Sunday, December 5, 2021

ಯಾತನಾಮಯ ದಿನಗಳಿವು, ಮುಂದೇನು?

Follow Us

* ವಿವೇಕಾನಂದ ಹೆಚ್.ಕೆ.

ಮುಗಿದೇ ಹೋಯಿತು ಸುಮಾರು 25 ದಿನಗಳು…. ಕೆಲವರು ಮನೆಯಲ್ಲಿ ಬಂಧಿಗಳಾದರೆ ಹಲವರು ಬೀದಿ ಪಾಲಾಗಿ…

ಇಡೀ ಭಾರತ ಮುಚ್ಚಿದಾಗ ಕೊರೋನಾ ಸೋಂಕಿತರ ಸಂಖ್ಯೆ ಸುಮಾರು 500 ರ ಆಸುಪಾಸು, ಸಾವಿನ ಸಂಖ್ಯೆ ಸುಮಾರು 20.

ವಿಪರ್ಯಾಸವೆಂದರೆ, ಸೋಂಕಿತರ ಸಂಖ್ಯೆ 14000 ಮತ್ತು ಸಾವಿನ ಸಂಖ್ಯೆ 500 ಆಗಿ ಇನ್ನೂ ದಿನೇ ದಿನೇ ಹೆಚ್ಚಾಗುತ್ತಿರುವ ಸಮಯದಲ್ಲಿ ಲಾಕ್ ಡೌನ್ ‌ಸಡಿಲಿಕೆಯ ನಿಯಮಗಳು ಹಂತ ಹಂತವಾಗಿ ಜಾರಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಎಷ್ಟೊಂದು ವಿಚಿತ್ರವಲ್ಲವೇ.
ಕಾರಣಗಳು ಏನೇ ಇರಲಿ ಈಗ ಮುಂದಿನ ದಾರಿ ಏನು ?

ಎಷ್ಟು ದಿನ ಮನೆಗಳಲ್ಲಿ ಅಡಗಿ ಕುಳಿತುಕೊಳ್ಳುವುದು. ಮೇ 3 ರವರೆಗೆ ಹೇಗೋ ಸಹಿಸಬಹುದು ನಂತರ.

ಅಷ್ಟರೊಳಗೆ ಔಷಧ ಸಿದ್ಧವಾದರೆ ಓಕೆ ಇಲ್ಲದಿದ್ದರೆ…

ಯಾತನಾಮಯ ದಿನಗಳಿವು, ಎಲ್ಲರಿಗೂ ಗೊಂದಲವನ್ನು ಉಂಟು ಮಾಡುವ ಸಮಯವಿದು. ನಿರ್ದಿಷ್ಟವಾಗಿ ಹೀಗೆ ಎಂದು ಹೇಳಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಕೇವಲ ಊಹೆಗಳ ಆಧಾರದ ಮೇಲೆ ಮುಂದುವರಿಯ ಬೇಕಾಗಿದೆ.

ಸಾಮಾನ್ಯವಾಗಿ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಯಾವುದೇ ಸಮಸ್ಯೆಗಳಿಗು ಪರಿಹಾರ ರೂಪದ ಸೂತ್ರಗಳು ಬೇಗನೆ ಸಿದ್ದವಾಗುತ್ತಿದ್ದವು. ಆದರೆ ಈವರೆಗೆ 22 ಲಕ್ಷ ಜನ ಸೋಂಕಿತರಾಗಿ 1.5 ಲಕ್ಷ ಜನ ಸತ್ತ ನಂತರವೂ ಇಡೀ ವಿಶ್ವ ಅಸಹಾಯಕತೆಯಿಂದ ನೋಡುತ್ತಾ ಮತ್ತಷ್ಟು ಸಾವಿನ ಪ್ರಮಾಣದ ಲೆಕ್ಕಾಚಾರದಲ್ಲಿ ನಿರತವಾಗಿರುವ ದುರಂತ ಕ್ಷಣಗಳಿಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ.

ಕೇವಲ 30 ದಿನಗಳ ಹಿಂದೆ ಯಾರೂ ಊಹಿಸದ ಆಘಾತ ಈಗ ಬೃಹದಾಕಾರವಾಗಿ ಬೆಳೆಯುತ್ತಾ ಮಾನವ ಜನಾಂಗದ ಮಿತಿಗಳನ್ನು ಅರ್ಥಮಾಡಿಸುತ್ತಾ ‌ಬಹುದೊಡ್ಡ ಸವಾಲು ಎಸೆದಿದೆ.

ಭಾರತದಲ್ಲಿ ಒಂದು ದಿನಕ್ಕೆ ಸಭೆ ಸಮಾರಂಭ ಹೋಟೆಲ್‌ಗಳು ಸೇರಿ ಎಷ್ಟೋ ಟನ್ ಆಹಾರವನ್ನು ವ್ಯರ್ಥವಾಗಿ ಕಸದ ಬುಟ್ಟಿಗೆ ಚೆಲ್ಲಲಾಗುತ್ತಿತ್ತು. ಈಗ ಎಷ್ಟೋ ಕಡೆ ಒಂದು ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದೇವೆ.

ಎಷ್ಟೋ ವರ್ಷಗಳಿಂದ ಒಮ್ಮೆಗೆ ಒಂದು ವಾರ ರಜಾ ದಿನಗಳನ್ನು ಕಳೆಯಲು‌ ಸಾಧ್ಯವಾಗಿರಲಿಲ್ಲ. ಈಗ ಇನ್ನೆಷ್ಟು ದಿನ ರಜಾ ಎಂದು ಬೇಸರಗೊಳ್ಳುವ ಮನಸ್ಥಿತಿ ತಲುಪಿದ್ದೇವೆ.

ಮನುಷ್ಯನ ಇಡೀ ದೇಹವನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡುವ, ರೊಬೋಟ್ ಗಳೇ ಕಠಿಣ ಶಸ್ತ್ರ ಚಿಕಿತ್ಸೆ ಮಾಡುವ ಹಂತ ದಾಟುತ್ತಿರುವಾಗ ಇದ್ಯಾವುದೋ ಸಣ್ಣ ಕಣ ಗಹಗಹಿಸಿ ನಗುತ್ತಿದೆ.

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...

ಜೈಪುರದಲ್ಲೂ 9 ಒಮೈಕ್ರಾನ್ ಪ್ರಕರಣ ಪತ್ತೆ

newsics.com ಜೈಪುರ: ಮಹಾರಾಷ್ಟ್ರದ ಬಳಿಕ ಇದೀಗ ಜೈಪುರದಲ್ಲೂ 9 ಒಮೈಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಒಂದೇ ಕುಟುಂಬದವರಲ್ಲಿ ಸೋಂಕು ಪತ್ತೆಯಾಗಿದ್ದು, ಇವರು ದಕ್ಷಿಣ ಆಫ್ರಿಕಾದಿಂದ ಬಂದವರು ಎಂದು ತಿಳಿದುಬಂದಿದೆ. ಮುಂಬೈನಲ್ಲಿ ಇಂದು ಒಂದೇ ದಿನ 7 ಜನರಿಗೆ...
- Advertisement -
error: Content is protected !!