Saturday, November 27, 2021

ಪರಿಣತಿ ಸರಳತೆ ಮತ್ತು ದಕ್ಷತೆಯ ದರ್ಶನ!

Follow Us

ವಿಶ್ವಕೋಶ ರಸಯಾತ್ರೆ – 12

♦ ನವೀನ್ ಕಲ್ಗುಂಡಿ
newsics.com@gmail.com
ksn.bird@gmail.com

ವಿಶ್ವಕೋಶದ ಕಾರ್ಯ ಸಾಗುತ್ತಿದ್ದಾಗ ಕ್ಷಣ ಕ್ಷಣಕ್ಕೂ ಪರಿಣತಿಯ ದರ್ಶನವಾಗುತ್ತಿತ್ತು. ಹಿರಿಯ ಪ್ರಾಧ್ಯಾಪಕರುಗಳು ತಜ್ಞರ ಪರಿಣತಿಯ ದರ್ಶನ ಒಂದೆಡೆಯಾದರೆ ಅವರ ಸರಳತೆ ಮತ್ತು ಮೌಲ್ಯಾಧಾರಿತ ನಡವಳಿಕೆ ಮತ್ತೊಂದೆಡೆ!
ಭೌತವಿಜ್ಞಾನದ ಲೇಖನಗಳ ಪರಿಷ್ಕರಣ ಕಾರ್ಯವನ್ನು ಪ್ರೊ ಎಚ್.ಆರ್. ರಾಮಕೃಷ್ಣರಾವ್ ತೆಗೆದುಕೊಂಡಿದ್ದರು. ಎಲ್ಲವೂ ಪರಿಷ್ಕಾರವಾಗಿ ಸರಿಯಾದ ಸಮಯಕ್ಕೆ ಬಂದಿತು. ಅವನ್ನು ಓದಿದ ನನಗೆ ಆಶ್ಚರ್ಯ, ಪುಳಕ ಎಲ್ಲವೂ ಒಟ್ಟೊಟ್ಟಿಗೆ! ಸುಮಾರು ಮುವ್ವತ್ತು ವರ್ಷಗಳ ಅವಧಿಯಲ್ಲಿ ಬರೆದಿದ್ದ ಲೇಖನಗಳು ಅವು. ಎಚ್ ಆರ್ ಆರ್ ಒಂದು ವಾಕ್ಯದಲ್ಲಿ ಒಂದು ಪದವನ್ನು ಹೊಡೆದುಹಾಕಿ, ಮತ್ತೊಂದು ಪದವನ್ನು ತಿದ್ದುತ್ತಾರೆ, ಅಗೋ ಆ ಲೇಖನ ಮುವ್ವತ್ತು ವರ್ಷ ಮುಂದೋಡಿ ಈ ಕಾಲದ ಭೌತವಿಜ್ಞಾನವಾಗಿ ಕೂತು ಬಿಡುತ್ತದೆ. ಇದನ್ನೇ ಅಲ್ಲವೆ ಪರಿಣತಿ ಎನ್ನುವುದು! ಇದರ ಮುಂದೆ ಬೇರೇನು! ಅವರಿಗೆ ವಂದನೆಗಳು!
ಜೀವ ವಿಜ್ಞಾನದ ಕೆಲವು ವಿಷಯಗಳಲ್ಲಿ ಕೆಲವಕ್ಕೆ ವಿಡಿಯೊಗಳು, ಚಿತ್ರಗಳು ಬೇಕಾಗಿದ್ದವು. ಮತ್ತು ಕೆಲವು ಹೊಸ ಲೇಖನಗಳು ಬೇಕಿದ್ದವು. ಇದಕ್ಕಾಗಿ ಹಲವಾರು ಪ್ರಯತ್ನಗಳು ನಡೆದಿದ್ದವು. ಹಿರಿಯ ವಿಜ್ಞಾನಿಗಳಾದ ಪ್ರೊ. ರಾಘವೇಂದ್ರ ಗದಗಕರ್ ಅವರ ಅಪಾಯಿಂಟ್‍ಮೆಂಟ್ ಬೇಕೆಂದು ಮನವಿ ಮಾಡಿದ್ದೆ.. ಅವರು ಭಾರತೀಯ ವಿಜ್ಞಾನ ಸಂಸ್ಥೆಯ ಜೀವಪರಿಸ್ಥಿತಿ ವಿಜ್ಞಾನ ಕೇಂದ್ರದಲ್ಲಿದ್ದರು. ಅವರ ಕಾರ್ಯವೇ ಒಂದು ವಿಶ್ವಕೋಶಕ್ಕೆ ಸಾಕಾಗುವಷ್ಟಿದೆ! ಬರಹೇಳಿದರು. ಹೋದೆ. ಡೆಮೋ ಆವೃತ್ತಿ ತೋರಿಸಿ ನನಗೆ ಏನೇನು ಬೇಕೆಂದು ಹೇಳಿದೆ. ಅವರು ನನಗೆ ಕೊಡುತ್ತಿದ್ದ ಲಕ್ಷ್ಯಕ್ಕೆ ನನಗೇ ಸಂಕೋಚವಾಗುತ್ತಿತ್ತು. ಅವರ ವಿದ್ಯಾರ್ಥಿಯನ್ನು ಕರೆದು ನನಗೆ ಬೇಕಾದ ಮಾಹಿತಿ ಕೊಡಲು ತಿಳಿಸಿದರು. ಕೆಲವು ವಿಚಾರಗಳನ್ನು ಅವರೇ ಹೇಳತೊಡಗಿದರು, ನಾನು ನೋಟ್ ಮಾಡಿಕೊಳ್ಳತೊಡಗಿದೆ. ಹ್ಞಾ ಇಲ್ಲಿ ನಾನು ಒಂದು ವಿಚಾರ ಹೇಳಲೇಬೇಕು. ನಾನು ಅವರ ಕಚೇರಿಯ ಒಳಗೆ ಬಂದು ಅವರಿಗೆ ನಮಸ್ಕರಿಸಿ ಕೂತ ಕೂಡಲೆ ಅವರ ಸಹಾಯಕರು ಬಂದು ಅವರನ್ನು ನೋಡಲು ಮತ್ತೊಬ್ಬರು ಬಂದಿದ್ದಾರೆಂದು ತಿಳಿಸಿದರು. ಪ್ರೊ ಗದಗಕರ್ ಅವರು ಇವರು ಅಪಾಯಿಂಟ್‍ಮೆಂಟ್ ತೊಗೊಂಡಿದ್ದಾರೆ. …..ಬರುವುದು ನನಗೆ ಗೊತ್ತಿರಲಿಲ್ಲ. ಇವರದ್ದು ಮುಗಿಯಲಿ ಎಂದು ಹೇಳಿ ಕಳಿಸಿಬಿಟ್ಟರು! ಇಲ್ಲಿ ನಮಗೆ ಪಾಠವಿದೆಯಲ್ಲವೆ? ಅವರ ವಿದ್ಯಾರ್ಥಿ ಡಾ ಟ್ರೇಸಿಯಮ್ಮ ನನಗೆ ವಿಡಿಯೋಗಳನ್ನು ಒದಗಿಸಿದರು. ಪ್ರೊ. ಗದಕಗರ್ ಹೇಳಿದ್ದರಿಂದ ಪ್ರೊ. ರೋಹಿಣಿಯವರು ಜೀರುಂಡೆಗಳ ಸದ್ದನ್ನು ನಮಗೆ ನೀಡಿದರು. ವಿಶ್ವಕೋಶಕ್ಕೆ ಇಂತಹ ಅಪರೂಪದ ವಿಷಯ ಸಿಕ್ಕಿದ್ದು ಹೀಗೇ. ನಮೋನಮಃ
ಇನ್ನು ಪ್ರೊ ಎಂ ಆರ್ ಎನ್ ಮೂರ್ತಿ ಇವರು ಮಾಲಿಕ್ಯುಲಾರ್ ಬಯೋಫಿಸಿಕ್ಸ್ ವಿಭಾಗದ ಪ್ರಾಧ್ಯಾಪಕರಾಗಿದ್ದರು (ಭಾರತೀಯ ವಿಜ್ಞಾನ ಸಂಸ್ಥೆಯಲ್ಲೇ). ಇವರನ್ನು ಭೇಟಿ ಮಾಡಿದೆ. ಇವರು ಬರೆದೂ ಕೊಟ್ಟರು, ಪರಿಷ್ಕಾರವನ್ನೂ ಮಾಡಿಕೊಟ್ಟರು. ಮುಖ್ಯವಾಗಿ ಬಹಳ ಒಳ್ಳೆಯ ಸಲಹೆಗಳನ್ನು ಕೊಟ್ಟರು. ಈ ಎಲ್ಲದರ ಒಳ್ಳೆಯ ಭಾಗ ವಿಶ್ವಕೋಶದಲ್ಲಿ ಕಂಗೊಳಿಸುತ್ತಿದೆ!
ನಮ್ಮ ಬದುಕು ಋಣದ ಗಣಿಯಲ್ಲವೇ!

ಮತ್ತಷ್ಟು ಸುದ್ದಿಗಳು

Latest News

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ...

ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಎಸ್ಐ ಅಮಾನತು

newsics.com ವಾರಂಗಲ್(ಆಂಧ್ರಪ್ರದೇಶ): ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪದ ಮೇಲೆ ಪೊಲೀಸ್ ಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವಾರಂಗಲ್‌ನ ‍ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಕ್ ಶಾಪಿ ಅಮಾನತುಗೊಂಡಿರುವ ಪೊಲೀಸ್ ಅಧಿಕಟರಿ. ನವೆಂಬರ್ 18ರಂದು ವಿವಾಹಿತೆಯ...

ಗುದದ್ವಾರಕ್ಕೆ ಏರ್ ಪಂಪ್: ಸ್ನೇಹಿತ ಸಾವು

newsics.com ಬೆಂಗಳೂರು: ತಮಾಷೆಗೆ ಸ್ನೇಹಿತನ ಗುದದ್ವಾರಕ್ಕೆ ಏರ್ ಪಂಪ್ ಮಾಡಿದ್ದು, ಆತ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಮತ್ ಅಲಿ ಮೃತಪಟ್ಟ ವ್ಯಕ್ತಿ. ನವೆಂಬರ್ 16ರಂದು ಕೋಲ್ಕತ್ತಾದ ಗಿರಣಿಯಲ್ಲಿ ರಾತ್ರಿ...
- Advertisement -
error: Content is protected !!