Saturday, November 27, 2021

ವಿಚಿತ್ರ ನಡವಳಿಕೆ ತೋರಿದ ಟ್ರಂಪ್

Follow Us

ಅಮೆರಿಕ ತುಂಬಾ ಒತ್ತಡದಲ್ಲಿದೆ ನಿಜ. ಹಾಗೆಂದು ಇದು ಬೀದಿ ಬದಿಯ ವ್ಯವಹಾರವಲ್ಲ. ವೇಗವಾಗಿ ಆಗಬೇಕು. ಆದರೆ ಪ್ರೋಟೋಕಾಲ್ ಸಹ ಪಾಲನೆಯಾಗಬೇಕು.

♦ ವಿವೇಕಾನಂದ ಹೆಚ್.ಕೆ.
response@134.209.153.225
newsics.com@gmail.com

ಭಾರತ Hydroxychloroquine ಔಷಧವನ್ನು ಅಮೆರಿಕ ದೇಶಕ್ಕೆ ರಫ್ತು ಮಾಡುವ ನಿಷೇಧ ತೆರವುಗೊಳಿಸದಿದ್ದರೆ ಅಮೆರಿಕ ಪ್ರತೀಕಾರ ಕ್ರಮ ( Retaliation ) ಕೈಗೊಳ್ಳಲಿದೆ.”
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ.
ಕೇವಲ 45 ದಿನಗಳ ಹಿಂದೆ ಭಾರತದ ಆತಿಥ್ಯವನ್ನು ಸ್ವೀಕರಿಸಿ ಹಾಡಿ ಹೊಗಳಿದವರು ಈಗ ಕಷ್ಟದ ಪರಿಸ್ಥಿತಿಯಲ್ಲಿ ವಿವೇಚನೆ ಬಳಸದೆ ಒಂದು ಔಷಧಕ್ಕಾಗಿ ಇನ್ನೂ ತೀರ್ಮಾನದ ಹಂತದಲ್ಲಿರುವಾಗಲೇ ಇಷ್ಟೊಂದು ಆಕ್ರೋಶದ ಅಭಿಪ್ರಾಯ ವ್ಯಕ್ತಪಡಿಸಿದರೆ ಅದನ್ನು ಹೇಗೆ ಸ್ವೀಕರಿಸಬೇಕು. ಅವರ ಮಾನಸಿಕ ದೃಢತೆಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು.
ಹೌದು, ಅಮೆರಿಕ ದೇಶವನ್ನು ಕೊರೋನಾ ವೈರಸ್ ತುಂಬಾ ಕಾಡುತ್ತಿದೆ. ಈ ಕ್ಷಣದಲ್ಲಿ ಭಾರತಕ್ಕಿಂತ ಅಮೆರಿಕ ಸಾಕಷ್ಟು ತೊಂದರೆಯಲ್ಲಿದೆ. ಭಾರತದ ಕೆಲವು ಸಂಕಷ್ಟದ ಸಮಯದಲ್ಲಿ ಒಂದಷ್ಟು ಸಹಾಯ ಸಹ ಮಾಡಿದೆ. ಈಗ ಅದಕ್ಕೆ ಅವಶ್ಯಕತೆ ಇರುವ ಔಷಧ ಭಾರತದ ಬಳಿ ಇದೆ. ಆದರೆ ಭಾರತ ಸರ್ಕಾರ ರಫ್ತು ನಿಷೇಧ ಕಾನೂನು ಹೊರಡಿಸಿದೆ ಮತ್ತು ಇಲ್ಲಿ ಅದರ ದಾಸ್ತಾನು ಮತ್ತು ಅವಶ್ಯಕತೆಯನ್ನು ಪರಿಶೀಲಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅಂತಹ ಕಠಿಣ ಮಾತಿನ ಅವಶ್ಯಕತೆ ಇದೆಯೇ?
ಇಲ್ಲಿ ಒಂದು ಅಂಶ ಗಮನಿಸಬೇಕು. ಭಾರತ ಎಂದರೆ ಮೋದಿ, ಅಮೆರಿಕ ಎಂದರೆ ಡೊನಾಲ್ಡ್ ಟ್ರಂಪ್ ಅಲ್ಲ. ಇವೆರಡೂ ಪ್ರಜಾಪ್ರಭುತ್ವ ದೇಶಗಳು. ಅನೇಕ ಅಧಿಕಾರಿಗಳು, ರಾಜತಾಂತ್ರಿಕರು, ಮಂತ್ರಿಗಳು ಎಲ್ಲರೂ ಇರುತ್ತಾರೆ. ಈ ರೀತಿಯ ವಿಷಯಗಳು ವಿವಿಧ ಹಂತಗಳಲ್ಲಿ ಚರ್ಚೆ ಅಥವಾ ಮಾತುಕತೆಯಾಗಬೇಕು.
ಸಾಮಾನ್ಯವಾಗಿ ಅಲ್ಲಿಯೇ ವಿವಾದ ಪರಿಹಾರವಾಗುತ್ತದೆ. ತೀರಾ ಅತಿರೇಕಕ್ಕೆ ಹೋದಾಗ ಪ್ರಧಾನಿ ಮತ್ತು ಅಧ್ಯಕ್ಷರ ನಡುವೆ ಮಾತುಕತೆಯಾಗುತ್ತದೆ. ಒಂದು ವೇಳೆ ಅಲ್ಲಿಯೂ ವಿಫಲವಾದರೆ ಆಗ ಅಸಹನೆ ಸೇಡು ಪ್ರತೀಕಾರದ ಮಾತಾಡಿದರೆ ಅದಕ್ಕೆ ಒಂದು ಅರ್ಥ ಇರುತ್ತದೆ.
ಇನ್ನೂ ಸರಿಯಾದ ಮಾಹಿತಿಯೇ ವಿನಿಮಯವಾಗಿಲ್ಲ. ಭಾರತದ ಬಳಿ ಇರುವ ಔಷಧಿಯ ಸಂಗ್ರಹ, ಇಲ್ಲಿನ ಭವಿಷ್ಯದ ಅವಶ್ಯಕತೆ, ಅಮೆರಿಕ ದೇಶಕ್ಕೆ ರಪ್ತು ಮಾಡುವ ಸಾಧ್ಯತೆ, ಎಷ್ಟು ಪ್ರಮಾಣ ಮತ್ತು ಎಷ್ಟು ಸಮಯದಲ್ಲಿ ಅಥವಾ ಇಲ್ಲಿ ಇನ್ನಷ್ಟು ತ್ವರಿತವಾಗಿ ಅದನ್ನು ತಯಾರಿಸಬೇಕೆ ಅಥವಾ ಅಲ್ಲಿಯೇ ತಯಾರಿಸಲು ತಂತ್ರಜ್ಞಾನ ಮತ್ತು ಕಚ್ಚಾವಸ್ತುಗಳನ್ನು ಪೂರೈಸಬೇಕೆ ಹೀಗೆ ಹಲವು ಆಯಾಮಗಳು ಇನ್ನೂ ಮುಕ್ತವಾಗಿದೆ.
ಅಮೆರಿಕ ತುಂಬಾ ಒತ್ತಡದಲ್ಲಿದೆ ನಿಜ. ಹಾಗೆಂದು ಇದು ಬೀದಿ ಬದಿಯ ವ್ಯವಹಾರವಲ್ಲ. ವೇಗವಾಗಿ ಆಗಬೇಕು ಆದರೆ ಕೆಲವು ಪ್ರೋಟೋಕಾಲ್ ಸಹ ಪಾಲನೆಯಾಗಬೇಕು. ಅಲ್ಲದೆ ಈಗಾಗಲೇ ಇಂತಹ ಸನ್ನಿವೇಶದಲ್ಲಿ ಕೈಗೊಳ್ಳಬೇಕಾದ ನೀತಿ ನಿಯಮಗಳನ್ನು ಸಹ ಸ್ಪಷ್ಟವಾಗಿ ರೂಪಿಸಲಾಗಿದೆ.
ಈಗ ಭಾರತ ರಪ್ತು ನಿಷೇಧ ಷರತ್ತಿಗೊಳಪಡಿಸಿ ತೆರವುಗೊಳಿಸಿದೆ. ಇದಕ್ಕಾಗಿ ಮೋದಿ ಅವರನ್ನು ಟ್ರಂಪ್ ಹೊಗಳಿದ್ದೂ ಆಗಿದೆ. ಅದು ಮುಖ್ಯವಲ್ಲ. ಆದರೆ ಕಷ್ಟದ ಸಮಯದಲ್ಲಿ ಅಧಿಕಾರದಲ್ಲಿ ಇರುವ ಮುಖ್ಯಸ್ಥರು ಯಾವುದೋ ಬೀದಿ ಜಗಳದಂತೆ ಮಾನಸಿಕ ನಿಯಂತ್ರಣ ಕಳೆದುಕೊಂಡು ಉದ್ರೇಕಕಾರಿಯಾಗಿ ಮಾತನಾಡಬಾರದು ಅಥವಾ ವರ್ತಿಸಬಾರದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.
ಕೇವಲ ದೇಶಗಳ ವಿಷಯದಲ್ಲಿ ಮಾತ್ರವಲ್ಲ ನಮ್ಮೆಲ್ಲರ ವೈಯಕ್ತಿಕ ಬದುಕಿಗೂ ಇದು ಒಂದು ಪಾಠ.
ಸಾಮಾನ್ಯ ಪರಿಸ್ಥಿತಿಯಲ್ಲಿ ಹಣ, ವಸ್ತು ಮುಂತಾದ ವ್ಯವಹಾರ ಸಹಜವಾಗಿರುತ್ತದೆ. ಆದರೆ ಅದೇ ವ್ಯವಹಾರದ ಲಕ್ಷಣಗಳನ್ನು ಒತ್ತಡ ಅಥವಾ ಕಷ್ಟದ ಪರಿಸ್ಥಿತಿಯಲ್ಲಿ ನಿರೀಕ್ಷಿಸಬಾರದು. ಬೇಗ ಇದನ್ನು ಅರ್ಥಮಾಡಿಕೊಳ್ಳಬೇಕು. ಎರಡೂ ಕಡೆ ಸಂಪನ್ಮೂಲಗಳ ಕೊರತೆ ಉಂಟಾಗಬಹುದು ಅಥವಾ ಅತಿಯಾದ ಎಚ್ಚರಿಕೆಯಿಂದ ಖರ್ಚು ಮಾಡಬೇಕಾಗಬಹುದು. ಆಗಲೇ ನಮ್ಮ ನಿಜವಾದ ತಾಳ್ಮೆ ಜಾಣ್ಮೆ ಮಾನವೀಯತೆ ಅಗ್ನಿ ಪರೀಕ್ಷೆಗೆ ಒಳಗಾಗುತ್ತದೆ.
ಇತ್ತೀಚಿನವರೆಗೂ ನಮ್ಮ ನಡುವೆ ಹಣದ ವ್ಯವಹಾರ ಸಾಮಾನ್ಯವಾಗಿತ್ತು. ಆದರೆ ‌ಈ ಲಾಕ್ ಡೌನ್ ‌ಸಮಯದಲ್ಲಿ ಅದು ಅಷ್ಟೊಂದು ಸಹಜವಾಗಿರುವುದಿಲ್ಲ. ಕಾರಣ ಇಡೀ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆ ನಮ್ಮ ಮೇಲೆ ಪರಿಣಾಮ ಬೀರುತ್ತದೆ.
ವ್ಯಾಪಾರಿ ಮನೋಭಾವದ, ಆಕ್ರಮಣಕಾರಿ ಪ್ರವೃತ್ತಿಯ ಜನ ಬಹುಬೇಗ ತಾಳ್ಮೆ ಕಳೆದುಕೊಳ್ಳುತ್ತಾರೆ. ಸಮಸ್ಯೆಗಳ ಪರಿಹಾರಕ್ಕೆ ಇರುವ ಪರ್ಯಾಯಗಳನ್ನು ಯೋಚಿಸುವುದಿಲ್ಲ. ಸ್ವಲ್ಪ ಮಟ್ಟಿನ ದುರಹಂಕಾರವೂ ಜತೆಯಾಗುತ್ತದೆ. ಆಗ ಹಿಂದಿನ ಆತ್ಮೀಯ ಕ್ಷಣಗಳನ್ನು ಸಹ ಮರೆಯುತ್ತಾರೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳು ವೇದಿಕೆ ಒದಗಿಸುತ್ತದೆ. ದಿಢೀರ್ ಉದ್ಬವವಾಗುವ ಮಾನಸಿಕ ಒತ್ತಡವನ್ನು ಸ್ವಲ್ಪವೂ ಯೋಚಿಸದೆ ಟ್ವೀಟ್ ಮಾಡುವುದು. ಸೌಹಾರ್ದ ವಾತಾವರಣವನ್ನು ಹಾಳು ಮಾಡುವುದು ತರವಲ್ಲ.

ಮತ್ತಷ್ಟು ಸುದ್ದಿಗಳು

Latest News

ರೈತರ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್: ರಾಜ್ಯದ ಚಿಂತನೆ

newsics.com ಬೆಂಗಳೂರು: ಜಲ ಮೂಲಗಳಿಂದ ಸಾಕಷ್ಟು ವಿದ್ಯುತ್ ಲಭಿಸದ ಕಾರಣ ಸೌರ ವಿದ್ಯುತ್ ಘಟಕಗಳಿಂದ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ....

ನಕ್ಸಲ್ ಮುಖಂಡ ಮಡ್ವಿ ಭೀಮಾ ಎನ್ ಕೌಂಟರ್

newsics.com ರಾಯ್ ಪುರ: ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಡ್ವಿ ಭೀಮಾ , ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.  ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವು ಪ್ರಕರಣಗಳಲ್ಲಿ ಭೀಮಾ ಆರೋಪಿಯಾಗಿದ್ದ ಎಂದು ಪೊಲೀಸರು...

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ ಮಾಡಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾಕ್ಕೆ ಹಲವು...
- Advertisement -
error: Content is protected !!