳಿಸಿದೆ. ಈ ಬಾರಿ, ಅಳಿವಿನಂಚಿನಲ್ಲಿರುವ ಭಾಷೆಗಳಲ್ಲಿ ಒಂದಾದರೂ ಕವಿತೆ ರಚಿಸುವಂತೆ ಯುನೆಸ್ಕೋ ಕೋರಿದೆ. ಅಂದರೆ, ಇದೊಂದು ಭಾಷೆಯನ್ನು ಉಳಿಸುವ ಯತ್ನವೂ ಹೌದು.
ಶಾಸ್ತ್ರೀಯವಾಗಿ, ಕಾವ್ಯ-ಕವಿತೆಗಳಲ್ಲಿ ಭೇದವಿದ್ದರೂ ನಮ್ಮಂಥ ಸಾಮಾನ್ಯರಿಗೆ ಆ ಗೊಡವೆ ಬೇಡ. ಯಾವುದಿಷ್ಟವೋ ಅವುಗಳನ್ನು ಆಸ್ವಾದಿಸುತ್ತ ಸಾಗೋಣ. ಮನುಷ್ಯನ ಬದುಕನ್ನು ಇನ್ನಷ್ಟು ಸುಂದರಗೊಳಿಸುವ, ರಮಣೀಯವನ್ನಾಗಿಸುವ, ಸತ್ಯದರ್ಶನ ಮಾಡಿಸುವ, ಬದುಕನ್ನು ಒಂದು ಹಂತ ಮೇಲಕ್ಕೇರಿಸುವ ಕವಿತೆಗಳಿಗೂ, ಕವಿಗಳಿಗೂ ನಮೋನ್ನಮಃ.

ಬಿಳಿ ಬಿಳಿ ಬೆಳ್ಳಕ್ಕಿ

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!