Sunday, December 5, 2021

ಎಲ್ಲೆಲ್ಲೂ ವೈರಾಣು ಮಾತು

Follow Us

♦ ವಿವೇಕಾನಂದ ಹೆಚ್.ಕೆ.
response@134.209.153.225
newsics.com@gmail.com

ವೈರಾಣುವಿನ ಸುತ್ತಲೇ ಸುತ್ತುತ್ತಿರುವ ನಮ್ಮ ಮನಸ್ಸು- ಆಲೋಚನೆಗಳು- ಬದುಕು…
ನಿಂತಲ್ಲಿ ಕುಳಿತಲ್ಲಿ ಮಲಗಿದಲ್ಲಿ ಮಾತಿನಲ್ಲಿ ಫೋನಿನಲ್ಲಿ ಟಿವಿಗಳಲ್ಲಿ ಪತ್ರಿಕೆಗಳಲ್ಲಿ ಆಡಳಿತದಲ್ಲಿ ವೈರಾಣುವಿನದೇ ಮಾತು….
ಇದು ಮುಗಿಯುವುದೆಂದು,
ಬದುಕಿನ ಮುಂದಿನ ಪಯಣ ಹೇಗೆ,
ಮಕ್ಕಳ ಭವಿಷ್ಯವೇನು…
ಬ್ರೇಕಿಂಗ್ ನ್ಯೂಸ್ ಗಳು ತಣ್ಣಗಾಗತೊಡಗಿವೆ…
ಸಾವುಗಳು ಸಹಜವಾಗುತ್ತಾ ಸಾಗುತ್ತಿದೆ…
ಸುದ್ದಿಗಳು ಸಾವಿನ ಸಂಖ್ಯೆಗಳನ್ನು ಎಣಿಸುತ್ತಿವೆ…
ಕೊರೋನಾದಿಂದ ಇಂತಿಷ್ಟು ಸಾವು, ಹಸಿವಿನಿಂದ ಮತ್ತಷ್ಟು, ಆತ್ಮಹತ್ಯೆಯಿಂದ ಇನ್ನಷ್ಟು…
ಪ್ರಳಯದ ಮುನ್ಸೂಚನೆ ಎಂಬ ಇಲ್ಲಸಲ್ಲದ ತಳಮಳ ಹಾಳು ಮನಸ್ಸುಗಳಲ್ಲಿ…
ಎತ್ತರದ ಸ್ಥಳದಿಂದ ನಿಂತು ನಗರದ ಕಡೆಗೊಮ್ಮೆ ದೃಷ್ಟಿ ಹಾಯಿಸಿದಾಗ ನಿಸ್ತೇಜಗೊಂಡು ಮಲಗಿರುವ ರೋಗಿಯಂತೆ ಕಂಡಿತು.
ಬಸವಳಿದು ನಲುಗಿದ ವೃದ್ದನಂತೆ ಕಾಣಿಸಿತು.
ಅನಾಥ ಮಗುವಿನ ಮುಖಭಾವ ನೆನಪಾಯಿತು…
ಕಾಲೇಜು ಪಾರ್ಕು ಹೋಟೆಲು ಥಿಯೇಟರ್ ಮಾಲುಗಳಲ್ಲಿ ಬಣ್ಣದ ಚಿಟ್ಟೆಗಳ ಪ್ರೀತಿಯ ಕಲರವ ಎಲ್ಲಿ ಹೋಯಿತು…
ಮದುವೆ ಸಂಭ್ರಮದ ಕನಸಿನಲ್ಲಿದ್ದ ಅನೇಕ ಯುವ ಜೋಡಿಗಳ ಮುಹೂರ್ತಗಳು ಮುಂದೆ ಮುಂದೆ ಹೋಗುತ್ತಲೇ ಇದೆ…
ರಸ್ತೆ ಬದಿಯಲ್ಲಿ ನಿಂತು ಸಂಜೆಯ ಇಳಿಗತ್ತಲಿನಲ್ಲಿ ಹರಟೆ ಹೊಡೆಯುತ್ತಾ ಪಾನಿಪೂರಿ ಬೇಲ್ ಪುರಿ ಗೋಬಿ ಮಂಚೂರಿ ಪಾವ್ ಬಾಜಿ ಕಬಾಬ್ ಮಸಾಲೆ ದೋಸೆ ತಿನ್ನುತ್ತಾ ಖುಷಿ ಪಡುತ್ತಿದ್ದ ಆ ದಿನಗಳು ಬರುವುದೆಂದು…
ಈಗಾಗಲೇ ನಷ್ಟದಲ್ಲಿದ್ದ ಕಾಫಿ ಡೇ ಇನ್ನು ಚೇತರಿಸಿಕೊಳ್ಳುವುದು ತುಂಬಾ ಕಷ್ಟವಿರಬೇಕು. ಅಲ್ಲಿನ ನೊರೆಭರಿತ ಕಾಫಿ ಸಮೋಸ ಇನ್ನು ಸಿಗುವುದಿಲ್ಲವೇ…
ಬೆಳಗ್ಗೆ ಸಂಜೆ ಕ್ರಿಕೆಟ್ ಆಡುತ್ತಾ, ಷಟಲ್ ಬೀಸುತ್ತಾ, ವಾಕ್ ಮಾಡಿತ್ತಾ, ಕ್ಲಬ್ ಗಳಲ್ಲಿ ತಣ್ಣನೆಯ ಬಿಯರ್ ಹೀರುತ್ತಿದ್ದ ಸಮಯ ಮತ್ತೆ ಎಷ್ಟು ಬೇಗ ಬರುತ್ತದೆ…
ನೆನಪಾದಾಗಲೆಲ್ಲ ಅಕ್ಜನ ಮನೆ, ತಂಗಿಯ ಮನೆ, ಅಣ್ಣನ ಮನೆ, ಗೆಳೆಯರ ಮನೆಗೆ ಹೋಗಿ ಸಮಯ ಕಳೆದು ಬರುತ್ತಿದ್ದೆವು. ಈಗ ದೂರವಾಣಿಯಲ್ಲಿ ಮಾತ್ರ. ಯಾಕೋ ಸಮಾಧಾನವೇ ಇಲ್ಲ…
ಛೆ ಛೆ ಸಮಾಧಾನ ಯಾಕಿಲ್ಲ,..ಇದೆ…
ಬಸ್ಸು ರೈಲು ನಿಲ್ದಾಣಗಳಲ್ಲಿ, ಫ್ಲೈ ಓವರ್ ಗಳ ಕೆಳಗೆ ಅನಾಥರಂತೆ ಮಲಗುತ್ತಿದ್ದ ಎಷ್ಟೋ ಜನರ ಬದುಕು ಈಗ ಹೇಗಿದೆಯೋ ಎಂದು ನೆನಪಾದರೆ…
ಡಯಾಲಿಸಿಸ್, ಕಿಮೋ ಥರಪಿ, ರೇಡಿಯೋ ಥೆರಪಿ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ದಿನನಿತ್ಯ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದ್ದವರು ನೆನಪಾದಾಗ…
ಮಗಳ ಮದುವೆಯ ಆಸೆಯಿಂದ,
ಮಗನ ವಿಧ್ಯಾಭ್ಯಾಸದ ಕನಸಿನಿಂದ,
ಸಾಲ ತೀರಿಸುವ ಭರವಸೆಯಿಂದ,
ತಾಯಿಯ ಹೃದಯ ಶಸ್ತ್ರಚಿಕಿತ್ಸೆಯ ಧಾವಂತದಿಂದ, ಬೆಳೆದ ಫಸಲು ಮಾರಾಟವಾಗದೇ ಪರಿತಪಿಸುತ್ತಿರುವ
ರೈತರು ನೆನಪಾದಾಗ…
ಬೀದಿ ಬದಿಗಳಲ್ಲಿ, ಸಂದಿಗೊಂದಿಗಳಲ್ಲಿ,
ತಳ್ಳು ಗಾಡಿಗಳಲ್ಲಿ ಸಿನಿಮಾ ಟೆಂಟುಗಳ ಬಳಿ ಬೀಡಿ ಸಿಗರೇಟು ಬಾಳೆ ಹಣ್ಣು ಕಾಫಿ ಟೀ ಮಾರುತ್ತಾ ಅಂದಿನ ಊಟಕ್ಕೆ ಅಂದೇ ಒಂದಷ್ಟು ಸಂಪಾದನೆ ಮಾಡಿ ಸಣ್ಣ ಗುಡಿಸಲುಗಳಲ್ಲಿ ಬದುಕುತ್ತಿದ್ದ ಜನ ನೆನಪಾದಾಗ…
ಇರಲಿ ಬಿಡಿ, ಬದುಕಿನ ಪಯಣದಲ್ಲಿ ಗಾಢ ಅನುಭವಗಳು ನಮ್ಮನ್ನು ಸಾರ್ಥಕತೆಯತ್ತ ಕೊಂಡೊಯ್ಯಲು ಇರುವ ಸಾಧನಗಳು ಎಂದೇ ಭಾವಿಸೋಣ.

ಮತ್ತಷ್ಟು ಸುದ್ದಿಗಳು

Latest News

ಮುಂಬೈ ಏರ್‌ಪೋರ್ಟ್‌ನಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡೀಸ್‌ಗೆ ತಡೆ

newsics.com ಮುಂಬೈ: ಖ್ಯಾತ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ದುಬೈಗೆ ಹೊರಟಿದ್ದ ಜಾಕ್ವೆಲಿನ್ ಫೆರ್ನಾಂಡೀಸ್ ಅವರನ್ನು ಲುಕೌಟ್ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ತಡೆಯಲಾಗಿದೆ....

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 29,52,708 ಜನ ಗುಣಮುಖರಾಗಿದ್ದಾರೆ. 6 ಜನ ಸೋಂಕಿತರು...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...
- Advertisement -
error: Content is protected !!