Thursday, December 9, 2021

ಅಮೆರಿಕವೇ, ನನ್ನ ಮಗಳನ್ನು ಕಾಪಾಡು…

Follow Us

ಬಹಳ ಇಷ್ಟಪಟ್ಟು ಮಗಳನ್ನು ಅಮೆರಿಕಕ್ಕೆ ಕಳಿಸಿದ್ದು ಸುಳ್ಳೇ ಸುಳ್ಳು ಎನ್ನುವಂತೆ ಅನೇಕ ಪಾಲಕರು ಈಗ ಮರುಗುತ್ತಿದ್ದಾರೆ. ಮಕ್ಕಳು ಇನ್ನೊಮ್ಮೆ ನೋಡಲು ಸಿಗುತ್ತಾರೆಯೋ ಇಲ್ಲವೋ ಎನ್ನುವ ಆತಂಕದೊಂದಿಗೆ ದಿನ ಕಳೆಯುತ್ತಿದ್ದಾರೆ.
♦ ಸುಮನಾ ಲಕ್ಷ್ಮೀಶ
response@134.209.153.225
newsics.com@gmail.com

ಅಮೆರಿಕ… ಭಾರತೀಯರ ಕನಸು. ಬೆಂಗಳೂರಿನಂಥ ನಗರದಲ್ಲಿ ತಲೆಮಾರುಗಳಿಂದ ನೆಲೆನಿಂತವರ ಮಕ್ಕಳೆಲ್ಲ ಇಂದು ನೆಲೆಯೂರಿರುವುದು ಅಮೆರಿಕದಲ್ಲೇ. ಅಣ್ಣನ ಮಕ್ಕಳು, ಭಾವಂದಿರ ಮಕ್ಕಳೆಲ್ಲ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ ಎನ್ನುವ ಕಾರಣಕ್ಕೇ ತಮ್ಮ ಮಕ್ಕಳನ್ನೂ ಅಲ್ಲಿಗೆ ಕಳಿಸಿರುವ ಪಾಲಕರ ಸಂಖ್ಯೆ ಹೆಚ್ಚಿದೆ. ಆದರೆ, ಈಗ ಅವರಷ್ಟು ಒತ್ತಡದಲ್ಲಿ ಇರುವವರು ಯಾರೂ ಇಲ್ಲ.
“ಇಷ್ಟು ದಿನ ಅಮೆರಿಕದಲ್ಲಿ ಮಗಳು ಓದುತ್ತಿದ್ದಾಳೆ ಎನ್ನುವುದು ಹೆಮ್ಮೆಯ ವಿಚಾರ ಎನಿಸುತ್ತಿತ್ತು. ಈಗ ಭಯವಾಗುತ್ತಿದೆ. ಅವಳಿಗೆ ಭಾರತಕ್ಕೆ ಹೊರಟು ಬರಲು ಸಹ ಆಗುತ್ತಿಲ್ಲ. ಇರುವ ಒಬ್ಬಳೇ ಮಗಳನ್ನು ಅಲ್ಲಿಗೆ ಕಳಿಸಬಾರದಿತ್ತು ಎಂದೆನಿಸುತ್ತಿದೆ’ ಎಂದು ತಮ್ಮ ಒತ್ತಡ ಹೇಳಿಕೊಂಡವರು ಪಾಂಡುರಂಗ. ಉತ್ತರ ಕನ್ನಡ ಮೂಲದ ಪಾಂಡುರಂಗ ಬೆಂಗಳೂರಿನಲ್ಲಿ ನೆಲೆನಿಂತು ಮೂವತ್ತು ವರ್ಷಗಳ ಮೇಲಾಗಿದೆ. ಮಗಳು ಅಮೆರಿಕದ ನ್ಯೂಜೆರ್ಸಿಯಲ್ಲಿ ಓದುತ್ತಿದ್ದಾಳೆ. ಅವಳಿಗೆ ಕೆಲಸದ ಒತ್ತಡ. ವಾರಕ್ಕೊಮ್ಮೆ ದೂರವಾಣಿ ಕರೆ ಮಾಡಿ ಮಾತನಾಡುತ್ತಾಳೆ. ಜೀವನದಲ್ಲಿ ಎಲ್ಲವೂ ಲಭ್ಯವಾಗಿದೆ ಎನ್ನುವಷ್ಟು ನೆಮ್ಮದಿ ಕಂಡಿರುವ ಪಾಂಡುರಂಗ ಅವರಿಗೆ ಆರ್ಥಿಕ ಅನಿವಾರ್ಯತೆಗಳೂ ಇಲ್ಲದಿರುವುದರಿಂದ ಸಭೆ, ಸಮಾರಂಭಗಳೆಂದು ಓಡಾಡಿಕೊಂಡಿರುತ್ತಾರೆ. ಬೆಂಗಳೂರಿನಲ್ಲೇ ಸೆಟಲ್ ಆಗಿ ಐವತ್ತು ವರ್ಷ ಸಂದರೂ ಬೇರೆ ದೇಶಗಳಿಗೆ ಮಕ್ಕಳನ್ನು ಕಳುಹಿಸದ ಸ್ನೇಹಿತರ ಕುರಿತು ಒಂದು ರೀತಿಯ ಅವಹೇಳನ ಮಾಡುತ್ತಿದ್ದ ಅವರಿಗೆ ಇದೀಗ ವಿದೇಶಕ್ಕಿಂತ ಭಾರತವೇ ಉತ್ತಮ ಎನಿಸತೊಡಗಿದೆ.
ಇದಕ್ಕೆ ಕಾರಣ, ಕೊರೋನಾ. ಕೊರೋನಾ ಸೋಂಕು ವಿದೇಶಗಳಲ್ಲಿ ಭೀಕರ ಸ್ವರೂಪ ತಾಳಿರುವುದನ್ನು ಟಿವಿಗಳಲ್ಲಿ ನೋಡುತ್ತಿರುವ ಪಾಂಡುರಂಗ ಅವರ ಆತಂಕ ಮೇರೆ ಮೀರಿದೆ. ದಿನವೂ ಕರೆ ಮಾಡಿ ಮಾತನಾಡಿದರೂ ಸಮಾಧಾನವಿಲ್ಲ. ಅವರ ಮಗಳು ರಕ್ಷಾ ಒಬ್ಬಳೇ ನೆಲೆಸಿದ್ದಾಳೆ. ಅವಳಿಗೆ ಬೇರೆ ಯಾರೂ ಜತೆಯಿಲ್ಲ. ಇನ್ನೂ ಮದುವೆಯಾಗಿಲ್ಲ. ಅಮೆರಿಕದ ಅಕ್ಕಪಕ್ಕದ ನಗರಗಳಲ್ಲೇ ಕಸಿನ್ಸ್ ನೆಲೆಸಿದ್ದರೂ ಅಲ್ಲೆಲ್ಲೂ ಹೋಗುವಂತಿಲ್ಲ. ಹೀಗಾಗಿ, ಅಲ್ಲಿ ಅವಳಿಗೂ ಅಮೆರಿಕ ಸಾಕಾಗಿದೆ. ಅಷ್ಟಕ್ಕೂ ಅವಳು ಅಲ್ಲಿಗೆ ಹೋಗಿದ್ದು ಅಪ್ಪನ ಒತ್ತಾಯದಿಂದ. ಅಮೆರಿಕಕ್ಕೆ ಕಾಲಿಡುತ್ತಿದ್ದಂತೆಯೇ ರಕ್ಷಾಳಿಗೆ ಅಲ್ಲಿನ ಶ್ರಮಜೀವನದ ಅರಿವಾಗಿತ್ತು. ಹುಷಾರಿಲ್ಲವೆಂದರೂ ಯಾರೊಬ್ಬರೂ ಸಹಾಯಕ್ಕೆ ಸಿಗದಿದ್ದುದರಿಂದ ಅಮೆರಿಕ ತಾನೆಣಿಸಿದಂತಿಲ್ಲ ಎನ್ನುವ ಭಾವನೆ, ಏಕಾಂಗಿತನ ಆರಂಭವಾಗಿತ್ತು. ಈಗಂತೂ ಕೊರೋನಾ ಭಯಕ್ಕೆ ಅವಳಿಗೆ ಅಲ್ಲಿ ಒಂದೊಂದು ದಿನ ಕಳೆಯುವುದೂ ಕಷ್ಟವಾಗಿದೆ. ಅಪ್ಪನ ಬಳಿ ಹೇಳಿಕೊಂಡರೆ ಟೆನ್ಷನ್ ಮಾಡಿಕೊಳ್ಳುತ್ತಾರೆಂದು ಅಮ್ಮನ ಬಳಿಕ ಆಗೀಗ ಅಲವತ್ತುಕೊಳ್ಳುತ್ತಾಳೆ. ಆದರೆ, ಅಮ್ಮ ತನಗೆ ಒತ್ತಡವಾದಾಗ ಅಪ್ಪನ ಬಳಿಯೇ ಹೇಳಿಕೊಳ್ಳುತ್ತಾಳೆ. ಹೀಗಾಗಿ, ಪಾಂಡುರಂಗ ಅವರಿಗೆ ಮಗಳ ಬಗ್ಗೆ ಇನ್ನಷ್ಟು ಚಿಂತೆ ಹೆಚ್ಚಾಗಿದೆ. ಈ ಕೊರೋನಾ ಕಾಲ ಯಾವಾಗ ಮುಗಿಯುತ್ತದೆಯೋ, ಅಲ್ಲಿಯವರೆಗೆ ತನ್ನ ಮಗಳು ಅಮೆರಿಕದಲ್ಲಿ ಬದುಕಿರುತ್ತಾಳೋ ಇಲ್ಲವೋ ಎನ್ನುವ ಅನುಮಾನವೂ ಕಾಡಿದೆ.
“ಎಲ್ಲಿಯೂ ಮನಸ್ಸು ನೆಡಲು ಆಗುತ್ತಿಲ್ಲ. ಮಗಳದ್ದೇ ಚಿಂತೆಯಾಗಿದೆ. ಮಗನ ಕೊರಗಿನಲ್ಲಿ ದಶರಥ ಸತ್ತನಂತೆ. ನಾನೂ ಮಗಳ ಗುಂಗಿನಲ್ಲಿ ಸತ್ತೇ ಹೋಗುತ್ತೇನೋ ಎನಿಸಿದೆ’ ಎಂದೆಲ್ಲ ದುಃಖ ತೋಡಿಕೊಂಡರು ಪಾಂಡುರಂಗ. ದೈನಂದಿನ ಹೊಟ್ಟೆಪಾಡಿನವರ ಚಿಂತೆ ಒಂದು ರೀತಿಯಾದರೆ, ಇದೊಂದು ರೀತಿಯ ಹಿಂಸೆ ಎನಿಸಿತು.

ಮತ್ತಷ್ಟು ಸುದ್ದಿಗಳು

Latest News

ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ: ಸಂಸದ ಸುಬ್ರಮಣಿಯನ್ ಸ್ವಾಮಿ ಶಂಕೆ, ತನಿಖೆಗೆ ಆಗ್ರಹ

newsics.com ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡವಿದೆಯಾ ಎಂಬ ಸಂಶಯವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ದುರಂತವಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ...

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಪ್ರಧಾನಿ...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...
- Advertisement -
error: Content is protected !!